ಶ್ರೀಹರಿಕೋಟ: ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋ ಸಂಸ್ಥೆಯೂ ೧೦೦ನೇ ಉಪಗ್ರಹ ಉಡಾಯಿಸುತ್ತಿದ್ದು, ನಾಳೆ ಬೆಳಿಗ್ಗೆ 6.23ಕ್ಕೆ ನಾವಿಕ್-02(ಎನ್‌ವಿಎಸ್-2) ಉಪಗ್ರಹ ಉಡಾಯಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ.
ಇಸ್ರೋ ಸಂಸ್ಥೆಯೂ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ಉಪಗ್ರಹವನ್ನು ಜಿಯೋಸಿಂಕ್ರನೈಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್(ಜಿಎಸ್‌ಎಲ್‌ವಿ) ಎಂಕೆ 2 ರಾಕೆಟ್ ಮೂಲಕ ಉಡಾವಣೆಗೊಳಿಸಲಾಗುತ್ತಿದೆ. ಈ ಉಡಾವಣೆಯೂ ಇಸ್ರೋದ 100ನೇ ಯೋಜನೆಯಾಗಿದೆ. ನೂತನ ಮೈಲುಗಲ್ಲನ್ನು ಸ್ಥಾಪಿಸಲಿದೆ.
ಈ ಹಿಂದೆ ಇಸ್ರೋ ಸಂಸ್ಥೆಯೂ 2023ರ ಮೇ 29 ರಂದು ಜಿಎಸ್‌ಎಲ್‌ವಿ-ಎಫ್12 ರಾಕೆಟ್ ಉಡಾಯಿಸಿತ್ತು. ಈ ರಾಕೆಟ್‌ಗೆ ಸುಮಾರು ̧2232 ಕೆಜಿ ತೂಕದ ಎನ್‌ವಿಎಸ್ಉ-01 ಪಗ್ರಹವನ್ನು ಜಿಯೋಸಿಂಕ್ರನಸ್ ಟ್ರಾನ್ಸ್‌ಫರ್ ಕಕ್ಷೆಗೆ ಅಳವಡಿಕೆ ಮಾಡಿತ್ತು. ಈ ಉಪಗ್ರಹದ ಬಗ್ಗೆ ಇಸ್ರೋ ಸಂಸ್ಥೆಯೂ ವಿವರಿಸುವಾಗ ಇದರಲ್ಲಿ ರುಬಿಡಿಯಂ ಅಟಾಮಿಕ್ ಕ್ಲಾಕ್ ಅಳವಡಿಸಲಾಗಿದೆ ಎಂದು ವರದಿ ನೀಡಿತ್ತು.
ಒಟ್ಟಾರೆಯಾಗಿ ಎನ್‌ವಿಎಸ್-02 ಭಾರತದ ನಾವಿಕ್ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಇದನ್ನು ಇಸ್ರೋ ಸಂಸ್ಥೆಯೂ ಎನ್‌ವಿಎಸ್-೦೧ರ ಯಶಸ್ಸಿನ ಆಧಾರದಲ್ಲಿ ನಿರ್ಮಾಣ ಮಾಡಿದ್ದು, ಅನೇಕ ತಾಂತ್ರಿಕ ಅಭಿವೃದ್ಧಿಗಳನ್ನು ಅಳವಡಿಸಿದೆ. ಹೀಗಾಗಿ ನಾವಿಕ್ ವ್ಯವಸ್ಥೆಯ ಸಾಮರ್ಥ್ಯ ಹಾಗೂ ಪ್ರದರ್ಶನಗಳನ್ನು ಬಹಳಷ್ಟು ಹೆಚ್ಚಿಸಲಿದೆ.
ನಾವಿಕ್-02 (ಎನ್‌ವಿಎಸ್-02) ಉಪಗ್ರಹದ ಬಗ್ಗೆ ಮಾಹಿತಿ
* ಈ ಉಪಗ್ರಹದ ತೂಕ ಎನ್‌ವಿಎಸ್-೦೧ರಷ್ಟು ಹೊಂದಿರಬಹುದು ಅಥವಾ ಅದಕ್ಕಿಂತ ಸ್ವಲ್ಪ ಕಡಿಮೆ ಹೊಂದಿರಬಹುದು ಎಂದು ಹೇಳಲಾಗುತ್ತಿದೆ.
* ಎನ್‌ವಿಎಸ್-02 ಕಕ್ಷೆಯನ್ನು ಸೇರಲು ಜಿಯೋಸಿಂಕ್ರನಸ್ ಟ್ರಾನ್ಸ್‌ಫರ್‌ಆರ್‌ಬಿಟ್(ಜಿಟಿಒ)ಗಳನ್ನು ಅಳವಡಿಸುವ ನಿರೀಕ್ಷೆಗಳಿವೆ.
* ಈ ಉಪಗ್ರಹದ ಯೋಜನಾ ಅವಧಿಯ 12 ವರ್ಷಗಳಿಗೂ ಹೆಚ್ಚು ಕಾಲ ಕಾರ್ಯಾಚರಿಸುವ ನಿರೀಕ್ಷೆ ಇದೆ.
ನಾವಿಕ್-02 ವಿಶೇಷತೆ ಏನು?
* ನಾವಿಕ್-02 ಉಪಗ್ರಹವು ಭಾರತದಲ್ಲಿ ಅಭಿವೃದ್ಧಿ ಪಡಿಸಿರುವ ರುಬಿಡಿಯಂ ಅಟಾಮಿಕ್ ಕ್ಲಾಕ್ ಅಂದರೆ ದೇಶೀಯ ನಿರ್ಮಾಣದ ಅಟಾಮಿಕ್ ಕ್ಲಾಕ್‌ಅನ್ನು ಹೊಂದಿದೆ. ಅಲ್ಲದೇ ತನ್ನ ಸಂಕೇತಗಳನ್ನು ಎಲ್1 ಬ್ಯಾಂಡಿನಲ್ಲಿ ರವಾನಿಸುತ್ತದೆ.
* ಈ ಉಪಗ್ರಹ ನ್ಯಾವಿಗೇಶನ್ ವ್ಯವಸ್ಥೆಗಳೊಡನೆ ನಾವಿಕ್‌ನ ಹೊಂದಾಣಿಕೆಯನ್ನು ಕೂಡ ಅಧಿಕಗೊಳಿಸುತ್ತದೆ.
* ಎನ್‌ವಿಎಸ್-02 ಭಾರತದ ಯೋಜನೆಯ ಜಿಎಸ್‌ಎಲ್‌ವಿ-ಎಫ್ 15ನೇ ಹಾರಾಟವಾಗಲಿದೆ.
* ಭಾರತೀಯ ನಿರ್ಮಾಣದ ಕ್ರಯೋಜನಿಕ್ ಇಂಜಿನ್ ಬಳಸಿ ನಡೆಸಲಿರುವ 8ನೇ ಕಾರ್ಯಾಚರಣೆ ಹಾರಾಟವಾಗಲಿದೆ.
* ಎನ್‌ವಿಎಸ್-02 ಉಪಗ್ರಹವನ್ನು ಜಿಎಸ್‌ಎಲ್‌ವಿ-ಎಫ್ 15ನೇ ಮೂಲಕ ಹಾರಾಟ ಮಾಡುವುದರಿಂದ ನಿಖರವಾಗಿ ಮಿಲಿಟರಿ ಕಾರ್ಯಾಚರಣೆಗಳು ಹಾಗೂ ಕಾರ್ಯತಂತ್ರದ ಉದ್ದೇಶಗಳಿಗೆ ಪ್ರಯೋಜನವಾಗಲಿದೆ.
* ಎನ್‌ವಿಎಸ್-02ನಲ್ಲಿ ರುಬಿಡಿಯಂ ಅಟಾಮಿಕ್ ಕ್ಲಾಕ್ ಅತ್ಯಂತ ನಿಖರವಾದ ಒಂದು ಉಪಕರಣವಾಗಿದೆ. ಇದು ರುಬಿಡಿಯಂ-87 ಅಣುಗಳ ಕಂಪನವನ್ನು ಅಳೆಯುವ ಮೂಲಕ ಸಮಯವನ್ನು ಲೆಕ್ಕಾಚಾರ ಮಾಡುತ್ತದೆ.
* ಎನ್‌ವಿಎಸ್-02 ಉಪಗ್ರಹವೂ ಎರಡನೇ ತಲೆಮಾರಿನ ನಾವಿಕ್ ವ್ಯವಸ್ಥೆಗಳನ್ನು ಹೊಂದಿದ್ದು, ಬಲವಾದ ಎನ್‌ಕ್ರಿಪ್ಷನ್ ವ್ಯವಸ್ಥೆಯನ್ನು ಹೊಂದಿದೆ.
ಕೇಪ್ ಕೆನವೆರೆಲ್: ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 9 ತಿಂಗಳ ಕಾಲ ಸುದೀರ್ಘ ಕಾಲದ ಅನುಭವ ಹೊಂದಿರುವ ಸುನಿತಾ ವಿಲಿಯಮ್ಸ್ ನಿವೃತ್ತರಾಗಿದ್ದಾರೆ.…
ಮಹಾದೇಶ್ ಎಂ ಗೌಡ ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ದಾಳಿ…
ರಾಮನಗರ: ತೆಂಗಿನ ಮರ ಹತ್ತಿ ಕೆಳಗೆ ಬಿದ್ದ ಸ್ನೇಹಿತನನ್ನು ಕೆರೆಯಲ್ಲಿ ಮುಳುಗಿಸಿ ಹತ್ಯೆ ಮಾಡಿದ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ…
ಮಹಾದೇಶ್ ಎಂ ಗೌಡ ಹನೂರು: ಮಳೆಯನ್ನೇ ಆಶ್ರಯಿಸಿ ಬೆಳೆಯಬೇಕಿದ್ದ ಸ್ಥಿತಿ, ಕುಸಿಯುತ್ತಿರುವ ಅಂತರ್ಜಲದಿಂದ ಪಡಿಪಟಾಲು ಪಡುತ್ತಿದ್ದ ರೈತರ ಕಷ್ಟ ಕೊನೆಗೂ…
ಪಂಜು ಗಂಗೊಳ್ಳಿ ನೂರಾರು ಜನ ವಿಶೇಷಚೇತನರಿಗೆ ಫೋಟೋಗ್ರಫಿ ತರಬೇತಿ ಎವ್ಗನ್ ಬಾವ್ಚಾರ್ ೧೯೪೬ರಲ್ಲಿ ಸ್ಲೊವೇನಿಯಾ (ಆಗ ಯುಗೊಸ್ಲೇವಿಯಾ)ದಲ್ಲಿ ಹುಟ್ಟಿದರು. ಏಳು…
ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಅಕ್ರಮ ಸಿಗರೇಟ್ ಮಾರುಕಟ್ಟೆಯು ವಾರ್ಷಿಕವಾಗಿ ಸುಮಾರು ರೂ.೧೫,೦೦೦ ಕೋಟಿಗೂ ಅಧಿಕ ನಷ್ಟವನ್ನು ಸರ್ಕಾರಕ್ಕೆ ಉಂಟುಮಾಡುತ್ತಿದೆ.…