ದೇಶ- ವಿದೇಶ

ದೇಶದ ಅಭಿವೃದ್ಧಿಗಾಗಿ ಬಡವರು, ಮಹಿಳೆಯರು, ಯುವಕರಿಗೆ ಸಾಕಷ್ಟು ಯೋಜನೆ ಜಾರಿ ಮಾಡಲು ಕೇಂದ್ರ ಸರ್ಕಾರ ಬದ್ಧ: ದ್ರೌಪದಿ ಮುರ್ಮು

ನವದೆಹಲಿ: ಕೇಂದ್ರ ಸರ್ಕಾರ ಈ ಬಾರಿ ಬಜೆಟ್‌ನಲ್ಲಿ ದೇಶದ ಅಭಿವೃದ್ಧಿಗಾಗಿ ಬಡವರು, ಮಹಿಳೆಯರು ಹಾಗೂ ಯುವಕರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ಮಾಡಲು ಬದ್ಧವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತಿಳಿಸಿದ್ದಾರೆ.

ಸಂಸತ್‌ ಭವನದಲ್ಲಿ ಇಂದಿನಿಂದ(ಜನವರಿ.31) ಬಜೆಟ್‌ ಅಧಿವೇಶನ ಪ್ರಾರಂಭವಾಗಿದ್ದು, ಜಂಟಿ ಸದನಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಬಡವರ ಅಭಿವೃದ್ಧಿಗೆ ಬದ್ಧವಾಗಿದ್ದು ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗಕ್ಕೆ ಒತ್ತು ನೀಡುತ್ತಿದೆ ಎಂದು ತಮ್ಮ ಭಾಷಣದಲ್ಲಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಬಣ್ಣಿಸಿದರು.

ಕೇಂದ್ರ ಸರ್ಕಾರವೂ ಪಿಎಂ ಕಿಸಾನ್‌ ಯೋಜನೆಯಡಿ ರೈತರ ಖಾತೆಗೆ ಹಣ ಜಮೆ ಮಾಡುತ್ತಿದೆ. ಸಾರ್ವಜನಿಕರಿಗೆ ಉಜ್ವಲ ಯೋಜನೆಯಡಿ ಉಚಿತ ಸಿಲಿಂಡರ್‌ ನೀಡುತ್ತಿದೆ. ಅಲ್ಲದೇ ಆಯುಷ್ಮಾನ್‌ ಯೋಜನೆಯಡಿಯಲ್ಲಿ ಉಚಿತ ಆರೋಗ್ಯ ಚಿಕಿತ್ಸೆ ಬಡತನದಿಂದ ಮುಕ್ತವಾಗಲು ಯೋಜನೆ ಹಾಗೂ 70 ವರ್ಷ ದಾಟಿದವರಿಗೆ ಆರೋಗ್ಯ ವಿಮೆ ಯೋಜನೆ ಜಾರಿಗೊಳಿಸುತ್ತಿದೆ. ಈ ಬಾರಿಯ ಬಜೆಟ್ ನಲ್ಲಿ ಕೃಷಿ ಮಹಿಳೆಯರಿಗೆ ಒತ್ತು ನೀಡಲಾಗುತ್ತದೆ. ಸರ್ಕಾರಿ ನೌಕರರಿಗೆ 50% ಪಿಂಚಣಿ ಸಿಗಲಿದೆ. ಈ ಮೂಲಕ ದೇಶದ ಅಭಿವೃದ್ದಿಗಾಗಿ ಸರ್ಕಾರ ಶ್ರಮಿಸುತ್ತಿದೆ ಎಂದು ಹೇಳಿದರು.

ನಮ್ಮ ದೇಶದ ಯುವಕರು ಇಂದು ಸ್ಟಾರ್ಟಾಪ್‌ನಿಂದ ದೇಶಕ್ಕೆ ಕೀರ್ತಿ ತರುತ್ತಿದ್ದು, ಕಳೆದ ದಶಕದಲ್ಲಿ ಮೇಕ್‌ ಇನ್‌ ಇಂಡಿಯಾ, ಸ್ಟಾರ್ಟ್‌ ಅಪ್‌ ಇಂಡಿಯಾ ಹಾಗೂ ಸ್ಟ್ಯಾಂಡ್‌ ಅಪ್‌ ಇಂಡಿಯಾ ಯೋಜನೆಗಳ ಮೂಲಕ ಯುವಕರಿಗೆ ಅನೇಕ ಅವಕಾಶಗಳನ್ನು ಒದಗಿಸಲಾಗಿದೆ. ಅಲ್ಲದೇ ಇಂಟರ್‌ಶಿಪ್‌ ಯೋಜನೆಯ ಮೂಲಕ ಯುವಕರಿಗೆ ನೂತನ ಅನುಭವ ನೀಡಲಾಗುತ್ತಿದೆ. ಹೀಗಾಗಿ ದೇಶದಲ್ಲಿ ಲಕ್ಷಾಂತರ ಸ್ಟಾಟರ್ಪ್‌ಗಳು ಕೆಲಸ ಮಾಡಿತ್ತಿದ್ದು, ಎಐ ಹಾಗೂ ಡಿಜಿಟಲ್‌ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಭಾರತವೂ ಜಗತ್ತಿಗೆ ದಾರಿ ತೋರಿಸುತ್ತಿದೆ ಎಂದರು.

ಕೇಂದ್ರ ಸರ್ಕಾರ ಯುವಕರ ಶಿಕ್ಷಣಕ್ಕೆ ವಿಶೇಷ ಗಮನ ನೀಡಿದ್ದು, ವಿದ್ಯಾರ್ಥಿಗಳಿಗೆ ಆಧುನಿಕ ಪಠ್ಯಕ್ರಮವನ್ನು ಸಿದ್ಧಪಡಿಸುತ್ತಿದೆ. ಯುವಕರಿಗೆ ಹೊಸ ಉದ್ಯೋಗಾವಕಾಶ ಕಲ್ಪಿಸಿದ್ದು, ಉನ್ನತ ಕಂಪೆನಿಗಳಲ್ಲಿ ಇಂಟರ್‌ಶಿಪ್‌ ಮಾಡಲು ಅವಕಾಶಗಳನ್ನು ನೀಡಲಾಗುತ್ತಿದೆ. ಇನ್ನು ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ 70 ಸಾವಿರ ಕೋಟಿ ರೂ. ಹಾಗೂ ದೇಶವು ಅಟಲ್‌ಜೀ ಅವರ ಜನ್ಮ ಶತಮಾನೋತ್ಸವವನ್ನು ಆಚರಿಸುತ್ತಿರುವಾಗ ಅವರ ಅಟಲ್‌ ಗ್ರಾಮ ಸಡಕ್‌ ಯೋಜನೆಯೂ ಹೊಸ ಎತ್ತರವನ್ನು ತಲುಪುತ್ತಿದೆ ಎಂದು ತಿಳಿಸಿದರು.

ಇನ್ನೂ ರಾಷ್ಟ್ರದಲ್ಲಿ 10 ಕೋಟಿಗೂ ಅಧಿಕ ಮಹಿಳೆಯರು ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ಲಕ್ಪತಿ ದೀದಿಗಳ ಸಂಖ್ಯೆಯನ್ನು ನಿರಂತರವಾಗಿ ಅಧಿಕಗೊಳಿಸಲಾಗುತ್ತಿದೆ ಎಂದರು.

ಅರ್ಚನ ಎಸ್‌ ಎಸ್

Recent Posts

ಮದುವೆಗೆ ನಿರಾಕರಿಸಿದ ಪ್ರಿಯಕರ: ಯುವತಿ ಸೂಸೈಡ್: ಪುತ್ರಿ ಸಾವಿನ ಬಳಿಕ ತಾಯಿ ಆತ್ಮಹತ್ಯೆ

ಮಂಡ್ಯ: ಮದುವೆಯಾಗಲು ಪ್ರಿಯಕರ ನಿರಾಕರಿಸಿದ್ದಕ್ಕೆ ಯುವತಿ ಆತ್ಮಹತ್ಯೆಗೆ ಶರಣಾಗಿದ್ದು, ಮಗಳು ಸಾವನ್ನಪ್ಪಿದ್ದ 20 ದಿನಗಳ ಬಳಿಕ ತಾಯಿಯೂ ನೇಣಿಗೆ ಶರಣಾಗಿರುವ…

7 mins ago

ಮತ್ತೆ ಬರಲಿರುವ ರಾಮಾಚಾರಿ ಇದು ‘ನಾಗರಹಾವು’ ಚಿತ್ರದ ಮುಂದಿನ ಭಾಗ

‘ಶ್ರೀ ಕ್ಷೇತ್ರ ಕೈವಾರ ತಾತಯ್ಯ’ ಮತ್ತು ‘ದೇವನಹಳ್ಳಿ’ ಚಿತ್ರಗಳನ್ನು ನಿರ್ದೇಶಿಸಿರುವ ಪಲ್ಲಕ್ಕಿ ರಾಧಾಕೃಷ್ಣ, ಆನಂತರ ಒಂದೆರಡು ಚಿತ್ರಗಳನ್ನು ನಿರ್ದೇಶಿಸುವುದಾಗಿ ಸುದ್ದಿಯಾದರೂ,…

3 hours ago

ಕಿಡಿ ಹೊತ್ತಿಸಲು ಬಂದ ನಿರಂಜನ್ ಹೊಸ ಚಿತ್ರ ‘ಸ್ಪಾರ್ಕ್’ ಪ್ರಾರಂಭ

ವ್ಯವಸ್ಥೆಯ ವಿರುದ್ಧ ಹೋರಾಡುವ ಪತ್ರಕರ್ತರ ಕುರಿತಾಗಿ ಹಲವು ಸಿನಿಮಾಗಳು ಬಂದಿವೆ. ಇದೀಗ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ…

3 hours ago

ಪುನೀತ್‌ 50 ʼಅಪ್ಪುʼ ಮರು ಬಿಡುಗಡೆ

ಪುನೀತ್ ರಾಜ್‌ಕುಮಾರ್ ಇದ್ದಿದ್ದರೆ, ದೊಡ್ಡ ಸಂಭ್ರಮ ಮನೆ ಮಾಡಿರುತ್ತಿತ್ತು. ಮಾರ್ಚ್ ೧೭ಕ್ಕೆ ಅವರು ೫೦ ಮುಗಿಸಿ,೫೧ನೇ ವರ್ಷಕ್ಕೆಕಾಲಿಡುತ್ತಿದ್ದರು. ಪುನೀತ್‌ ಇಲ್ಲದ…

3 hours ago

ನಮಗೆ ಏಕೆ ಕಡಿಮೆ ಸಂಭಾವನೆ: ರಮ್ಯಾ ದಿಟ್ಟ ಪ್ರಶ್ನೆ

ಮನದ ಕಡಲು ಶೀರ್ಷಿಕೆ ಗೀತೆ ಬಿಡುಗಡೆ ಮಾಡಿದ ರಮ್ಯಾ  ಕನ್ನಡ ಚಿತ್ರರಂಗದಲ್ಲಿ ನಾಯಕಿಯರಿಗೆ ಕಡಿಮೆ ಸಂಭಾವನೆ ನೀಡಲಾಗುತ್ತದೆ. ಜೊತೆಗೆ ಒಳ್ಳೆಯ…

3 hours ago

ಓದುಗರ ಪತ್ರ: ವಾಹನ ದಟ್ಟಣೆ ನಿಯಂತ್ರಿಸಿ

ಮೈಸೂರಿನ ಕುಂಬಾರ ಕೊಪ್ಪಲು, ಹೆಬ್ಬಾಳು, ವಿಜಯನಗರ ಎರಡನೇ ಹಂತ ಮತ್ತು ಮಂಚೇಗೌಡನ ಕೊಪ್ಪಲಿಗೆ ಸಂಪರ್ಕ ಕಲ್ಪಿಸುವ ಸೂರ್ಯ ಬೇಕರಿ ವೃತ್ತದ…

4 hours ago