ಕ್ಯಾಲಿಫೋರ್ನಿಯ: ಮೆಟಾ ಪ್ಲಾಟ್ ಫಾರ್ಮ್ಸ್ ಇಂಕ್ ಷೇರು ಮೌಲ್ಯ ಏರಿಕೆ ಹಿನ್ನೆಲೆಯಲ್ಲಿ ಅಮೆಜಾನ್ ಒಡೆಯ ಜೆಫ್ ಬೆಝೋಸ್‌ರನ್ನು ಹಿಂದಿಕ್ಕಿ ಮೆಟಾದ ಸಂಸ್ಥಾಪಕ ಮಾರ್ಕ್ ಝುಕರ್ ಬರ್ಗ್ ವಿಶ್ವದ 2ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ ಎಂದು ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಸೂಚ್ಯಂಕ ವರದಿ ನೀಡಿದೆ.
ಇತ್ತೀಚಿನ ತಿಂಗಳುಗಳಲ್ಲಿ ಮೆಟಾವರ್ಸ್‌ನ ಷೇರು ಮೌಲ್ಯವು ಏರಿಕೆ ಕಂಡಿದ್ದು, ಒಟ್ಟಾರೆ ಮೌಲ್ಯ 206.2 ಬಿಲಿಯನ್ ಡಾಲರ್‌ನಷ್ಟು ಗಡಿದಾಟಿದೆ. ಹೀಗಾಗಿ ಬರ್ಗ್ ಆಸ್ತಿ ಮೌಲ್ಯವು ಅಮೆಜಾನ್ ಇಂಕ್ ಒಡೆಯ ಬೆಝೋಸ್‌ಗಿಂತ 1.1 ಬಿಲಿಯನ್‌ನಷ್ಟು ಅಧಿಕವಾಗಿದ್ದು, ಟೆಸ್ಲಾ ಇಂಕ್ ಕಂಪನಿ ಅಧ್ಯಕ್ಷ ಎಲಾನ್ ಮಸ್ಕ್‌ಗಿಂತ 50 ಬಿಲಿಯನ್‌ಗಳಷ್ಟು ಮೌಲ್ಯ ಹಿಂದಿದೆ ಎಂದು ತಿಳಿದು ಬಂದಿದೆ.
2ನೇ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತ ಅಧಿಕ ಏರಿಕೆ ಕಂಡಿರುವ ಮೆಟಾದ ಷೇರು ಮೌಲ್ಯವು ಶೇ.23ರಷ್ಟು ಹೆಚ್ಚಾಗಿದೆ. ಆದರೆ ನಿನ್ನೆ ಮೆಟಾದ ಷೇರು ಮೌಲ್ಯ ಸಾರ್ವಕಾಲಿಕ ದಾಖಲೆಯಾಗಿ 582.77 ತಲುಪಿದೆ. ಒಟ್ಟಾರೆ ಮೆಟಾದ ಸಂಸ್ಥಾಪಕ ಮತ್ತು ಕಾರ್ಯಕಾರಿ ಅಧಿಕಾರಿ ಮಾರ್ಕ್ ಝುಕರ್ ಬರ್ಗ್, ಈ ವರ್ಷದ ಶ್ರೀಮಂತ ಸೂಚ್ಯಂಕದಲ್ಲಿ ನಾಲ್ಕು ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಬೆಂಗಳೂರು : ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಹಂತ ಹಂತವಾಗಿ ಸಫಾರಿ ಆರಂಭಿಸಲು ಮತ್ತು ಧಾರಣಾ ಶಕ್ತಿ ಮತ್ತು ಹುಲಿಗಳು ನಾಡಿನತ್ತ…
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಜಿಲ್ಲೆ ಮೈಸೂರಿನಲ್ಲಿ ಎರಡು ದಿನಗಳ ಕಾಲ ಪ್ರವಾಸ ಹಮ್ಮಿಕೊಂಡಿದ್ದಾರೆ. ಜ.5ರಂದು ಬೆಳಿಗ್ಗೆ…
ಮೈಸೂರು : ಅರಮನೆ ನಗರಿ ಮೈಸೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಾಮುಂಡಿಬೆಟ್ಟದ ಸಂರಕ್ಷಣೆ ಮತ್ತು ಉಳಿವಿಗಾಗಿ ಜ.4ರಂದು(ಭಾನುವಾರ) ಜಾಗೃತಿ ಆಂದೋಲನವನ್ನು…
ಭೋಪಾಲ್ : ಇಂದೋರ್‌ನ ಭಗೀರಥಪುರದಲ್ಲಿ ಕಲುಷಿತ ಕುಡಿಯುವ ನೀರು ಸೇವನೆಯಿಂದ 11 ಜೀವಗಳು ಬಲಿಯಾಗಿವೆ. ಮತ್ತು 1400ಕ್ಕೂ ಹೆಚ್ಚು ನಿವಾಸಿಗಳ…
ಬೆಂಗಳೂರು : ಬ್ಯಾನರ್ ಕಟ್ಟುವ ವಿಷಯದಲ್ಲಿ ಕಳೆದ ರಾತ್ರಿ ಬಳ್ಳಾರಿ ನಗರದಲ್ಲಿ ನಡೆದ ಘಟನೆಯ ಕುರಿತು ಉಚ್ಚ ನ್ಯಾಯಾಲಯದ ಹಾಲಿ…
ಬೆಂಗಳೂರು : ಬಳ್ಳಾರಿಯಲ್ಲಿ ಗುರುವಾರ ರಾತ್ರಿ ವಾಲ್ಮೀಕಿ ಬ್ಯಾನರ್ ವಿಚಾರದಲ್ಲಿ ನಡೆದ ಎರಡು ಗುಂಪುಗಳ ಘರ್ಷಣೆ ವೇಳೆ ಫೈರಿಂಗ್ ಆಗಿ…