ವಾಷಿಂಗ್ಟನ್ : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ಶೃಂಗಸಭೆಯ ದಿನದಂದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಹೇಳಿದ್ದಾರೆ. ಅಲ್ಲದೆ ಭಾರತ, ರಷ್ಯಾದಿಂದ ತೈಲ ಖರೀದಿಯ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.
ಅಮೆರಿಕದ ಯಾವುದೇ ಮಧ್ಯಸ್ಥಿಕೆ ಇಲ್ಲದೆ ಭಾರತ ಮತ್ತು ಪಾಕಿಸ್ತಾನ ಮಿಲಿಟರಿಗಳ ನಡುವಿನ ನೇರ ಮಾತುಕತೆಯ ನಂತರ ಯುದ್ಧ ನಿಲ್ಲಿಸಲಾಯಿತು ಎಂದು ಹೊಸದಿಲ್ಲಿ ಸಮರ್ಥಿಸಿಕೊಳ್ಳುತ್ತಿದೆ.
‘ಭಾರತ, ಪಾಕಿಸ್ತಾನ ಯುದ್ಧ ಸೇರಿದಂತೆ ನಾನು ಐದು ಯುದ್ಧಗಳನ್ನು ಅವುಗಳ ಅಂತ್ಯದವರೆಗೆ ಮಾತುಕತೆ ನಡೆಸಿದ್ದೇನೆ ಮತ್ತು ಆ ಯುದ್ಧಗಳು ಕಠಿಣವಾಗಿದ್ದವು…ʼ ಎಂದು ಶುಕ್ರವಾರ ಅಲಾಸ್ಕಾದ ಆಂಕಾರೇಜ್‌ನಲ್ಲಿ ಪುಟಿನ್ ಅವರೊಂದಿಗೆ ನಡೆದ ಉನ್ನತ ಮಟ್ಟದ ಶೃಂಗಸಭೆಯ ಬಳಿಕ ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಹೇಳಿದ್ದಾರೆ.
ಈ ಮಧ್ಯೆ, ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಯಾವುದೇ ಒಪ್ಪಂದವಿಲ್ಲದೆ ಉಭಯ ನಾಯಕರ ನಡುವಿನ ಸಭೆ ಅಂತ್ಯಗೊಂಡಿದೆ.
‘ನೀವು ಭಾರತ ಮತ್ತು ಪಾಕಿಸ್ತಾನವನ್ನು ಒಮ್ಮೆ ನೋಡಿ. ಅವರು ವಿಮಾನಗಳನ್ನು ಗಾಳಿಯಲ್ಲಿ ಹೊಡೆದುರುಳಿಸಿದ್ದರು. ಆರರಿಂದ ಏಳು ವಿಮಾನಗಳು ಕೆಳಕ್ಕುರುಳಿದ್ದವು. ಅವರು ಪರಮಾಣು ಯುದ್ಧಕ್ಕೂ ಮುಂದಾಗಿದ್ದರು. ಆದರೆ ನಾನು ಸಮಸ್ಯೆಯನ್ನು ಬಗೆಹರಿಸಿದೆನುʼ ಎಂದು ಟ್ರಂಪ್ ಹೇಳಿದ್ದಾರೆ.
ಯುದ್ಧಗಳು ‘ತುಂಬಾ ಕೆಟ್ಟವು‘ ಎಂದು ಒತ್ತಿ ಹೇಳಿದ ಟ್ರಂಪ್, ‘ಅವುಗಳನ್ನು ಕೊನೆಗೊಳಿಸುವ, ಜನರನ್ನು ಒಟ್ಟುಗೂಡಿಸುವ ಸಾಮರ್ಥ್ಯʼ ತನಗೆ ಇದೆ ಎಂದು ತೋರುತ್ತದೆ. ಇದಕ್ಕಾಗಿ ನಾನು ‘ಯುನೈಟೆಡ್ ಸ್ಟೇಟ್ಸ್‌ನ ಶಕ್ತಿಯನ್ನುʼ ಬಳಸುತ್ತಿದ್ದೇನೆ ಎಂದು ಟ್ರಂಪ್ ತಿಳಿಸಿದ್ದಾರೆ.
ಮೈಸೂರು: ರಾಜ್ಯ ಬಜೆಟ್‌ನಲ್ಲಿ ಕನ್ನಡ ಶಾಲೆಗಳನ್ನು ಕಡೆಗಣನೆ ಮಾಡಿದ್ದಾರೆ ಎಂದು ಆರೋಪಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಮಾರ್ಚ್.12ರಂದು…
ಮೈಸೂರು: ಮಕ್ಕಳಿಗೆ ಮೊಬೈಲ್ ಬಳಕೆ ನಿಷೇಧ ಸರಿಯಲ್ಲ. ಸರ್ಕಾರದ ನಡೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್…
ಕಲಬುರ್ಗಿ: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೋದಿ ಮೂಗು ಹಿಡಿದುಕೊಂಡು ಕಂಟ್ರೋಲ್ ಮಾಡುತ್ತಿದ್ದಾನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ…
ಹಾಸನ: ಹೃದಯಾಘಾತದಿಂದ ಆರೋಗ್ಯ ಇಲಾಖೆ ನೌಕರ ಸಾವನ್ನಪ್ಪಿರುವ ಘಟನೆ ಹಾಸನ ಹೊರವಲಯದ ಗವೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ದೇವಾನಂದ್ ಎಂಬುವವರೇ ಮೃತಪಟ್ಟ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಉಡುತೊರೆ ಹಳ್ಳ ಜಲಾಶಯ ಏತ ನೀರಾವರಿ ಯೋಜನೆ ಹಾಗೂ…
ಟೆಹರಾನ್: ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೇರಿಕಾ ದಾಳಿ ಮುಂದುವರಿಸಿದ್ದು, ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದೆ. ಇರಾನ್‌ನ ಬೀದಿ ಬೀದಿಗಳಲ್ಲಿ ಬೆಂಕಿ…