ಮುಂಬೈ : ಬಾಲಿವುಡ್ ಸಿನಿಮಾರಂಗದಲ್ಲಿ 7 ದಶಕಗಳ ಕಾಲ ಕಲಾ ಸೇವೆಯನ್ನು ಸಲ್ಲಿಸಿದ ನಟಿ ಕಾಮಿನಿ ಕೌಶಾಲ್ ನಿಧನ ಹೊಂದಿದ್ದಾರೆ.
98 ವರ್ಷದ ಹಿರಿಯ ನಟಿ ಕಾಮಿನಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಶುಕ್ರವಾರ (ನ.14) ನಟಿ ವಿಧಿವಶರಾಗಿದ್ದಾರೆ. 1946ರಲ್ಲಿ ತೆರೆಕಂಡ ನೀಚಾ ನಗರ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕಾಮಿನಿ ಕೌಶಾಲ್ 70 ವರ್ಷದ ಚಿತ್ರರಂಗದಲ್ಲಿ ಹಲವು ರೀತಿಯ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಕಾಮಿನಿ ಕೌಶಾಲ್ ಧೋ ಭಾಯಿ, ಜಿದ್ದಿ, ಶಬ್ನಮ್, ನಮೂನಾ, ಝಂಜಾರ್, ಬಡೆ ಸರ್ಕಾರ್, ನೈಟ್ ಕ್ಲಬ್, ಗೋದಾನ್, ಪ್ರೇಮ್ ನಗರ್, ಮಹಾ ಚೋರ್ ಮುಂತಾದ ಸಿನಿಮಾಗಳಲ್ಲಿ ನಟಿಸುವ ಮೂಲಕ ತಮ್ಮದೇ ಛಾಪು ಮೂಡಿಸಿದ್ದರು. ಅಂದಹಾಗೆ ಕಾಮಿನಿ ಕೌಶಾಲ್ ಮೂಲ ಹೆಸರು ಉಮಾ ಕಶ್ಯಪ್. ಸಿನಿಮಾ ರಂಗಕ್ಕೆ ಬಂದ ಬಳಿಕ ಕಾಮಿನಿ ಕೌಶಾಲ್ ಆಗಿದ್ದಾರೆ.
ಇದನ್ನು ಓದಿ: ಸಾಲುಮರದ ತಿಮ್ಮಕ್ಕ ಇನ್ನಿಲ್ಲ
ದಿಗ್ಗಜ ನಟಿ ಕಾಮಿನಿ ಕೌಶಾಲ್ ಲಾಹೋರ್‌ನಲ್ಲಿ ಜನಿಸಿದರು. ಇವರು ಉತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿದ ಕುಟುಂಬದಿಂದ ಬಂದವರಾಗಿದ್ದರು. ಇವರ ತಂದೆ ಶಿವರಾಮ್ ಕಶ್ಯಪ್ ಸಸ್ಯಶಾಸ್ತ್ರಜ್ಞರಾಗಿದ್ದರು. ಕಾಮಿನಿ ಕೌಶಾಲ್ ಚಿಕ್ಕಂದಿನಿಂದಲೇ ಕುದುರೆ ಸವಾರಿ, ಭರತನಾಟ್ಯ, ಈಜು, ಕರಕುಶಲ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಅಲ್ಲದೇ ರಂಗಭೂಮಿ, ರೇಡಿಯೋ ನಾಟಕಗಳು ಮುಂತಾದ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದರು.
2022ರಲ್ಲಿ ತೆರೆಕಂಡ ಲಾಲ್‌ಸಿಂಗ್ ಚಡ್ಡಾ ಸಿನಿಮಾದಲ್ಲಿ ಕಾಮಿನಿ ಕೌಶಾಲ್ ಕಾಣಿಸಿಕೊಂಡಿದ್ದರು. 2025ರ ಫೆಬ್ರವರಿಯಲ್ಲಿ 98ನೇ ವರ್ಷದ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದ ದಿಗ್ಗಜ ನಟಿ ಕಾಮಿನಿ ಕೌಶಾಲ್ ಇಹಲೋಕ ತ್ಯಜಿಸಿದ್ದಾರೆ. ನಟಿ ಸಾವಿಗೆ ಇಡೀ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ.
ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡಿದ ಜಿಲ್ಲಾ ಪೊಲೀಸ್ ಅಧಿಕ್ಷಕಿ ಡಾ.ವಿ.ಜೆ.ಶೋಭಾರಾಣಿ ಮಂಡ್ಯ : ಯುವಜನತೆ ರಸ್ತೆ ಸುರಕ್ಷತಾ…
ಮದ್ದೂರು : ತಾಲ್ಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಮವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಚಿಂತನೆ ನಡೆದಿದ್ದು, ಮುಂದಿನ ದಿನಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು…
ಬೆಂಗಳೂರು : ರಾಜ್ಯದಲ್ಲಿ ಶೇ 75% ರಷ್ಟು ಸಣ್ಣ ಮತ್ತು ಅತೀ ಸಣ್ಣ ರೈತರಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು…
ಹನೂರು : ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹಾಗೂ ದ್ವಿಚಕ್ರ ವಾಹನದಲ್ಲಿ ತೆರಳುವುದಕ್ಕೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ. ಅರಣ್ಯ ಇಲಾಖೆ…
ಮೈಸೂರು : ಮುಡುಕುತೊರೆ ಭ್ರಮರಾಂಬ ಸಮೇತ ಶ್ರೀ ಮಲ್ಲಿಕಾರ್ಜುನಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಧಾರ್ಮಿಕ ಮತ್ತು ದತ್ತಿ ಇಲಾಖೆ ಹಾಗೂ…
ಹನೂರು : ಪ್ರತಿಯೊಬ್ಬ ವಿದ್ಯಾರ್ಥಿಗೂ ದ್ವಿತೀಯ ಪಿಯುಸಿ ಒಂದು ಪ್ರಮುಖ ಘಟವಾಗಿದ್ದು, ವಿದ್ಯಾರ್ಥಿಗಳು ತಮ್ಮ ಜೀವನವನ್ನು ರೂಪಿಸಿಕೊಳ್ಳುವಲ್ಲಿ ಒಂದು ಗುರಿ…