ದೇಶ- ವಿದೇಶ

ದೆಹಲಿ ಚುನಾವಣೆ ಫಲಿತಾಂಶ: ಬಿಜೆಪಿಗೆ ಆರಂಭಿಕ ಮುನ್ನಡೆ

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಅಂಚೆ ಮತ ಎಣಿಕೆಯಲ್ಲಿ ಬಿಜೆಪಿ ಮುನ್ನಡೆ ಪಡೆದುಕೊಂಡಿದೆ.

ಬಿಗಿ ಭದ್ರತೆಯ ನಡುವೆ 19 ಕೇಂದ್ರಗಳಲ್ಲಿ ಮತ ಎಣಿಕೆ ಆರಂಭವಾಗಿದ್ದು, ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ.

ಇನ್ನು ಕಲ್ಕಾಜಿ ಕ್ಷೇತ್ರದ ಎಎಪಿ ಅಭ್ಯರ್ಥಿಯೂ ಆಗಿರುವ ದೆಹಲಿ ಸಿಎಂ ಅತಿಶಿಯವರು ಮಹಾರಾಣಿ ಬಾಗ್‌ನಲ್ಲಿರುವ ಮೀರಾಬಾಯಿ ಡಿಎಸ್‌ಇಯು ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದಾರೆ.

ಮತ ಎಣಿಕೆ ಕೇಂದ್ರದಲ್ಲೇ ತೀವ್ರ ಆತಂಕಕ್ಕೆ ಒಳಗಾಗಿರುವ ಅತಿಶಿಯವರು ಪದೇ ಪದೇ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ಎಎಪಿ ನಾಯಕರು ಆತಂಕಕ್ಕೀಡಾಗಲು ಎಕ್ಸಿಟ್‌  ಪೋಲ್ಗಳೇ ಕಾರಣ ಎನ್ನಲಾಗುತ್ತಿದ್ದು, ಇಂದು ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ ಸಿಗಲಿದೆ.

ಇನ್ನೊಂದು ಕಡೆ ಬಿಜೆಪಿ ಪಾಳಯದಲ್ಲಿ ಸಂತಸ ಮನೆಮಾಡಿದ್ದು, ಈ ಸಂತೋಷ ಮಧ್ಯಾಹ್ನದ ಮೇಲೆಯೂ ಮುಂದುವರೆಯಲಿದಾ ಎಂಬುದನ್ನು ಕಾದುನೋಡಬೇಕಿದೆ.

 

 

 

ಕೆಂಡಗಣ್ಣಸ್ವಾಮಿ

ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಹಂಚೀಪುರ ಗ್ರಾಮದವನಾದ ನಾನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದಿದ್ದೇನೆ. ಪದವಿ ನಂತರದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ 5 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ನೈಸರ್ಗಿಕ ಕೃಷಿ ಹಾಗೂ ಪಶು ಸಂಗೋಪನೆಗೆ ಹೆಚ್ಚು ಒತ್ತು ಕೊಡುತ್ತೇನೆ.‌ ಪರಿಸರ ಸಂರಕ್ಷಣೆ ಜೊತೆ ಜೊತೆಗೆ ಪ್ರಾಣಿ ಪಕ್ಷಿಗಳ ಉಳಿವಿಗಾಗಿ ನಾನು ಶ್ರಮ ವಹಿಸುತ್ತಿದ್ದೇನೆ.‌ ನನ್ನ ಮೊಬೈಲ್‌ ಸಂಖ್ಯೆ: 9964859626, 9606570286

Recent Posts

ಎಚ್‌ಪಿವಿ ಲಸಿಕಾ ಅಭಿಯಾನಕ್ಕೆ ಸಿಗದ ನಿರೀಕ್ಷಿತ ಸ್ಪಂದನೆ

ನವೀನ್ ಡಿಸೋಜ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ  ಯೋಜನೆಗೆ ಹಿನ್ನೆಡೆ; ಯೋಜನೆಯ ಸದುಪಯೋಗಕ್ಕೆ ಆರೋಗ್ಯ ಇಲಾಖೆ ಮನವಿ ಮಡಿಕೇರಿ: ಜಿಲ್ಲೆಯಲ್ಲಿ ಕೇಂದ್ರ…

3 mins ago

‘ಟ್ರಾನ್ಸ್ ಜೆಂಡರ್ ಹಕ್ಕುಗಳ ತಿದ್ದುಪಡಿ ಮಸೂದೆ ಆತುರದಲ್ಲಿ ಹೇರಲಾದ ಕ್ರಮ’

ಸಂದರ್ಶನ: ರಶ್ಮಿ ಕೋಟಿ " ಟ್ರಾನ್ಸ್‌ಜೆಂಡರ್ ಹಕ್ಕುಗಳ ತಿದ್ದುಪಡಿ ಮಸೂದೆ ದೇಶದಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. ಸಮುದಾಯದವರೊಂದಿಗೆ ಸಮಾಲೋಚನೆ ಇಲ್ಲದೆ…

8 mins ago

ರಂಗಸಮುದ್ರ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ

ಎಂ.ನಾರಾಯಣ ಜಿಲ್ಲಾ ಮಟ್ಟದ ವಿಭಾಗದಲ್ಲಿ ಪ್ರಶಸ್ತಿಗೆ ಪಾತ್ರವಾದ ಮೈಸೂರು ಜಿಲ್ಲೆಯ ಏಕೈಕ ಗ್ರಾಮ ಪಂಚಾಯಿತಿ ತಿ.ನರಸೀಪುರ: ಗ್ರಾಮೀಣ ಆಡಳಿತ ಸಂಸ್ಥೆಯಾಗಿ…

13 mins ago

ರಾಮಕೃಷ್ಣನಗರ ಉದ್ಯಾನ: ಸಂಪೂರ್ಣ ಅಧ್ವಾನ!

ಕೆ.ಪಿ.ಮದನ್ ಮೈಸೂರು: ಬಾಗಿಲಿಗೆ ಬೀಗವಿಲ್ಲದೆ ವರ್ಷ ಪೂರ್ತಿ ತೆರೆದೇ ಇರುವ ಉದ್ಯಾನ.., ನೀರಿಲ್ಲದೆ ನಲುಗುತ್ತಿರುವ ಸಸಿಗಳು.., ಹಸಿರು ಕಂಡು ಪಾರ್ಕ್‌ಗೆ…

17 mins ago

ಜೂಜಾಟ, ಮದ್ಯ ಅಕ್ರಮ ಮಾರಾಟಕ್ಕೆ ಲಕ್ಷ  ರೂ. ದಂಡ!

ಗುಂಡ್ಲುಪೇಟೆ: ಇತ್ತೀಚಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಯುವಕರು, ವಯಸ್ಕರು ಮದ್ಯ ವ್ಯಸನ ಹಾಗೂ ಜೂಜಾಟಗಳಿಗೆ ಬಲಿಯಾಗುತ್ತಿರುವುದು ಹೆಚ್ಚಾಗುತ್ತಿದ್ದು ಹಾಗೂ ಅಶಾಂತಿಗೆ…

26 mins ago