ದೆಹಲಿ : ಮನೆ ಮನೆಗಳಲ್ಲಿ, ಕಚೇರಿ, ಐತಿಹಾಸಿಕ ಕಟ್ಟಡ, ಸ್ಮಾರಕ, ವಾಹನ ಸೇರಿದಂತೆ ಎಲ್ಲೆಡೆ ತಿರಂಗ ಹಾರಾಡಿದೆ. ಆದರೆ ಯುವಕ ತನ್ನ ಜಾಗ್ವಾರ್ ಕಾರನ್ನು ತಿರಂಗ ಪೈಂಟ್ ಮಾಡಿಸಿಕೊಂಡಿದ್ದಾನೆ. ಸಿದ್ಧಾರ್ಥ್ ದೋಶಿ ತನ್ನ 71.60 ಲಕ್ಷ ರೂಪಾಯಿ ಜಾಗ್ವಾರ್ ಕಾರನ್ನು 2 ಲಕ್ಷ ರೂಪಾಯಿ ನೀಡಿ ಪೈಂಟ್ ಮಾಡಿಸಲಾಗಿದೆ. ಕೇಸರಿ, ಬಿಳಿ ಹಸಿರು ಬಣ್ಣ ಪೈಂಟ್ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಹರ್ ಘರ್ ತಿರಂಗ ಅಭಿಯಾನಕ್ಕೆ ಬೆಂಬಲ ನೀಡಲು ಈ ರೀತಿ ಮಾಡಿರುವುದಾಗಿ ಹೇಳಿದ್ದಾನೆ. ಸೂರತ್ ಮೂಲದ ಸಿದ್ದಾರ್ಥ್ ದೋಶಿ ತನ್ನ ಕಾರಿಗೆ ತಿರಂಗ ಪೈಂಟ್ಸ್ ಹಾಕಿಸಿಕೊಂಡು ಸೂರತ್‌ನಿಂದ ನೇರವಾಗಿ ದೆಹಲಿ ತಲುಪಿದ್ದಾನೆ. ಬಳಿಕ ಸಂಸತ್ ಮುಂಭಾಗದಲ್ಲಿ ತನ್ನತಿರಂಗ ಕಲರ್ ಕಾರಿನಲ್ಲಿ ತಿರುಗಾಡಿದ್ದಾನೆ.
ಅಜಾದಿ ಕಾ ಅಮೃತ ಮಹೋತ್ಸವ ಸಂಭ್ರಮದಲ್ಲಿ ಸಿದ್ದಾರ್ಥ್ ಗುಜರಾತ್‌ನ ಸೂರತ್‌ನಲ್ಲಿ ತಿರಂಗ ಪೈಂಟ್ಸ್ ಮಾಡಿಸಿಕೊಂಡಿದ್ದಾನೆ. ಬಳಿಕ ಸೂರತ್‌ನಿಂದ ದೆಹಲಿಗೆ ಅಂದರೆ 1157 ಕಿಲೋಮೀಟರ್ ತನ್ನ ಜಾಗ್ವಾರ್ ಕಾರಿನಲ್ಲಿ ಪ್ರಯಾಣ ಮಾಡಿದ್ದಾನೆ. ತನ್ನ ಸ್ನೇಹಿತನ ಜೊತೆ ಪ್ರಯಾಣ ಮಾಡಿದ ಸಿದ್ದಾರ್ಥ್ ದಾರಿಯುದ್ದಕ್ಕೂ ತಿರಂಗ ಹಾರಾಡಿಸುತ್ತಾ ಪ್ರಯಾಣ ಮಾಡಿದ್ದಾರೆ. ದೆಹಲಿಯ ಸಂಸತ್ ಭವನದ ಮುಂದೆ ಜಾಗ್ವಾರ್ ಕಾರಿನಲ್ಲಿ ತಿರುಗಾಡಿ ತನ್ನ ಸಂತಸ ಹಂಚಿಕೊಂಡಿದ್ದಾನೆ.
ಕೋಲ್ಕತ್ತಾ : ಇಲ್ಲಿನ ವಿಮಾನ ನಿಲ್ದಾಣದಲ್ಲಿ ಫುಟ್ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ ಅವರನ್ನು ನೋಡಲು ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರಿದ್ದರು.…
ನ್ಯೂಯಾರ್ಕ್ : ಭಾರತದ ಮೇಲೆ ಡೊನಾಲ್ಡ್ ಟ್ರಂಪ್ ಹೇರಿರುವ ಶೇ.50 ಪ್ರತಿಸುಂಕವನ್ನು ಅಂತ್ಯಗೊಳಿಸಲು ಅಮೆರಿಕದ ಮೂವರು ಸಂಸದರು ನಿಲುವಳಿ ಮಂಡಿಸಿದ್ದಾರೆ.…
ಹಾಸನ : ಕರ್ತವ್ಯದ ವೇಳೆ ಲಾರಿ ಡಿಕ್ಕಿಯಾಗಿ KSRTC ಬಸ್‌ನ ಚೆಕ್ಕಿಂಗ್ ಇನ್ಸ್ಪೆಕ್ಟರ್ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಆಲೂರು…
ಶೇ.30ರಷ್ಟು ಉತ್ಪಾದನೆ ಕುಸಿತ ; ಉತ್ತರ ಕೊಡಗಿನ ಭಾಗದಲ್ಲಿ ಹೆಚ್ಚಿನ ಬೆಳೆ ನಷ್ಟ ನವೀನ್ ಡಿಸೋಜ ಮಡಿಕೇರಿ: ಈ ಬಾರಿಯ…
ಭೇರ್ಯ ಮಹೇಶ್ ಕೆ.ಆರ್.ನಗರ : ಭತ್ತದ ನಾಡು ಎಂದೇ ಪ್ರಖ್ಯಾತಿ ಹೊಂದಿರುವ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳಲ್ಲಿ ಇದೀಗ ಭತ್ತದ…
ದೊಡ್ಡ ಕವಲಂದೆ : ಗಬ್ಬೆದ್ದು ನಾರುತ್ತಿರುವ ಚರಂಡಿಯ ಕೊಳಚೆ ನೀರಿನಿಂದ ಗ್ರಾಮ ಸ್ಥರಿಗೆ ಸಾಂಕ್ರಾಮಿಕ ರೋಗಗಳು ಹರಡು ತ್ತಿದ್ದು, ಗ್ರಾಮ…