ಬಿಹಾರ/ಪಾಟ್ನಾ: ಜೆಡಿಯು (ಜನತಾ ದಳ ಯುನೈಟೆಡ್) ಯುವ ಮುಖಂಡ ಸೌರಭ್ ಕುಮಾರ್‌ನನ್ನು ಬುಧವಾರ (ಏ.24) ತಡರಾತ್ರಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.
ಬಿಹಾರ ರಾಜಧಾನಿ ಪಾಟ್ನಾದ ಪನ್‌ಪುನ್‌ನಲ್ಲಿ ತಡ ರಾತ್ರಿ 33 ವರ್ಷದ ಸೌರಭ್ ಕುಮಾರ್ ಮೇಲೆ ದಾಳಿ ಕೋರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ತಡರಾತ್ರಿ ಸೌರಭ್ ಕುಮಾರ್ ಪರ್ಸಾ ಬಜಾರ್ ಗ್ರಾಮದಲ್ಲಿ ಸ್ನೇಹಿತ ಮದುವೆ ಸಮಾರಂಭದಿಂದ ವಾಪಾಸುಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ನಾಲ್ವರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡು ಸೌರಭ್ ಅವರ ತಲೆ ಭಾಗಕ್ಕೆ ಬಡಿದಿದ್ದು ಮರಣ ಹೊಂದಿದ್ದಾರೆ ಹಾಗೂ ಇವರ ಜೊತೆಯಲ್ಲಿದ್ದ ಸ್ನೇಹಿತ ಮುನ್ಮನ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಸೌರಭ್ ಕುಮಾರ್ ಅವರ ಮೇಲೆ ನಡೆದ ದಾಳಿಯ ಸಿಸಿ ಟಿವಿ ದೃಶ್ಯಗಳನ್ನಾಧರಿಸಿ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು : ಹಿಂದೂ, ಬೌದ್ಧ ಮತ್ತು ಸಿಖ್ ಧರ್ಮೀಯರನ್ನು ಹೊರತುಪಡಿಸಿ ಇತರ ಧರ್ಮಕ್ಕೆ ಮತಾಂತರಗೊಂಡವರು ಪರಿಶಿಷ್ಟ ಜಾತಿ (ಎಸ್‌ಸಿ) ಸ್ಥಾನಮಾನ…
ಮಡಿಕೇರಿ : ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದ ಬಳಿ ಮುಳ್ಳುಹಂದಿ ಪ್ರತ್ಯಕ್ಷವಾಗಿದೆ. ಓಡಾಡಲು ಕಷ್ಟವಾಗುವ ಸ್ಥಿತಿಯಲ್ಲಿದ್ದ ಈ ಮುಳ್ಳುಹಂದಿ…
ಹನೂರು : ತಾಲೂಕಿನ ಲೊಕ್ಕನಹಳ್ಳಿ ಗ್ರಾಮದ ಮನೋಹರ್ ಎಂಬುವರಿಗೆ ಸೇರಿದ 500ಕ್ಕೂ ಹೆಚ್ಚು ನಾಟಿ ಕೋಳಿಗಳಿಗೆ ರೋಗ ತಗುಲಿ ಮೃತಪಟ್ಟಿದ್ದರು,…
ಮುಂಬೈ : ‘ಕಾಂತಾರ’ ಸಿನಿಮಾದಲ್ಲಿ ದೈವದ ಕುರಿತು ವೇದಿಕೆ ಮೇಲೆ ಅನುಕರಣೆ ಮಾಡಿ ‘ಫೀಮೇಲ್ ಗೋಸ್ಟ್’ ಎಂದು ಕರೆದು ವಿವಾದಕ್ಕೆ…
ಸಿಕ್ಕಿಂ : ಉತ್ತರ ಸಿಕ್ಕಿಂನಲ್ಲಿ ಭಾರೀ ಮಳೆಯಿಂದ ಭೂಕುಸಿತ ಸಂಭವಿಸಿ, ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸುಮಾರು 200 ಪ್ರವಾಸಿಗರು ಚುಂಗ್‌ಥಾಂಗ್‌ನಲ್ಲಿ…
ವಾಷಿಂಗ್ಟನ್ : ಪಶ್ಚಿಮ ಏಪ್ಯಾ ಸಂಘರ್ಷ ಶಮನಕ್ಕೆ ನಡೆಯುತ್ತಿರುವ ಪ್ರಯತ್ನಗಳ ಮಧ್ಯೆ, ಟ್ರಂಪ್ ಆಡಳಿತ 15 ಅಂಶಗಳ ಪ್ರಸ್ತಾವನೆಯನ್ನು ಇರಾನ್…