ದೇಶ- ವಿದೇಶ

ಜಾತಿ ಕಾರಣಕ್ಕೆ ಪ್ರಿಯಕರನನ್ನು ಕೊಂದ ಯುವತಿ ಕುಟುಂಬಸ್ಥರು : ಮೃತದೇಹವನ್ನೇ ಮದುವೆಯಾದ ಪ್ರಿಯತಮೆ..!

ನಾಂದೇಡ್‌ : ಪ್ರೀತಿ ಹೆಸರಲ್ಲಿ ಹುಡುಗ-ಹುಡುಗಿ ಇಬ್ಬರು ಮೋಸ ಮಾಡುವ ಈ ಹೊತ್ತಿನಲ್ಲಿ ನಿಜವಾದ ಪ್ರೀತಿ ಸಿಗುವುದು ಬಲು ಅಪರೂಪ. ಪ್ರೀತಿ ಸಿಕ್ಕರೂ ಅದನ್ನು ಕೊನೆಯವರೆಗೂ ಉಳಿಸಿಕೊಳ್ಳುವುದು ನಿಜವಾದ ಸವಾಲು. ಎಷ್ಟೋ ಸಂಬಂಧಗಳಿಗೆ ಜಾತಿ, ಧರ್ಮ, ಬಣ್ಣ, ವೃತ್ತಿ, ಮನೆಯವರ ವಿರೋಧ ಅಡ್ಡಿಯಾಗುತ್ತದೆ. ಇವೆಲ್ಲವೂ ಮೀರಿ ನಿಲ್ಲುವ ಸಂಬಂಧಗಳು ಸಿಗುವುದು ಅಪರೂಪ. ಆದರೆ, ಇಲ್ಲೊಂದು ಘಟನೆಯಲ್ಲಿ ಪ್ರಿಯಕರ ಇಲ್ಲದಿದ್ರೂ, ಪ್ರಿಯಕರನ ಮೃತದೇಹವನ್ನೇ ಮದುವೆಯಾಗಿ ನಮ್ಮ ಸಂಬಂಧ ಶಾಶ್ವತವೆಂದು ಸಾರಿರುವ ಪ್ರಸಂಗ ಮಹಾರಾಷ್ಟ್ರದ ನಾಂದೇಡ್‌ನಲ್ಲಿ ನಡೆದಿದೆ.

ಘಟನೆ ವಿವರ ;
ಆಂಚಲ್ – ಸಕ್ಷಾಮ್ (20) ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ತನ್ನ ಸಹೋದರರ ಮೂಲಕ ಆಂಚಲ್‌ ಸಕ್ಷಾಮ್‌ನನ್ನು ಭೇಟಿ ಆಗಿದ್ದಳು. ಅಲ್ಲಿಂದ ಶುರುವಾದ ಪರಿಚಯ ಪ್ರೀತಿಗೆ ತಿರುಗಿದೆ.

ಮೂರು ವರ್ಷಗಳಿಂದ ಆತ್ಮೀಯವಾಗಿದ್ದ ಇಬ್ಬರ ಸಂಬಂಧಕ್ಕೆ ಇತ್ತೀಚೆಗೆ ಮನೆಯವರೇ ವಿರೋಧ ವ್ಯಕ್ತಪಡಿಸಿದ್ದರು. ಆಂಚಲ್‌ ಕುಟುಂಬದವರು ಸಂಬಂಧವನ್ನು ವಿರೋಧಿಸುತ್ತಿದ್ದರು. ಆದರೆ ಆಂಚಲ್‌ ಏನೇ ಆದರೂ ಸಕ್ಷಾಮ್‌ನನ್ನೇ ಮದುವೆ ಆಗೋದಾಗಿ ಮನೆಯಲ್ಲಿ ಹೇಳಿದ್ದಳು.

ಆಂಚಲ್‌ ಸಕ್ಷಾಮ್‌ ಜತೆ ಮದುವೆ ಆಗಲು ಸಿದ್ಧಳಾಗಿದ್ದಳು. ಈ ವಿಚಾರ ಆಕೆಯ ಮನೆಯವರಿಗೆ ಕೋಪ ತರಿಸಿತ್ತು. ಸಕ್ಷಾಮ್‌ ಜತೆ ಸಂಬಂಧ ಮುಂದುವರೆಸಬೇಡ ಎಂದು ಮನೆಯವರು ಹಲವು ಬಾರಿ ಹೇಳಿದ್ದರೂ, ಆಂಚಲ್‌ ಕೇಳಿರಲಿಲ್ಲ. ಸಕ್ಷಾಮ್‌ ಬೇರೆ ಜಾತಿಯ ಹುಡುಗ ಆದ ಕಾರಣ ಆಂಚಲ್‌ ಮನೆಯವರಿಗೆ ಈ ಸಂಬಂಧ ಇಷ್ಟವಿರಲಿಲ್ಲ.

ಆಂಚಲ್‌ – ಸಕ್ಷಾಮ್‌ ಸಂಬಂಧವನ್ನು ಮುರಿಯಬೇಕೆನ್ನುವ ನಿಟ್ಟಿನಲ್ಲಿ, ಆಕೆಯ ಕುಟುಂಬಸ್ಥರು ನ.27 ರಂದು ಸಕ್ಷಾಮ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಆತನಿಗೆ ಹೊಡೆದು ತಲೆಗೆ ಗುಂಡು ಹಾರಿಸಿ, ಕಲ್ಲಿನಿಂದ ತಲೆ ಜಜ್ಜಿ ಭೀಕರವಾಗಿ ಕೃತ್ಯವೆಸಗಿದ್ದಾರೆ.

ಪ್ರಿಯಕರ ಇನ್ನಿಲ್ಲವೆನ್ನುವ ವಿಚಾರ ತಿಳಿದು ದುಃಖದಲ್ಲಿ ಕುಸಿದ ಆಂಚಲ್‌, ಆತನನ್ನು ಕೊನೆಯ ಬಾರಿ ನೋಡಲು ಆತನ ಮನೆಗೆ ಭೇಟಿ ನೀಡಿದ್ದಾಳೆ. ಪ್ರಿಯಕರನ ಮೃತದೇಹವನ್ನು ಅಪ್ಪಿಕೊಂಡು ಮೃತ ದೇಹಕ್ಕೆ ಅರಿಶಿನ, ಹಣೆಗೆ ಸಿಂಧೂರ ಹಚ್ಚಿ, ಮೃತ ಗೆಳೆಯನ ಜತೆ ಮದುವೆ ಆಗಿದ್ದಾಳೆ.

ನಾನು ಬದುಕಿರುವವರೆಗೂ ನಿನ್ನ ಪತ್ನಿಯಾಗಿಯೇ ಇರುತ್ತೇನೆ ಎಂದು ಆಂಚಲ್‌ ಹೇಳಿದ್ದಾಳೆ. “ಸಾಕ್ಷಮ್ ಸಾವಿನಲ್ಲೂ ನಮ್ಮ ಪ್ರೀತಿ ಗೆದ್ದಿತು, ಮತ್ತು ನನ್ನ ತಂದೆ ಮತ್ತು ಸಹೋದರರು ಸೋತರು” ಎಂದು ಆಂಚಲ್‌ ಹೇಳುತ್ತಾ ಕಣ್ಣೀರಿಟ್ಟಿದ್ದಾರೆ.

ನನ್ನ ಪ್ರಿಯಕರನಿಗೆ ಈ ರೀತಿ ಮಾಡಿದವರಿಗೆ ಮರಣದಂಡನೆ ನೀಡಬೇಕೆಂದು ಆಂಚಲ್‌ ತನ್ನ ಮನೆಯವರ ವಿರುದ್ಧವೇ ಆಕ್ರೋಶದಿಂದ ಮಾತನಾಡಿದ್ದಾಳೆ.

ಈ ಸಂಬಂಧ ಪೊಲೀಸರು ಆರು ಆರೋಪಿಗಳ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.

ಆಂದೋಲನ ಡೆಸ್ಕ್

Recent Posts

ಎಲ್‌ಪಿಜಿ ಸಿಲಿಂಡರ್‌ ಪೂರೈಕೆಯಲ್ಲಿ ವ್ಯತ್ಯಯ: ಗೃಹ ಸಚಿವ ಪರಮೇಶ್ವರ್‌ ಹೇಳಿದ್ದಿಷ್ಟು.!

ಬೆಂಗಳೂರು: ಇರಾನ್‌-ಇಸ್ರೇಲ್‌ ಯುದ್ಧ ಭಾರತದ ಮೇಲೂ ಪರಿಣಾಮ ಬೀರಿದ್ದು, ಗ್ಯಾಸ್‌ ಸಿಲಿಂಡರ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಈ ಬಗ್ಗೆ ಗೃಹ…

50 mins ago

11ನೇ ದಿನಕ್ಕೆ ಕಾಲಿಟ್ಟ ಇರಾನ್‌-ಇಸ್ರೇಲ್‌ ಸಂಘರ್ಷ

ಟೆಹರಾನ್:‌ ಇರಾನ್ ಸಂಘರ್ಷ ಹನ್ನೊಂದನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಅಮೇರಿಕಾದ ಶ್ವೇತಭವನದ ಹೇಳಿಕೆಗಳನ್ನು ಗಮನಿಸಿದರೆ, ಈ ಯುದ್ಧದ ಅಂತ್ಯ ಯಾವಾಗ…

59 mins ago

ಪ್ರಾಣಿ ಬಲಿ ಶಿಕ್ಷಾರ್ಹ ಅಪರಾಧ: ದಯಾನಂದ ಸ್ವಾಮೀಜಿ ಪ್ರತಿಪಾದನೆ

ಭೇರ್ಯ ಮಹೇಶ್:‌ ಕೆ.ಆರ್.‌ನಗರ ತಾಲ್ಲೂಕು ವರದಿಗಾರರು ಕೆ.ಆರ್.ನಗರ:  ಧಾರ್ಮಿಕ ಸ್ಥಳಗಳು ಕಟುಕರ ಕೇರಿಗಳಾಗಬಾರದು. ಜೀವ ತೆಗೆಯುವ ಮೃತ್ಯು ಕೂಪವಾಗಬಾರದು, ಪ್ರಾಣಿಹಿಂಸೆ…

1 hour ago

ಮಲೆ ಮಹದೇಶ್ವರ ಬೆಟ್ಟದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಕ್ತರಲ್ಲಿ ಮನೆಮಾಡಿದ ಆತಂಕ

ಹನೂರು: ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಪ್ರಸಿದ್ಧ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿದ್ದು, ಭಕ್ತರಲ್ಲಿ…

2 hours ago

ಮುಂದುವರಿದ ಇರಾನ್-ಇಸ್ರೇಲ್‌ ಸಂಘರ್ಷ: ಭಾರತದ ಇಂಟರ್ನೆಟ್‌ ಸಂಪರ್ಕಕ್ಕೆ ಅಪಾಯ?

ಟೆಹರಾನ್:‌ ಕಳೆದ ಕೆಲ ದಿನಗಳಿಂದ ಇರಾನ್‌ ಮೇಲೆ ಇಸ್ರೇಲ್‌ ಹಾಗೂ ಅಮೇರಿಕಾ ಜಂಟಿ ದಾಳಿ ನಡೆಸುತ್ತಿರುವ ಪರಿಣಾಮ ಅಕ್ಷರಶಃ ಇರಾನ್‌…

2 hours ago

ಪ್ರವಾಸಿಗರ ಆಕರ್ಷಣೆಯ ಭದ್ರಾದ ಕಪ್ಪು ಚಿರತೆ

ಚಿಕ್ಕಮಗಳೂರು: ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದು, ವಿಶ್ವದಾದ್ಯಂತ ಇರುವ ವನ್ಯಜೀವಿಪ್ರಿಯರನ್ನು ತನ್ನತ್ತ ಸೆಳೆಯುವಲ್ಲಿ ನಾಗರಹೊಳೆಯ ಕಬಿನಿಯ ಭಗೀರ ಯಶಸ್ವಿಯಾಗಿದ್ದ ನಂತರ…

3 hours ago