ಹೊಸದಿಲ್ಲಿ : ದೇಶದ ತೆರಿಗೆ ವ್ಯವಸ್ಥೆಯಲ್ಲಿ ಅತಿದೊಡ್ಡ ಬದಲಾವಣೆಗೆ ಕೇಂದ್ರ ಮುಂದಾಗಿದ್ದು, ೮ ವರ್ಷಗಳ ಬಳಿಕ ಜಿಎಸ್‌ಟಿ ವ್ಯವಸ್ಥೆಯಲ್ಲಿ ಪರಿಷ್ಕರಣೆಯಾಗಲಿದೆ. ಸ್ವಾತಂತ್ರ್ಯ ದಿನಾಚರಣೆಯ ದಿನ ಕೆಂಪುಕೋಟೆಯಲ್ಲಿ ಮಾತನಾಡುತ್ತಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ಈ ಬಾರಿಯ ದೀಪಾವಳಿಯಲ್ಲಿ ಭಾರತೀಯರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದರು.
ಹಾಗಾಗಿ, ಬುಧವಾರದಂದು ಆರಂಭವಾದ ೨ ದಿನಗಳ ಜಿಎಸ್‌ಟಿ ಸಭೆಯ ಮೇಲೆ ಜನರಿಗೆ ಕುತೂಹಲ ಹೆಚ್ಚಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಈ ಸಭೆ ನಡೆದಿದ್ದು, ಎಲ್ಲಾ ರಾಜ್ಯಗಳ ಸಚಿವರು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಜನಸಾಮಾನ್ಯರಿಗೆ ತೀರಾ ಅಗತ್ಯವಾದ ವಸ್ತುಗಳ ಬೆಲೆ ಅಗ್ಗವಾಗುವ ಸಾಧ್ಯತೆಯಿದೆ. ಜೊತೆಗೆ, ಐಷಾರಾಮಿ ವಸ್ತುಗಳ ಮೇಲೆ ತೆರಿಗೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಕರ್ನಾಟಕದ ಕಂದಾಯ ಇಲಾಖೆಯ ಸಚಿವರಾದ ಕೃಷ್ಣ ಬೈರೇಗೌಡ ಮಾತನಾಡಿ, ಜಿಎಸ್‌ಟಿ ತೆರಿಗೆ ವ್ಯವಸ್ಥೆ ಜಾರಿಯಾದ ನಂತರ ರಾಜ್ಯದ ಆದಾಯದಲ್ಲಿ ವಾರ್ಷಿಕ ಸರಾಸರಿ ರೂ. ೭೦,೦೦೦ ಕೋಟಿ ಖೋತಾ ಆಗುತ್ತಿದೆ. ಇದೀಗ ಕೇಂದ್ರ ಸರ್ಕಾರದ ದರ ಸರಳೀಕರಣ ಪ್ರಸ್ತಾವನೆಯಿಂದ ಹೆಚ್ಚುವರಿ ೧೫,೦೦೦ ಕೋಟಿ ಖೋತಾ ಆಗಲಿದೆ ಎನ್ನುವ ಆತಂಕವನ್ನು ವ್ಯಕ್ತಪಡಿಸಿದ್ದರು.
ಎರಡು ದಿನಗಳ ಕೌನ್ಸಿಲ್ ಸಭೆಯಲ್ಲಿ ತೆರಿಗೆ ದರಗಳನ್ನು ಕಮ್ಮಿ ಮಾಡುವ ನಿಟ್ಟಿನಲ್ಲಿ ಚರ್ಚೆಯಾಗಲಿದೆ. ಮೊದಲಿಗೆ, ಐದು ಮತ್ತು ಹದಿನೆಂಟು ಸ್ಲ್ಯಾಬ್ ನಲ್ಲಿರುವ ವಸ್ತುಗಳ ಬಗ್ಗೆ ಚರ್ಚೆ ನಡೆಯಲಿದೆ. ಮೂಲಗಳ ಪ್ರಕಾರ, ಐಷಾರಾಮಿ ವಸ್ತುಗಳು ಇನ್ನಷ್ಟು ದುಬಾರಿಯಾಗಬಹುದು.
ದಿನನಿತ್ಯದ ಅಗತ್ಯ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ಸರಕುಗಳನ್ನು ಅಗ್ಗವಾಗಿಸುವ ಮತ್ತು ಆಯ್ದ ಐಷಾರಾಮಿ ವಸ್ತುಗಳ ಮೇಲೆ ಹೆಚ್ಚಿನ ಸುಂಕಗಳನ್ನು ಪರಿಚಯಿಸುವ ಮೂಲಕ ವ್ಯಾಪಕ ತೆರಿಗೆ ಪರಿಷ್ಕರಣೆಯ ವಿಚಾರ ಈಗಾಗಲೇ ಚರ್ಚೆಯ ಮೇಜಿನ ಮೇಲಿದೆ. ಸಭೆಯಲ್ಲಿ ಸ್ಲ್ಯಾಬ್ ಬದಲಾವಣೆ ಬಗ್ಗೆ ಬಹುಮತದಿಂದ ನಿರ್ಧಾರ ಕೈಗೊಳ್ಳಲಾಗುವುದು. ಕೌನ್ಸಿಲ್‌ನ ಒಪ್ಪಿಗೆಯ ನಂತರ ಹೊಸ ದರಗಳ ಕುರಿತಾದ ಅಧಿಸೂಚನೆಗಳು ೫-೭ ದಿನಗಳಲ್ಲಿ ಜಾರಿಗೊಳ್ಳಬಹುದು. ಹೊಸ ನಿಯಮಗಳು ಸೆಪ್ಟೆಂಬರ್ ೨೨ ರಿಂದ ಜಾರಿಗೆ ಬರುವ ಸಾಧ್ಯತೆ ಇದೆ.
ನಾಲ್ಕು ಸ್ಲ್ಯಾಬ್‌ಗಳ ಬದಲು ಎರಡು ಸ್ಲ್ಯಾಬ್‌ಗಳಿಗೆ ಇಳಿಕೆಗೆ ಕೇಂದ್ರ ಮುಂದಾಗಿದೆ. ಶೇ.೫, ಶೇ.೧೨, ಶೇ.೧೮. ಶೇ.೨೮ ತೆರಿಗೆ ಪದ್ದತಿಗೆ ಪೂರ್ಣ ವಿರಾಮ ಹಾಕಿ, ಶೇ. ೫% ಮತ್ತು ಶೇ.೧೮ ಸ್ಲ್ಯಾಬ್‌ಗಳನ್ನು ಉಳಿಸಿಕೊಳ್ಳಲು ಈಗಾಗಲೇ ಕೇಂದ್ರ ನಿರ್ಧರಿಸಿದೆ. ಶೇ. ೧೨% ವ್ಯಾಪ್ತಿಯಲ್ಲಿರುವ ಎಲ್ಲ ವಸ್ತುಗಳು ಶೇ. ೫ಕ್ಕೆ ಮತ್ತು ಶೇ.೨೮ರಲ್ಲಿರುವ ಎಲ್ಲ ವಸ್ತುಗಳ ತೆರಿಗೆಯನ್ನು ಶೇ. ೧೮ ಇಳಿಸಲು ತಿರ್ಮಾನಿಸಲಾಗಿದೆ. ಈ ಬಗ್ಗೆ ಈಗಾಗಲೇ ಸುಳಿವು ಕೂಡ ಸಿಕ್ಕಿದೆ.
ವಿಶೇಷ ವಿನಾಯಿತಿಗಳು
ಆರೋಗ್ಯ ಮತ್ತು ಜೀವ ವಿಮೆ :
ವೈಯಕ್ತಿಕ ಆರೋಗ್ಯ ಮತ್ತು ಜೀವ ವಿಮೆಯ ಮೇಲಿನ ಜಿಎಸ್‌ಟಿಯನ್ನು ಸಂಪೂರ್ಣವಾಗಿ ತೆಗೆದುಹಾಕುವ ಪ್ರಸ್ತಾವನೆ ಇದೆ. ಇದರಿಂದ ವಿಮಾ ಪ್ರೀಮಿಯಂಗಳ ಬೆಲೆ ಗಣನೀಯವಾಗಿ ಕಡಿಮೆಯಾಗಬಹುದು, ವಿಶೇಷವಾಗಿ ಮಧ್ಯಮ ವರ್ಗದವರಿಗೆ ಇದು ದೊಡ್ಡ ಉಳಿತಾಯವನ್ನು ಒದಗಿಸುತ್ತದೆ.
ಕೃಷಿ, ಜವಳಿ, ಫಲವತ್ತತೆ, ನವೀಕರಿಸಬಹುದಾದ ಶಕ್ತಿ, ಆರೋಗ್ಯ, ಕರಕುಶಲ ವಸ್ತುಗಳು, ಸಾರಿಗೆ : ಈ ಕ್ಷೇತ್ರಗಳಲ್ಲಿನ ಉತ್ಪನ್ನಗಳು ೫% ಸ್ಲ್ಯಾಬ್‌ಗೆ ಸ್ಥಳಾಂತರಗೊಂಗಲಿವೆ, ಇದರಿಂದ ರೈತರು, ಕಿರು-ಸಣ್ಣ ಉದ್ದಿಮೆಗಳು ಮತ್ತು ಸಾಮಾನ್ಯ ಗ್ರಾಹಕರಿಗೆ ಪ್ರಯೋಜನವಾಗಲಿದೆ.
ಯಾವುದಕ್ಕೆ ತೆರಿಗೆ ಇಲ್ಲ
* ತಾಜಾ ಹಾಲು, ತಾಜಾ ಹಣ್ಣುಗಳು ಮತ್ತು ತರಕಾರಿಗಳು (ಬ್ರ್ಯಾಂಡ್ ಇಲ್ಲದವು)
* ಅಕ್ಕಿ, ಗೋಧಿ, ರಾಗಿ ಮತ್ತು ಇತರ ಧಾನ್ಯಗಳು (ಬ್ರ್ಯಾಂಡ್ ಇಲ್ಲದವು)
* ಮಾಂಸ, ಮೀನು (ಪ್ಯಾಕ್ ಮಾಡದವು)
* ನೈಸರ್ಗಿಕ ಜೇನು (ಬ್ರ್ಯಾಂಡ್ ಇಲ್ಲದವು)
* ಸಿಂಧೂರ, ಕಂಕಣ, ಬಳೆಗಳು
* ಸ್ಯಾನಿಟರಿ ನ್ಯಾಪ್‌ಕಿನ್‌ಗಳು
* ಪುಸ್ತಕಗಳು, ಸ್ಲೇಟ್‌ಗಳು, ಪೆನ್ಸಿಲ್‌ಗಳು (ಶೈಕ್ಷಣಿಕ)
ಸೇವೆಗಳು
* ಆರೋಗ್ಯ ಸೇವೆಗಳು (ಆಸ್ಪತ್ರೆಗಳು, ಚಿಕಿತ್ಸೆ)
* ಶಿಕ್ಷಣ ಸೇವೆಗಳು (ಶಾಲೆ, ಕಾಲೇಜುಗಳು)
ಯಾವ ವಸ್ತುಗಳ ಬೆಲೆಯಲ್ಲಿ ನಿರೀಕ್ಷೆ ಮಾಡಬಹುದು?
೧. ಆಹಾರ ಉತ್ಪನ್ನಗಳು: ಪ್ಯಾಕ್ ಮಾಡಿದ ಒಣಗಿದ ಹಣ್ಣುಗಳು, ಫ್ರೂಟ್ ಜ್ಯೂಸ್, ದೇಶೀ ಸಿಹಿತಿಂಡಿಗಳು, ಗೃಹೋಪಯೋಗಿ ವಸ್ತುಗಳು: ಛತ್ರಿಗಳು, ಕೃಷಿ ಉಪಕರಣಗಳು, ಕೆಲವು ರೀತಿಯ ಶೂಗಳು (೫೦೦ ರೂ.ಗಿಂತ ಹೆಚ್ಚಿನ ಬೆಲೆಯವು) ಇತರೆ: ಆಗರ‍್ಬತ್ತಿ, ಕೆಲವು ಇಟ್ಟಿಗೆಗಳು, ಕೆಲವು ರೀತಿಯ ಬಟ್ಟೆಗಳು (ಗಾರ್ಮೆಂಟ್ಸ್)
೨. ಗೃಹೋಪಯೋಗಿ ಉಪಕರಣಗಳು: ಏರ್ ಕಂಡಿಷನರ್‌ಗಳು (ಎಸಿ). ರೆಫ್ರಿಜರೇಟರ್‌ಗಳು, ಟಿವಿಗಳು (೩೨ ಇಂಚಿಗಿಂತ ದೊಡ್ಡವು), ಡಿಶ್‌ವಾಶಿಂಗ್ ಮೆಷಿನ್‌ಗಳು
೩. ದೈನಂದಿನ ಬಳಕೆಯ ವಸ್ತುಗಳು: ಟೂತ್‌ಪೇಸ್ಟ್, ಸಾಬೂನು, ಶಾಂಪೂ, ಕಾಸ್ಮೆಟಿಕ್ಸ್ (ಕೆಲವು ರೀತಿಯವು, ಹೇರ್ ಆಯಿಲ್)
ಇತರೆ
* ಸಿಮೆಂಟ್
* ಪೇಂಟ್ ಮತ್ತು ವಾರ್ನಿಷ್
* ಸೆರಾಮಿಕ್ ಟೈಲ್ಸ್
* ಸ್ಯಾನಿಟರಿ ವೇರ್
* ಕೆಲವು ಎಲೆಕ್ಟ್ರಾನಿಕ್ಸ್ ವಸ್ತುಗಳು (ಕಂಪ್ಯೂಟರ್ ಮಾನಿಟರ್‌ಗಳು, ಪ್ರಿಂಟರ್‌ಗಳು)
ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…
ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…
ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…
ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…
ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…
ಬೆಂಗಳೂರು: ನಟ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾ ಟ್ರೈಲರ್ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ. ವಿಜಯ್ ಕಾರ್ತಿಕೇಯ-ಸುದೀಪ್ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ…