ದೇಶ- ವಿದೇಶ

ನಾನು ಕ್ಷಣಾರ್ಧದಲ್ಲಿ ಯುದ್ಧ ನಿಲ್ಲಿಸಬಲ್ಲೆ : ಪಾಕ್-ಅಘ್ಗನ್‌ ಯುದ್ಧದ ಬಗ್ಗೆ ಟ್ರಂಪ್‌

ವಾಷಿಂಗ್ಟನ್‌ : ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಭೀಕರ ಸಂಘರ್ಷ ಮುಂದುವರೆದಿದೆ. ಶನಿವಾರ ಪಾಕಿಸ್ತಾನವು ಅಫ್ಘಾನಿಸ್ತಾನದಲ್ಲಿನ ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಹೊಸ ವಾಯುದಾಳಿಗಳನ್ನು ಪ್ರಾರಂಭಿಸಿದೆ. ಶುಕ್ರವಾರ ಮುಂಜಾನೆ ಮಿರ್ ಅಲಿಯಲ್ಲಿರುವ ಖಡ್ಡಿ ಕೋಟೆಯ ಮೇಲಿನ ದಾಳಿಯ ಹೊಣೆಯನ್ನು ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ ಹಫೀಜ್ ಗುಲ್ ಬಹದ್ದೂರ್ ಗುಂಪು ಹೊತ್ತುಕೊಂಡಿತ್ತು. ಈ ನಡುವೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಶಮನಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಪ್ರವೇಶಿಸಿದ್ದಾರೆ.

ಇದನ್ನು ಓದು: ಮೋದಿಗೆ ಟ್ರಂಪ್ ಕಂಡರೆ ಭಯ : ರಾಹುಲ್ ಗಾಂಧಿ ಟೀಕೆ

ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, ಉಭಯ ದೇಶಗಳು ಬಯಸಿದರೆ ಸಂಘರ್ಷವನ್ನು ಸುಲಭವಾಗಿ ಪರಿಹರಿಸಬಲ್ಲೆ ಎಂದು ಹೇಳಿದರು. ಇದು ಬಹುತೇಕ ಕೊನೆಯ ಆಯ್ಕೆಯಾಗಿದೆ. ಇನ್ನು ಉಭಯ ದೇಶಗಳ ನಡುವೆ ಯುದ್ಧ ನಡೆಯುತ್ತಿದೆ ಎಂದು ಅವರು ನಂಬುತ್ತಾರೆ. ನಾನು ಅದನ್ನು ಪರಿಹರಿಸಬೇಕಾದರೆ, ಅದು ನನಗೆ ಸುಲಭ. ಈ ಮಧ್ಯೆ, ನಾನು ಅಮೆರಿಕವನ್ನು ನಡೆಸಬೇಕು. ಆದರೆ ನಾನು ಯುದ್ಧಗಳನ್ನು ಪರಿಹರಿಸಲು ಇಷ್ಟಪಡುತ್ತೇನೆ. ಟ್ರಂಪ್ ಪ್ರಕಾರ, ಅಫ್ಘಾನಿಸ್ತಾನ-ಪಾಕಿಸ್ತಾನ ಸಂಘರ್ಷದಂತಹ ದಶಕಗಳಷ್ಟು ಹಳೆಯದಾದ ವಿವಾದವನ್ನು ಪರಿಹರಿಸುವುದು ಅವರಿಗೆ ಕಷ್ಟಕರವಾದ ಕೆಲಸವಲ್ಲವಂತೆ. ಪ್ರಾಣ ಮತ್ತು ಆಸ್ತಿಪಾಸ್ತಿ ನಷ್ಟವನ್ನು ತಡೆಗಟ್ಟುವಲ್ಲಿ ತಾನು ಹೆಮ್ಮೆಪಡುತ್ತೇನೆ ಎಂದು ಅವರು ಮತ್ತಷ್ಟು ಹೇಳಿದರು. ಏಕೆ ಗೊತ್ತಾ? ಜನರು ಸಾಯುವುದನ್ನು ತಡೆಯುವುದು ನನಗೆ ಇಷ್ಟ. ನಾನು ಲಕ್ಷಾಂತರ ಜೀವಗಳನ್ನು ಉಳಿಸಿದ್ದೇನೆ ಮತ್ತು ಈ ಯುದ್ಧದಲ್ಲಿ ನಾನು ಯಶಸ್ವಿಯಾಗುತ್ತೇವೆ ಎಂದು ನಾನು ಭಾವಿಸುತ್ತೇನೆ ಎಂದರು.

ಆಂದೋಲನ ಡೆಸ್ಕ್

Recent Posts

ಅತಿದೊಡ್ಡ ದರೋಡೆ : ಚೋರ್ಲಾ ಘಾಟ್‌ನಲ್ಲಿ 400 ಕೋಟಿ ನಗದು ಕಂಟೇನರ್‌ಗಳ ಹೈಜಾಕ್‌!

ಬೆಳಗಾವಿ : ಕರ್ನಾಟಕ-ಗೋವಾ-ಮಹಾರಾಷ್ಟ್ರ ಗಡಿ ಪ್ರದೇಶದಲ್ಲಿ ದೇಶದ ಇತಿಹಾಸದಲ್ಲೇ ಅತಿದೊಡ್ಡ ದರೋಡೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ…

16 mins ago

ಲೈಕ್‌,ಫಾಲೋವರ್ಸ್‌ ಕ್ರೇಜ್‌ಗೆ ಬೈಕ್‌ ವೀಲಿಂಗ್‌ : ಓರ್ವ ಅಪ್ರಾಪ್ತ ಬಂಧನ

ಹುಣಸೂರು : ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುವ ಉದ್ದೇಶದಿಂದ ಅಪಾಯಕಾರಿ ಬೈಕ್ ವೀಲಿಂಗ್ ಮಾಡಿದ 17 ವರ್ಷದ ಅಪ್ರಾಪ್ತ ಯುವಕನನ್ನು…

52 mins ago

ಇಂದು ರಾಷ್ಟ್ರೀಯ ಮತದಾರರ ದಿನ : ನನ್ನ ಭಾರತ, ನನ್ನ ಮತ.. ಏನಿದರ ವಿಶೇಷತೆ?

ಹೊಸದಿಲ್ಲಿ : ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಈ ವ್ಯವಸ್ಥೆಯ ಜೀವಾಳವೇ ಮತದಾರ. ಪ್ರತಿ ವರ್ಷ ಜನವರಿ 25…

2 hours ago

ಓದುಗರ ಪತ್ರ: ಪೌರ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಿ

ಮೈಸೂರಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪೌರಕಾರ್ಮಿಕರು ಸಮವಸ್ತ್ರ, ಗುಣಮಟ್ಟದ ಬೆಳಗಿನ ಉಪಾಹಾರ ಮೊದಲಾದ ಸೌಲಭ್ಯಗಳಿಲ್ಲದೇ ಬವಣೆ ಪಡುತ್ತಿರುವುದು, ನಗರ ಪಾಲಿಕೆಯಲ್ಲಿ ೮೪…

6 hours ago

ಓದುಗರ ಪತ್ರ: ಪರೀಕ್ಷೆ ವೇಳೆ ಆರೋಗ್ಯ ಏರುಪೇರಾದರೆ ಬದಲಿ ವ್ಯವಸ್ಥೆ ಕಲ್ಪಿಸಿ

ದೇಶದ ಪ್ರಗತಿಗೆ ಶಿಕ್ಷಣ ಪ್ರಮುಖವಾಗಿದೆ. ಶಾಲಾ, ಕಾಲೇಜು ಹಂತದ ಪರೀಕ್ಷೆಗಳು ಮತ್ತು ಸರ್ಕಾರಿ ಹುದ್ದೆಗಳ ನೇಮಕಾತಿಗೆ ನಡೆಯುವ ಪರೀಕ್ಷಾ ಕೊಠಡಿಯಲ್ಲಿ…

6 hours ago

ಓದುಗರ ಪತ್ರ: ಅಂಚೆ ಕಚೇರಿ ಚಲನ್‌ಗಳು ಕನ್ನಡದಲ್ಲಿರಲಿ

ಅಂಚೆ ಕಚೇರಿಗಳಲ್ಲಿ ಗ್ರಾಹಕರು ಹಣ ಕಟ್ಟುವ ಉಳಿತಾಯ ಖಾತೆ, ಆರ್‌ಡಿ , ಪಿಪಿಎಫ್, ಎಂಐಎಸ್ ಹಾಗೂ ಅಂಚೆ ಕಚೇರಿಯ ವಿವಿಧ…

6 hours ago