ಜೆರುಸೇಲಂ: ಬಂದರ್ ಅಬ್ಬಾಸ್‌ನಲ್ಲಿ ಅಮೇರಿಕಾ-ಇಸ್ರೇಲಿ ದಾಳಿಯಲ್ಲಿ ಇಸ್ಲಾಮಿಕ ರೆವಲ್ಯೂಷನರಿ ಗಾರ್ಡ್ ಕಾಪ್ಸ್ ನೌಕಾ ಕಮಾಂಡರ್ ಅಲಿರೆಜಾ ತಂಗ್ ಸಿರಿ ಮೃತಪಟ್ಟಿದ್ದಾರೆ.
ಹಾರ್ಮುಜ್ ಜಲಸಂಧಿಯನ್ನು ಮುಚ್ಚಲು ಕಾರಣರಾದ ಪ್ರಮುಖ ವ್ಯಕ್ತಿ ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಮೂಲಗಳನ್ನು ಆಧರಿಸಿ ವರದಿ ಮಾಡಲಾಗಿದೆ. ದಾಳಿಯ ಬಗ್ಗೆ ಇರಾನ್ ಅಥವಾ ಇಸ್ರೇಲಿ ಮಿಲಿಟರಿಯಿಂದ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.
ಅಮೇರಿಕಾ-ಇಸ್ರೇಲ್ ದಾಳಿಯಲ್ಲಿ ಹಲವು ಮಂದಿ ನಾಯಕರು ಹತ್ಯೆಯಾಗಿದ್ದರೂ ಅಲಿರೆಜಾ ತಂಗ್‌ಸಿರಿ ಬದುಕುಳಿದಿದ್ದರು. 2018ರಿಂದ ನೌಕಾ ಕಮಾಂಡರ್ ಸ್ಥಾನದಲ್ಲಿದ್ದ ಇವರು ಹಾರ್ಮುಜ್ ಜಲಸಂಧಿಯನ್ನು ಮುಚ್ಚುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಈ ಜಲಸಂಧಿಯಲ್ಲಿ ಸಾಮಾನ್ಯವಾಗಿ ಪ್ರತಿದಿನ 120 ಕಾರ್ಗೋ ಶಿಪ್‌ಗಳು ಸಂಚರಿಸುತ್ತವೆ. ಆದರೆ ಮಾರ್ಚ್.1ರಿಂದ 25ರವರೆಗೆ ಕೇವಲ 155 ಹಡಗುಗಳು ಸಂಚರಿಸಿವೆ.
ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದ ಕುರಿತು ಪ್ರಧಾನಿ ನರೇಂದ್ರ ಮೋದಿ ನಾಳೆ ಸಂಜೆ ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ವಿಡಿಯೋ…
ನವದೆಹಲಿ: ಕೇಂದ್ರ ಸರ್ಕಾರವು ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯಿಂದ ಶೌರ್ಯ ಪ್ರಶಸ್ತಿ ಪಡೆದವರಿಗೆ ಜೀವಿತಾವಧಿಯ ರೈಲು ಪ್ರಯಾಣವನ್ನು ಉಚಿತವಾಗಿ ನೀಡಲು…
ಅಂಕಾರ: ಇಸ್ತಾನ್‌ಬುಲ್ ಬಳಿಯ ಕಪ್ಪು ಸಮುದ್ರದಲ್ಲಿ ಟರ್ಕಿ ನಿರ್ವಹಿಸುತ್ತಿದ್ದ ಕಚ್ಚಾ ತೈಲ ಟ್ಯಾಂಕರ್ ಹಡಗಿನ ಮೇಲೆ ದಾಳಿ ನಡೆದಿದೆ. ಕಪ್ಪು…
ಮಂಗಳೂರು: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆಯೂ ನವಮಂಗಳೂರು ಬಂದರಿಗೆ ಎಲ್‌ಪಿಜಿ ಹೊತ್ತ ಹಡಗು ಆಗಮಿಸಿದೆ. 16 ಸಾವಿರ ಮೆಟ್ರಿಕ್…
ನವದೆಹಲಿ: ಜ್ವರ ಮತ್ತು ಸೋಂಕು ಹಿನ್ನೆಲೆಯಲ್ಲಿ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಾಗಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ…
ಬೆಂಗಳೂರು: ಮಾರ್ಚ್.30ಕ್ಕೆ ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆ ಮಾರ್ಚ್.31ಕ್ಕ ಮುಂದೂಡಿಕೆ ಮಾಡಲಾಗಿದೆ. ಈ ಕುರಿತು ಪರೀಕ್ಷಾ ಬೋರ್ಡ್ ಮಾಹಿತಿ ನೀಡಿದ್ದು,…