ದೇಶ- ವಿದೇಶ

ರೈಲು ಪ್ರಯಾಣಿಕರಿಗೆ ಮತ್ತೊಂದು ಶಾಕ್

ಹೊಸದಿಲ್ಲಿ : ರೈಲು ಪ್ರಯಾಣ ಆರಂಭವಾಗುವ 8 ಗಂಟೆ ಮೊದಲು ನಿಮ್ಮ ಟಿಕೆಟ್ ರದ್ದುಪಡಿಸದಿದ್ದರೆ ಟಿಕೆಟ್‌ನ ಸಂಪೂರ್ಣ ಹಣ ಖೋತಾ ಆಗಲಿದೆ. ಟಿಕೆಟ್ ವಿತರಣೆ ಮತ್ತು ಮರುಪಾವತಿ ನೀತಿಯಲ್ಲಿ ಪ್ರಮುಖ ಬದಲಾವಣೆ ತರುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಈ ಗಮನಾರ್ಹ ಬದಲಾವಣೆಯನ್ನು ಬುಧವಾರದಿಂದ ಜಾರಿಗೆ ತಂದಿದೆ.

ಏ.1ರಿಂದ ರೈಲು ಹೊರಡುವ 8 ಗಂಟೆ ಮೊದಲು ಟಿಕೆಟ್ ರದ್ದುಗೊಳಿಸದಿದ್ದರೆ ನಿಮ್ಮ ಹಣ ರೀಫಂಡ್ ಆಗುವುದಿಲ್ಲ. ನೀವು ನಿಮ್ಮ ಪ್ರಯಾಣ ರದ್ದುಗೊಳಿಸಬೇಕಾದರೆ ರೈಲು ಪ್ರಯಾಣ ಆರಂಭವಾಗುವ 8 ಗಂಟೆ ಮೊದಲು ಟಿಕೆಟ್ ರದ್ದು ಮಾಡಬೇಕಾಗುತ್ತದೆ.

ನಿರ್ಗಮನಕ್ಕೆ 24 ಗಂಟೆಗಳಿಂದ 8 ಗಂಟೆಗಳ ಮೊದಲು ಮಾಡಿದ ರದ್ದತಿಗೆ, ಪ್ರಯಾಣಿಕರು ಶೇ.50ರಷ್ಟು ಮರುಪಾವತಿಗೆ ಅರ್ಹರಾಗಿರುತ್ತಾರೆ. ಪ್ರಯಾಣಕ್ಕೆ 71 ಗಂಟೆಗಳಿಂದ 24 ಗಂಟೆಗಳ ಮೊದಲು ರದ್ದತಿ ಮಾಡಿದರೆ, ಶೇ.75ರಷ್ಟು ಮರುಪಾವತಿಯನ್ನು ಒದಗಿಸಲಾಗುತ್ತದೆ. ಇದಕ್ಕೂ ಮೊದಲು, ಪ್ರಯಾಣಕ್ಕೆ 72 ಗಂಟೆಗಳ ಮೊದಲು ರದ್ದುಗೊಳಿಸಿದಾಗಲೂ ಪ್ರಯಾಣಿಕರು ಪೂರ್ಣ ಮರುಪಾವತಿಯನ್ನು ಪಡೆಯುತ್ತಿದ್ದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ನೆಟ್‌ವರ್ಕ್ ಅನ್ನು ಮೇಲ್ದರ್ಜೆಗೇರಿಸುವುದು ಮತ್ತು ಪ್ರಯಾಣಿಕರ ಸೇವೆಯನ್ನು ಉತ್ತಮಪಡಿಸುವ ಉದ್ದೇಶದಿಂದ ಸುಧಾರಣೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದಿದ್ದಾರೆ.

ಪರಿಷ್ಕೃತ ಟಿಕೆಟ್ ರದ್ದತಿ ನಿಯಮ
ನಿರ್ಗಮನಕ್ಕೆ 72 ಗಂಟೆಗಳಿಗಿಂತ ಮೊದಲು ರದ್ದುಪಡಿಸಿದ ದೃಢೀಕೃತ ಟಿಕೆಟ್‌ಗಳಿಗೆ, ಪ್ರಯಾಣಿಕರಿಗೆ ಗರಿಷ್ಟ ಮರುಪಾವತಿ ದೊರೆಯುತ್ತದೆ ಮತ್ತು ಪ್ರತಿ ಪ್ರಯಾಣಿಕರಿಗೆ ಕನಿಷ್ಠ ಫ್ಲಾಟ್ ರದ್ದತಿ ಶುಲ್ಕವನ್ನು ಮಾತ್ರ ಕಡಿತಗೊಳಿಸಲಾಗುತ್ತದೆ ಎಂದರು.

ರೈಲ್ವೆ ಇಲಾಖೆ ಆಫ್‌ಲೈನ್ ಟಿಕೆಟ್ ಹೊಂದಿರುವವರಿಗೆ ರದ್ದತಿ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಪ್ರಯಾಣಿಕರು ಈಗ ಯಾವುದೇ ರೈಲ್ವೆ ನಿಲ್ದಾಣದಿಂದ ಟಿಕೆಟ್‌ಗಳನ್ನು ರದ್ದುಗೊಳಿಸಬಹುದು. ಮೂಲತಃ ಟಿಕೆಟ್ ಬುಕ್ ಮಾಡಿದ ನಿಲ್ದಾಣವನ್ನು ಲೆಕ್ಕಿಸದೆ ಹೆಚ್ಚುವರಿಯಾಗಿ, ಪ್ರಯಾಣಿಕರು ಟಿಕೆಟ್‌ನಲ್ಲಿ ಉಲ್ಲೇಖಿಸಲಾದ ನಿರ್ಗಮನ ನಿಲ್ದಾಣದ ನಂತರ ಇರುವ ನಿಲ್ದಾಣದಿಂದ ರೈಲು ಹತ್ತಬಹುದು.

 

ಆಂದೋಲನ ಡೆಸ್ಕ್

Recent Posts

ಚಾ.ನಗರ | ಶೆಡ್‌, 4ಸಾವಿರ ಕೋಳಿ ಬೆಂಕಿಗಾಹುತಿ ; 25 ಲಕ್ಷ ನಷ್ಟ

ಚಾಮರಾಜನಗರ : ತಾಲೂಕಿನ ದೇವರಾಜಪುರ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಕೋಳಿ ಫಾರಂ ಶೆಡ್‌ಗೆ ಬೆಂಕಿ ತಗುಲಿ ಸುಮಾರು 4…

19 mins ago

ಸಿಎನ್‌ಜಿ ಸಮಸ್ಯೆ ಇಲ್ಲ : ಸಚಿವ ಮುನಿಯಪ್ಪ

ದಾವಣಗೆರೆ : ಆಟೋ ರಿಕ್ಷಾಗಳಿಗೆ ಅನಿಲ ಪೂರೈಕೆ ಸಮಸ್ಯೆ ಇಲ್ಲ, ಆದರೂ ವಿನಾಕಾರಣ ಆತಂಕಕ್ಕೊಳಗಾಗಿ ಕ್ಯೂ ನಿಲ್ಲಲಾಗುತ್ತಿದೆ ಎಂದು ಆಹಾರ…

38 mins ago

ಬಲಮುರಿ ಕಾವೇರಿ ನದಿಯಲ್ಲಿ ಮುಳುಗಿ ಯುವಕ ಸಾವು

ಶ್ರೀರಂಗಪಟ್ಟಣ : ಪ್ರವಾಸಕ್ಕೆ ಬಂದಿದ್ದ ಇನ್ಫೋಸಿಸ್ ಉದ್ಯೋಗಿಯೊಬ್ಬರು ಕಾವೇರಿ ನದಿಯಲ್ಲಿ ಈಜಲು ಹೋಗಿ ಮುಳುಗಿ ಸಾವನ್ನಪ್ಪಿದ ಘಟನೆ ಶ್ರೀರಂಗಪಟ್ಟಣ ತಾಲೂಕಿನ…

45 mins ago

ದಿನಗೂಲಿ ನೌಕರರಿಗೂ ಆರೋಗ್ಯ ವಿಮಾ ಸೌಲಭ್ಯ

ಬೆಂಗಳೂರು : ಕರ್ನಾಟಕ ಸರ್ಕಾರವು ದಿನಗೂಲಿ ನೌಕರರು ಮತ್ತು ಅವರ ಅವಲಂಬಿತರಿಗೆ ವಾರ್ಷಿಕ 5 ಲಕ್ಷದವರೆಗೆ ನಗದು ರಹಿತ ಆರೋಗ್ಯ…

58 mins ago

ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಹೈಕೋರ್ಟ್‌ ಅಸ್ತು

ಬೆಂಗಳೂರು : ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ಖರೀದಿ ಹಗರಣ ಸಂಬಂಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್…

1 hour ago

ಜನಗಣತಿಗೆ ಸ್ವಯಂ ಪ್ರೇರಿತರಾಗಿ ಮಾಹಿತಿ ನೀಡಿ ; ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ

ಮೈಸೂರು : ಜಿಲ್ಲೆಯಲ್ಲಿ ಏ.16 ರಿಂದ ಮೇ 15ರವರೆಗೆ ನಡೆಯುವ ಜನಗಣತಿಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಜನಗಣತಿಗೂ ಮುನ್ನ ‘ಸ್ವಯಂ…

1 hour ago