ಚೆನ್ನೈ: ದೌರ್ಜನ್ಯ ಎಸಗುವ ಗಂಡನನ್ನು ಮನೆಯಿಂದ ಹೊರಹಾಕುವುದರಿಂದ ಮಾತ್ರವೇ ಮನೆಯಲ್ಲಿ ಶಾಂತಿ ಮೂಡುತ್ತದೆ ಎನ್ನುವುದು ಖಾತ್ರಿಯಾದರೆ ಆತನಿಗೆ ಪರ್ಯಾಯ ವಸತಿ ಇದೆಯೇ ಅಥವಾ ಇಲ್ಲವೇ ಎಂಬುದನ್ನೂ ಲೆಕ್ಕಿಸದೆ ನ್ಯಾಯಾಲಯಗಳು ಅವನನ್ನು ಮನೆಯಿಂದ ಹೊರಹಾಕುವ ಆದೇಶ ನೀಡಬೇಕು ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ಮನೆಯಲ್ಲಿ ಪತಿ ಇರುವುದನ್ನು ಕಂಡು ಹೆದರುವ ಮಹಿಳೆಯರ ಬಗ್ಗೆ ನ್ಯಾಯಾಲಯಗಳು ಅಸಡ್ಡೆ ತೋರಬಾರದು ಎಂದು ನ್ಯಾಯಮೂರ್ತಿ ಆರ್ ಎನ್ ಮಂಜುಳಾ ತಿಳಿಸಿದರು.
“ಗಂಡನನ್ನು ಮನೆಯಿಂದ ಹೊರಹಾಕುವುದರಿಂದ ಮಾತ್ರ ಮನೆಯಲ್ಲಿ ಶಾಂತಿ ನೆಲೆಸುತ್ತದೆ ಎನ್ನುವುದೇ ಏಕೈಕ ಮಾರ್ಗವಾಗಿದ್ದರೆ ಪ್ರತಿವಾದಿ ತನ್ನದೇ ಆದ ಇತರ ವಸತಿ ಸೌಕರ್ಯ ಹೊಂದಿದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನೂ ಪರಿಗಣಿಸದೆ ನ್ಯಾಯಾಲಯಗಳು ಆದೇಶ ನೀಡಬೇಕು. ಅವರಿಗೆ ಪರ್ಯಾಯ ವಸತಿ ವ್ಯವಸ್ಥೆ ಇದ್ದರೆ ಒಳ್ಳೆಯದು. ಆದರೆ ಅದು ಇಲ್ಲದಿದ್ದರೆ ಅಂತಹ ವಸತಿ ವ್ಯವಸ್ಥೆ ಮಾಡಿಕೊಳ್ಳುವುದು ಅವರಿಗೆ ಬಿಟ್ಟದ್ದು” ಎಂದು ನ್ಯಾಯಾಲಯ ಹೇಳಿತು.
ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಮಹಿಳೆಯರಿಗೆ ರಕ್ಷಣೆ ನೀಡುವ ಆದೇಶಗಳು ಪ್ರಾಯೋಗಿಕ ಮತ್ತು ಕಾರ್ಯಸಾಧುವಾಗಿರಬೇಕು. ಮಹಿಳೆ ತನ್ನ ಮನೆಯೊಳಗೆ ಸುರಕ್ಷಿತವಾಗಿದ್ದಾಳೆ ಎಂಬದನ್ನು ಖಚಿತಪಡಿಸಿಕೊಳ್ಳಲು ಸಾಮಾನ್ಯವಾಗಿ ಇಂತಹ ರಕ್ಷಣಾ ಆದೇಶಗಳನ್ನು ರವಾನಿಸಲಾಗುತ್ತದೆ. ಮಹಿಳೆ ಗಂಡನ ಇರುವಿಕೆಯಿಂದ ಹೆದರಿ ಚೀರುವಂತಹ ಸನ್ನಿವೇಶವಿದ್ದರೆ ನ್ಯಾಯಾಲಯಗಳು ಹೆಂಡತಿಗೆ ಕಿರುಕುಳ ಕೊಡದಂತೆ ಆತನಿಗೆ ಹೇಳಿದರಷ್ಟೇ ಸಾಲದು. ಬದಲಿಗೆ, ಆತ ಮನೆಯಲ್ಲಿರಲು ಅವಕಾಶ ನೀಡಬಾರದು ಎಂದು ನ್ಯಾಯಮೂರ್ತಿಯವರು ಅಭಿಪ್ರಾಯಪಟ್ಟರು.
ನಿಂದಿಸುವ ಮತ್ತು ಅಶಿಸ್ತಿನಿಂದ ವರ್ತಿಸುವ ತನ್ನ ಗಂಡನನ್ನು ಮನೆ ತೊರೆಯುವಂತೆ ಆದೇಶಿಸಲು ನಿರಾಕರಿಸಿದ್ದ ಜಿಲ್ಲಾ ನ್ಯಾಯಾಲಯವೊಂದರ ಆದೇಶವನ್ನು ವೃತ್ತಿಯಲ್ಲಿ ವಕೀಲರಾಗಿರುವ ಮಹಿಳೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ತನ್ನ ಮತ್ತು ತನ್ನ ಕೆಲಸದ ಬಗ್ಗೆ ಗಂಡನ ವರ್ತನೆ ಉತ್ತಮವಾಗಿಲ್ಲ. ಆತ ಆಗಾಗ್ಗೆ ತನ್ನನ್ನು ನಿಂದಿಸುತ್ತಾನೆ ಮತ್ತು ಮನೆಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸುತ್ತಾನೆ ಎಂದು ಆಕೆ ದೂರು ನೀಡಿದ್ದರು.
ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…
ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…
ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…
ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…
ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…
ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…