ಹರಿಯಾಣ: ಈ ಹಿಂದೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಆಶಯಕ್ಕೆ ವಿರುದ್ಧವಾಗಿ ವಕ್ಫ್ ಕಾನೂನು ರೂಪಿಸಿದ್ದು ಕಾಂಗ್ರೆಸ್ ಪಕ್ಷ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಹರಿಯಾಣದ ಹಿಸಾರ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಸಂವಿಧಾನದ ಮೂಲ ಆಶಯವನ್ನು ಹಾಳು ಮಾಡುವಂತೆ ವಕ್ಫ್ ಕಾನೂನನ್ನು ಕಾಂಗ್ರೆಸ್ ರೂಪಿಸಿತ್ತು.
ಕಳೆದ 2013ರಲ್ಲಿ ಕಾಂಗ್ರೆಸ್ ವಕ್ಫ್ ಕಾಯ್ದೆಗೆ ತಿದ್ದುಪಡಿ ತಂದಿತ್ತು. ತನ್ನ ಮತ ಬ್ಯಾಂಕ್ ಅನ್ನು ತೃಪ್ತಿಪಡಿಸಿಕೊಳ್ಳಲು ತರಾತುರಿಯಲ್ಲಿ ತಿದ್ದುಪಡಿ ಮಾಡಿತ್ತು ಎಂದು ವಾಗ್ದಾಳಿ ನಡೆಸಿದರು.
ಇನ್ನು ಕಾಂಗ್ರೆಸ್ ಕೆಲ ಮೂಲಭೂತವಾದಿಗಳನ್ನು ಮಾತ್ರ ಖುಷಿಪಡಿಸಿದೆ. ಉಳಿದ ಸಮಾಜವು ಶೋಚನೀಯ, ಅವಿದ್ಯಾವಂತ ಮತ್ತು ಬಡವರಾಗಿಯೇ ಉಳಿದಿದೆ. ಕಾಂಗ್ರೆಸ್ಸಿನ ಈ ದುಷ್ಟ ನೀತಿಗೆ ದೊಡ್ಡ ಪುರಾವೆ ವಕ್ಫ್ ಕಾಯ್ದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಬಾಬಾ ಸಾಹೇಸ್ ಅಂಬೇಡ್ಕರ್ ಅವರನ್ನು ಪದೇ ಪದೇ ಅವಮಾನಿಸಿದ್ದು ಕಾಂಗ್ರೆಸ್. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಮಾಡಿದ್ದ ಮೋಸವನ್ನು ನಾವು ಮರೆಯಲು ಕೂಡ ಆಗಲ್ಲ. ಅಂಬೇಡ್ಕರ್ ಅವರನ್ನು ಎರಡು ಬಾರಿ ಚುನಾವಣೆಯಲ್ಲಿ ಸೋಲಿಸಿದರು ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದರು.
ಮೈಸೂರು : ಸಿಎಂ ಸಿದ್ದರಾಮಯ್ಯ ನಿನ್ನೆ(ಏ.24) ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ಮಾಡಿದ್ದಾರೆ. ಈ ಹಿಂದೆಯೂ ಯಡಿಯೂರಪ್ಪ,…
ಶ್ರೀನಗರ : ಪಹಲ್ಗಾಮ್ ಭಯೋತ್ಪಾಕ ದಾಳಿಯಲ್ಲಿ ಭಾಗಿಯಾಗಿದ್ದ ಎನ್ನಲಾದ ಭಯೋತ್ಪಾದಕ ಆಸಿಫ್ ಶೇಖ್‌ನ ಮನೆಯನ್ನು ಭಾರತೀಯ ಸೇನೆ ಸ್ಫೋಟಿಸಿದೆ. ಜಮ್ಮು…
ಮೈಸೂರು: ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೂ ಟೌನ್‌ಶಿಪ್ ನಿರ್ಮಾಣಕ್ಕೆ ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳುವುದನ್ನು ತೀವ್ರವಾಗಿ…
ಚಾಮರಾಜನಗರ : ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗುತ್ತದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಇಂತಹ ಮೌಢ್ಯಗಳೇ ಸಮಾಜದ ಪ್ರಗತಿಗೆ ಮಾರಕವಾಗಿದೆ.…
ಪ್ರಕಾಶ್ ರಾಜ್ (ನಟ, ಪ್ರಗತಿಪರ ಚಿಂತಕ) ದೆಹಲಿಯಲ್ಲಿದ್ದೆ. . . ಸಿನೆಮಾ ಒಂದರ ಚಿತ್ರೀಕರಣ. ರಾತ್ರಿಯೆಲ್ಲ ಶೂಟಿಂಗ್, ಹಗಲು ಬಿಡುವು.…
* ಘಟನಾ ಸ್ಥಳಕ್ಕೆ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯೆ ಸಂಕೇತ್ ಪೂವಯ್ಯ ಭೇಟಿ -ಕುಟುಂಬಸ್ಥರಿಗೆ ಸಾಂತ್ವನ ಸಿದ್ದಾಪುರ : ಇಲ್ಲಿನ…