ನವದೆಹಲಿ: ವಿಕಸಿತ ಭಾರತಕ್ಕೆ ಶಕ್ತಿ ತುಂಬು ಉದ್ದೇಶದಿಂದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ 2025ರ ಪೂರ್ವಭಾವಿ ಬಜೆಟ್ ಮಂಡಿಸಿತು. ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಅವರು ಸತತ 7ನೇ ಬಾರಿಗೆ ದಾಖಲೆಯ ಬಜೆಟ್ ಮಂಡಿಸಿ ಗಮನ ಸೆಳೆದರು.
ದೇಶದ ಜನರಿಗೆ ಈ ಬಾರಿಯ ಬಜೆಟ್ ಮೇಲೆ ಹೆಚ್ಚಿನ ಕಣ್ಣಾಗಿದ್ದು, ಪ್ರಮುಖವಾಗಿ ಮಧ್ಯಮ ವರ್ಗದ ಕುಟುಂಬಗಳು ಯಾವುದಕ್ಕೆಲ್ಲಾ ಬೆಲೆ ದುಬಾರಿ, ಯಾವುದಕ್ಕೆಲ್ಲಾ ಬೆಲೆ ಅಗ್ಗ ಎಂಬ ಬಗ್ಗೆಯೇ ಹೆಚ್ಚಾಗಿ ಗಮನ ಹರಿಸುತ್ತಾರೆ.
ಜನಸಾಮಾನ್ಯರನ್ನೇ ಗಮನದಲ್ಲಿಟ್ಟುಕೊಂಡು ಈ ಬಾರಿಯ ಬಜೆಟ್ ಮಂಡಿಸಿರುವ ಸರ್ಕಾರ ಕೆಲವು ಸರಕು ಸೇವೆಗಳಿಗೆ ಬೆಲೆ ಹೆಚ್ಚು ಮಾಡಿದ್ದರೇ, ಇನ್ನು ಕೆಲವುಗಳಿಗೆ ಇಳಿಕೆ ಮಾಡಿದೆ.
ಯಾವೆಲ್ಲಾ ವಸ್ತುಗಳಿಗೆ ಬೆಲೆ ಏರಿಕೆ ಹಾಗೂ ಇಳಿಕೆಯಾಗಿದೆ ಎಂಬ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ!
ಇವುಗಳೆಲ್ಲಾ ತುಟ್ಟಿ!
* ಆಮದು ಮಾಡಿಕೊಳ್ಳುವ ವಿವಿಧ ರೀತಿಯ ಬಟ್ಟೆ, ವಸ್ತುಗಳ ಮೇಲಿನ ಬೆಲೆ ಏರಿಕೆ
* ಮರು ಬಳಕೆಯಾಗದ ಎಲ್ಲಾ ರೀತಿಯ ಪ್ಲಾಸ್ಟಿಕ್ ವಸ್ತುಗಳ ಮೇಲಿನ ಬೆಲೆ ಏರಿಕೆ
* ವಿದ್ಯುತ್ ಉಪಕರಣ
* ಪಿವಿಸಿ ಫ್ಲೆಕ್ಸ್ ಬ್ಯಾನರ್ಗಳು
* ಸ್ಟೇಟ್ ಸ್ಟ್ಯಾಂಪ್ ಡ್ಯೂಟಿ ಹೆಚ್ಚಳಕ್ಕೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ
* ಟೆಲಿಕಾಂ ಉಪಕರಣಗಳು
ಇವುಗಳೆಲ್ಲಾ ಅಗ್ಗ!
* ಕ್ಯಾನ್ಸರ್ ಔಷಧಗಳ ಮೇಲಿನ ದರ ಇಳಿಕೆ
* ಮೊಬೈಲ್ ಫೋನ್, ಚಾರ್ಜರ್ ಹಾಗೂ ಬಿಡಿ ಭಾಗಗಳು
* ಸೋಲಾರ್ ಪ್ಯಾನೆಲ್
* ವೈದ್ಯಕೀಯ ಎಕ್ಸ್-ರೇ ಯಂತ್ರಗಳು
* ಪಾದರಕ್ಷೆಗಳು
* ಜವಳಿ
* ಚಿನ್ನ, ಬೆಳ್ಳಿ, ಪ್ಲಾಟಿನಂ
* ಟಿವಿ, ವಿದೇಶಿ ಬಟ್ಟೆಗಳು, ಚರ್ಮೋತ್ಪನ್ನಗಳು
* ಮೀನು ಮತ್ತು ಸಿಗಡಿ ಆಹಾರ
ಬೆಂಗಳೂರು : ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ಜಾತಿಗಳ ಮೀಸಲಾತಿ ಪ್ರಮಾಣವನ್ನು ಶೇ.56ಕ್ಕೆ ಹೆಚ್ಚಳ…
ಹೊಸದಿಲ್ಲಿ : ಹಿರಿಯ ನಟ ಧರ್ಮೇಂದ್ರ, ದಂತಕಥೆ ಹಿನ್ನೆಲೆ ಗಾಯಕಿ ಅಲ್ಕಾ ಯಾಜ್ಞಿಕ್, ಮಲಯಾಳಂ ಸಿನಿಮಾ ದಿಗ್ಗಜ ಮಮ್ಮುಟ್ಟಿ, ಬಂಗಾಳಿ…
ಹೊಸದಿಲ್ಲಿ : ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಅಪಾಯ ಹೊರಗಿನಿಂದಲ್ಲ, ‘ಆಂತರಿಕ ವ್ಯವಸ್ಥೆ’ಯಿಂದಲೇ ಇದೆ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಉಜ್ಜಲ್…
ಬೆಂಗಳೂರು : ಅಧಿಕಾರಿಗಳು ಜನಪ್ರತಿನಿಧಿಗಳ ದೂರವಾಣಿ ಕರೆಯನ್ನು ಸ್ವೀಕರಿಸಲೇಬೇಕು ಎಂಬ ಸುತ್ತೋಲೆಯನ್ನು ಹೊರಡಿಸುವ ಮೂಲಕ ಸರ್ಕಾರಿ ಅಧಿಕಾರಿಗಳಿಗೆ ರಾಜ್ಯ ಸರ್ಕಾರ…
ಮೈಸೂರು : ಹೊಸದಿಲ್ಲಿಯಲ್ಲಿ ಬುದ್ಧಗಯಾ ವಿಮೋಚನೆ ಐತಿಹಾಸಿಕ ಚಳವಳಿಯಲ್ಲಿ ಬೌದ್ಧ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಬೌದ್ಧ ಚಿಂತಕ,…
ಮೈಸೂರು : ರಥಸಪ್ತಮಿ ಅಂಗವಾಗಿ ನಗರದಲ್ಲಿ ಭಾನುವಾರ ಅರಮನೆ ಸೇರಿದಂತೆ ವಿವಿಧೆಡೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸೂರ್ಯನಿಗೆ ನಮಿಸಲಾಯಿತು.…