ದೇಶ- ವಿದೇಶ

ದಿಲ್ಲಿ ಸ್ಫೋಟದ ಆರೋಪಿ ಡಾ.ಉಮರ್‌ ಮನೆ ನೆಲಸಮ : ಮುಂದುವರೆದ ತನಿಖೆ

ಪುಲ್ವಾಮಾ : ನವೆಂಬರ್ 10ರಂದು ದೆಹಲಿಯ ಕೆಂಪು ಕೋಟೆ ಬಳಿ ಭೀಕರ ಕಾರು ಸ್ಫೋಟದ ಮುಖ್ಯ ಆರೋಪಿ ಡಾ.ಉಮರ್ ನಬಿ ಅಲಿಯಾಸ್ ಉಮರ್ ಉನ್-ನಬಿಯ ಕಾಶ್ಮೀರದ ಮನೆಯನ್ನು ಭದ್ರತಾ ಪಡೆಗಳು ನೆಲಸಮಗೊಳಿಸಿವೆ.

ಉಮರ್ ಮನೆ ಧ್ವಂಸವು ಭಯೋತ್ಪಾದಕರಿಗೆ ಕಠಿಣ ಸಂದೇಶ ರವಾನಿಸಿದೆ. ಇಂತಹ ಕೃತ್ಯಗಳು ಎಷ್ಟೇ ದೊಡ್ಡ ಬೆಲೆ ತೆರಬೇಕಾದರೂ ತೆರಬೇಕು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿದೆ. ತನಿಖೆ ಇನ್ನೂ ಮುಂದುವರಿದಿದೆ. ಉಳಿದ ಜಾಲ ಸದಸ್ಯರ ಪತ್ತೆಗೆ ದೇಶಾದ್ಯಂತ ಶೋಧ ಚುರುಕುಗೊಂಡಿದೆ. ಈ ಘಟನೆ ಒಂದು ಭೀಕರ ಎಚ್ಚರಿಕೆಯಾಗಿದೆ.

ಕಳೆದ ಮಧ್ಯರಾತ್ರಿ ಪುಲ್ವಾಮಾ ಜಿಲ್ಲೆಯ ಕೊಯಿಲ್ ಗ್ರಾಮದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಡಾ. ಉಮರ್ ನಬಿಯನ್ನು ಆತ್ಮಹತ್ಯಾ ಬಾಂಬರ್ ಎಂದು ಗುರುತಿಸಲಾಗಿದ್ದು, ಆತನ ಮನೆಯಲ್ಲಿ ಭದ್ರತಾ ಪಡೆಗಳು ಧ್ವಂಸ ಮಾಡಿದ್ದಾರೆ.

ಸೋಮವಾರ ಸಂಜೆ ಸುಮಾರು 6:50ಕ್ಕೆ ಸ್ಫೋಟಕಗಳಿಂದ ತುಂಬಿದ ಹುಂಡೈ ಐ20 ಕಾರನ್ನು ಡಾ. ಉಮರ್ ಚಲಾಯಿಸಿ ಕೆಂಪು ಕೋಟೆ ಬಳಿ ಸ್ಫೋಟಿಸಿದ್ದ. ಈ ದಾಳಿಯಲ್ಲಿ 13 ಜನರು ಸಾವನಪ್ಪಿದ್ರೆ, ಹಲವರು ಗಾಯಗೊಂಡಿದ್ದಾರೆ. ಸ್ಫೋಟದ ಆಘಾತಕ್ಕೆ ಸುತ್ತಮುತ್ತಲಿನ ವಾಹನಗಳು ಛಿದ್ರಗೊಂಡು, ಹಲವು ಸಾವು ನೋವುಗಳು ಸಂಭವಿಸಿವೆ. ತನಿಖೆಯಲ್ಲಿ ಸ್ಫೋಟ ಸ್ಥಳದಿಂದ ಸಂಗ್ರಹಿಸಿದ ಡಿಎನ್‍ಎ ಮಾದರಿಗಳು ಉಮರ್ ತಾಯಿಯ ಡಿಎನ್‍ಎಗೆ ಹೊಂದಿಕೊಂಡಿದ್ದು, ಆತನೇ ಸ್ಫೋಟಕಾರಿ ಎಂಬುದು 100% ದೃಢಪಟ್ಟಿದೆ.

ಇದನ್ನು ಓದಿ: ಕರ್ನಾಟಕದ ಜೈಲುಗಳು ಭಯೋತ್ಪಾದಕರಿಗೆ ಸ್ವರ್ಗವಿದ್ದಂತೆ: ಆರ್.‌ಅಶೋಕ್‌ ಆಕ್ರೋಶ

ತನ್ನ ಊರಿನಲ್ಲಿ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿದ ವೈದ್ಯ ಎಂದು ಹೆಸರಾಗಿದ್ದ ಉಮರ್ ಕಳೆದ ಎರಡು ವರ್ಷಗಳಲ್ಲಿ ತೀವ್ರವಾದಿಯಾಗಿ ಮಾರ್ಪಟ್ಟಿದ್ದ. ಸಾಮಾಜಿಕ ಜಾಲತಾಣದಲ್ಲಿ ಮೂಲಭೂತವಾದಿ ಗುಂಪುಗಳನ್ನು ಸೇರಿಕೊಂಡು ತೀವ್ರ ಸಂದೇಶಗಳನ್ನು ಕಳುಹಿಸುತ್ತಿದ್ದ ಎಂಬ ಆರೋಪವಿದೆ. ಸಿಸಿಟಿವಿ ದೃಶ್ಯಗಳಲ್ಲಿ ಆತನ ಚಲನವಲನ ಸ್ಪಷ್ಟವಾಗಿ ಕಂಡುಬಂದಿದೆ. ಸ್ಫೋಟಕ್ಕೆ 24 ನಿಮಿಷ ಮೊದಲು ಸುನೇಹ್ರಿ ಮಸೀದಿ ಪಾರ್ಕಿಂಗ್‍ನಲ್ಲಿ ಮಧ್ಯಾಹ್ನ 3:19ಕ್ಕೆ ಕಾರು ನಿಲ್ಲಿಸಿ, ಸಂಜೆ 6:28ಕ್ಕೆ ಹೊರಟಿದ್ದ ದೃಶ್ಯವೂ ಸಿಕ್ಕಿದೆ.

`ವೈಟ್ ಕಾಲರ್” ಭಯೋತ್ಪಾದಕ ಮಾಡ್ಯೂಲ್‍ನ ಪ್ರಮುಖ ಸದಸ್ಯ ಈ ಡಾ. ಉಮರ್ ನಬಿ. ಜೈಶ್-ಎ-ಮೊಹಮ್ಮದ್, ಅನ್ಸರ್ ಘಜ್ವತ್-ಉಲ್-ಹಿಂದ್ ಜೊತೆ ಸಂಪರ್ಕ ಹೊಂದಿದ್ದ ಈ ಜಾಲವನ್ನು ಪೊಲೀಸರು ಭೇದಿಸಿ ಮೂರು ವೈದ್ಯರು ಸೇರಿ ಎಂಟು ಜನರನ್ನು ಬಂಧಿಸಿದ್ದರು. ಜಮ್ಮು-ಕಾಶ್ಮೀರ, ಹರಿಯಾಣ, ಉತ್ತರ ಪ್ರದೇಶದಲ್ಲಿ 3,000 ಕೆಜಿ ಅಮೋನಿಯಂ ನೈಟ್ರೇಟ್, ಪೊಟ್ಯಾಸಿಯಂ ಕ್ಲೋರೇಟ್, ಸಲ್ಫರ್ ವಶಪಡಿಸಿಕೊಳ್ಳಲಾಗಿದೆ.
ಅಧಿಕಾರಿಗಳ ಮಾಹಿತಿಯ ಪ್ರಕಾರ, ಈ ಸ್ಫೋಟವನ್ನು ಯೋಜಿತ ಪಿತೂರಿಯ ಭಾಗವಾಗಿ ನಡೆಸಲಾಗಿತ್ತು ಎಂದು ಹೇಳಬಹುದು. ಡಾ.ನಬಿ ಮತ್ತು ಡಾ. ಮುಜಮ್ಮಿಲ್ ಡೈರಿಗಳನ್ನು ಡಾ. ಉಮರ್ ಕೊಠಡಿ ಸಂಖ್ಯೆ ನಾಲ್ಕು ಮತ್ತು ಮುಜಮ್ಮಿಲ್ ಕೊಠಡಿ ಸಂಖ್ಯೆ 13 ರಿಂದ ವಶಪಡಿಸಿಕೊಳ್ಳಲಾಗಿದೆ. ಅದು ಯೋಜನೆಯ ಪಿತೂರಿಯನ್ನು ಬಯಲು ಮಾಡಿದೆ.

ಡಾ. ಉಮರ್ ಮತ್ತು ಡಾ. ಮುಜಮ್ಮಿಲ್ ಅವರ ಡೈರಿಗಳನ್ನು ಭದ್ರತಾ ಸಂಸ್ಥೆಗಳು ವಶಪಡಿಸಿಕೊಂಡಿದ್ದು, ಈ ಡೈರಿಯಲ್ಲಿ ಸುಮಾರು 25 ವ್ಯಕ್ತಿಗಳ ಹೆಸರುಗಳಿವೆ. ಹೆಚ್ಚಿನವರು ಜಮ್ಮು-ಕಾಶ್ಮೀರ ಮತ್ತು ಫರಿದಾಬಾದ್ ಮೂಲದವರು. ಮಂಗಳ-ಬುಧವಾರ ಉಮರ್‍ನ ಕೊಠಡಿ ಸಂಖ್ಯೆ 4 ಮತ್ತು ಮುಜಮ್ಮಿಲ್‍ನ ಕೊಠಡಿ ಸಂಖ್ಯೆ 13ರಿಂದ ಡೈರಿಗಳು ವಶಕ್ಕೆ ಪಡೆಯಲಾಗಿದೆ. ಅಲ್-ಫಲಾಹ್ ವಿಶ್ವವಿದ್ಯಾಲಯದಿಂದ ಕೇವಲ 300 ಮೀಟರ್ ದೂರದ ಧೌಜ್‍ನಲ್ಲಿ 360 ಕೆಜಿ ಸ್ಫೋಟಕಗಳು ಪತ್ತೆಯಾಗಿದೆ.

ಡೈರಿಗಳು ಕೆಲವು ಸಂಕೇತ ಪದಗಳನ್ನು ಹೊಂದಿವೆ. ತನಿಖಾಧಿಕಾರಿಗಳು ಅವುಗಳನ್ನು ಒಟ್ಟುಗೂಡಿಸುತ್ತಿದ್ದಾರೆ. ಇದರಲ್ಲಿ ಭಾರತದ ನಾಲ್ಕು ಸ್ಥಳಗಳಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಇಂಡಿಯಾ ಗೇಟ್?, ಕಾಶಿ, ಅಯೋಧ್ಯೆಯಂತಹ ಪ್ರಮುಖ ಸ್ಥಳಗಳನ್ನು ಉಗ್ರರು ಟಾರ್ಗೆಟ್? ಮಾಡಿಕೊಂಡಿದ್ದರು ಎಂಬುದು ಬಯಲಾಗಿದೆ.

ಆಂದೋಲನ ಡೆಸ್ಕ್

Recent Posts

3 ಮಸೂದೆಗಳಿಗೆ ರಾಜ್ಯಪಾಲರ ನಕಾರ

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಸೂದೆ ವಾಪಸ್ ದ್ವೇಷ ಭಾಷಣ, ಅಪರಾಧಗಳ ಪ್ರತಿಬಂಧಕ ಮಸೂದೆಯೂ ಹಿಂದಕ್ಕೆ ಬೆಂಗಳೂರು :…

12 mins ago

ಮೈಸೂರು | ಬೃಹತ್ ಮೈಸೂರು ಮಹಾನಗರ ಪಾಲಿಕೆ ರಚನೆಗೆ ಸಿದ್ಧತೆ

ಎರಡು ದಶಕಗಳ ಕೂಗು,ಬೇಡಿಕೆ ಈಡೇರಿಕೆ ಮೈಸೂರು : ಮೈಸೂರಿನ ಲಕ್ಷಾಂತರ ಜನರ ಎರಡು ದಶಕದ ಕನಸು, ಬೇಡಿಕೆ ನನಸಾಗುವ ಕಾಲ…

25 mins ago

ಮುಂದಿನ ಚುನಾವಣೆಯಲ್ಲಿ NDA 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುತ್ತೆ : ನಿಖಿಲ್ ಕುಮಾರಸ್ವಾಮಿ ಭರವಸೆ

ಬೆಂಗಳೂರು : ಮುಂದಿನ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಎನ್ಡಿಎ ಮೈತ್ರಿಕೂಟವು 150 ಕ್ಷೇತ್ರಗಳಲ್ಲಿ ಜಯ…

5 hours ago

ಪ್ರತ್ಯೇಕವಾಗಿದ್ದ ದಂಪತಿ ನಡುವೆ ಕಿರಿಕ್ ; ಪತ್ನಿ ಕೊಲೆಯಲ್ಲಿ ಅಂತ್ಯ

ನಂಜನಗೂಡು : ಎರಡು ವರ್ಷಗಳಿಂದ ಪತ್ನಿಯಿಂದ ದೂರವಾಗಿದ್ದ ಪತಿ ರಾತ್ರೋರಾತ್ರಿ ದಿಢೀರನೆ ಪ್ರತ್ಯಕ್ಷವಾಗಿ ಪತ್ನಿಯನ್ನು ಕೊಂದಿರುವ ಘಟನೆ ನಂಜನಗೂಡು ತಾಲೂಕಿನ…

5 hours ago

ಸಿಎಂ ಕ್ಷೇತ್ರದಲ್ಲಿನ ಸಮಸ್ಯೆ ಬಗೆಹರಿಸಿ : ಅಧಿಕಾರಿಗಳಿಗೆ ಯತೀಂದ್ರ ಸೂಚನೆ

ನಂಜನಗೂಡು : ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಆದಷ್ಟು ಬೇಗ ಸಮಸ್ಯೆಗಳಿಗೆ ಸ್ಪಂದಿಸುವ…

5 hours ago

ಸಂಕ್ರಾಂತಿ ವಿಶೇಷ : ಮೈಸೂರು – ಟ್ಯುಟಿಕಾರನ್‌ ನಡುವೆ ವಿಶೇಷ ರೈಲು

ಮೈಸೂರು : ಮುಂದಿನ ವಾರ ಸಂಕ್ರಾಂತಿ/ಪೊಂಗಲ್‌ ಹಬ್ಬದ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಹೆಚ್ಚು ಜನರು ಪ್ರಯಾಣಿಸುವುದರಿಂದ ಅವರಿಗೆ ಸೌಲಭ್ಯ ಕಲ್ಪಿಸಲು ಮೈಸೂರು-ಕೊಡಗು…

5 hours ago