ಚನ್ನೈ: ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಬೀದಿಗಿಳಿದು ವಿಭಿನ್ನವಾಗಿ ಪ್ರತಿಭಟನೆ ಮಾಡುವ ಮೂಲಕ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ.
ಹೌದು…ಅಣ್ಣಾಮಲೈ ಅವರು ಇಂದು ತಮ್ಮ ನಿವಾಸದ ಎದುರು ಛಡಿಏಟು ಬಾರಿಸಿಕೊಂಡು ಪ್ರತಿಭಟನೆ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಹಸಿರು ಮುಂಡು ಧರಿಸಿ, ಶರ್ಟ್ ರಹಿತ ಅಣ್ಣಾಮಲೈ ಮಾಧ್ಯಮ ಪ್ರತಿನಿಧಿಗಳು ಮತ್ತು ಭಾರತೀಯ ಜನತಾ ಪಕ್ಷದ ಸದಸ್ಯರ ಸಮ್ಮುಖದಲ್ಲಿ ಉದ್ದವಾದ, ಬಿಳಿ ಚಾವಟಿಯಿಂದ ಮಗೆ ತಾವೇ ಹೊಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕೆಲ ಬಿಜೆಪಿ ಕಾರ್ಯಕರ್ತರು ನಿಮಗೆ ನಾಚಿಕೆ ಇಲ್ಲವೇ ಸ್ಟಾಲಿನ್?, ಆರೋಪಿ ಜ್ಞಾನಶೇಖರನ್ ಅವರನ್ನು ಗಲ್ಲಿಗೇರಿಸಿ ಮತ್ತು ಶೇಮ್ ಆನ್ ಯೂ ಎಂಬ ಘೋಷಣೆಗಳ ಫಲಕಗಳನ್ನು ಬಿಜೆಪಿ ಬೆಂಬಲಿಗರು ಹಿಡಿದುಕೊಂಡಿದ್ದರು.
ಅಣ್ಣಾಮಲೈ ಅವರನ್ನು ತಡೆಯಲು ಬೆಂಬಲಿಗರು ಧಾವಿಸುವ ಮುನ್ನವೇ ಅವರು ಸುಮಾರು ಎಂಟು ಬಾರಿ ಚಾಟಿ ಯಲ್ಲಿ ಹೊಡೆದುಕೊಂಡಿದ್ದರು. ಸ್ವಯಂ ಚಾಟಿ ಬೀಸಿದ ಬಳಿಕ ಅವರು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು. ತಮಿಳು ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವ ಯಾರಿಗಾದರೂ ಈ ಆಚರಣೆಯ ಮಾರ್ಗಗಳು ಎಂದು ತಿಳಿಯುತ್ತದೆ ಎಂದು ಅವರು ಹೇಳಿದರು.
ನಮನ್ನು ನಾವೇ ಹೊಡೆದುಕೊಳ್ಳುವುದು, ನಮನ್ನು ನಾವೇ ಶಿಕ್ಷಿಸಿಕೊಳ್ಳುವುದು, ಅತ್ಯಂತ ಕಠಿಣವಾದ ಆಚರಣೆಗಳ ಮೂಲಕ ನಮನ್ನು ನಾವು ಹಾಕಿಕೊಳ್ಳುವುದು ಇತ್ಯಾದಿಗಳು ಈ ಸಂಸ್ಕೃತಿಯ ಭಾಗವಾಗಿದೆ. ಇದು ಯಾವುದೇ ವ್ಯಕ್ತಿಯ ವಿರುದ್ಧ ಅಲ್ಲ ಅಥವಾ ಯಾವುದರ ವಿರುದ್ಧವೂ ಅಲ್ಲ. ಇದು ರಾಜ್ಯದಲ್ಲಿ ಆಗುತ್ತಿರುವ ನಿರಂತರ ಅನ್ಯಾಯದ ವಿರುದ್ಧ. ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ ನಡೆದಿರುವುದು ಒಂದು ಟಿಪ್ಪಿಂಗ್ ಪಾಯಿಂಟ್ ಮಾತ್ರ ಎಂದು ಅವರು ಹೇಳಿದ್ದಾರೆ.
ನನ್ನ ಅನೇಕ ಪೂರ್ವಜರು ಈ ಮಾರ್ಗದಲ್ಲಿ ನಡೆದರು ಮತ್ತು ನಾನು ಕೂಡ ಅದನ್ನು ಆರಿಸಿಕೊಂಡಿದ್ದೇನೆ. ಇದು ಉನ್ನತ ಶಕ್ತಿಗೆ ಶರಣಾಗುವ, ದೇವರಿಗೆ ಶರಣಾಗುವ ಪ್ರಕ್ರಿಯೆಯಾಗಿದೆ ಎಂದು ಬಿಜೆಪಿ ರಾಜ್ಯ ಮುಖ್ಯಸ್ಥರು ಸೇರಿಸಿದರು.
ತಮಿಳುನಾಡಿನಲ್ಲಿರುವ ಡಿಎಂಕೆ ಸರ್ಕಾರದಿಂದ ಜನರಿಗೆ ಅನ್ಯಾಯ ಆಗುತ್ತಿದೆ ಎಂದು ಆರೋಪಿಸಿರುವ ಅವರು ಈ ಸರ್ಕಾರ ಹೋಗುವವರೆಗೆ ತಾವು ಕಾಲಿಗೆ ಚಪ್ಪಲಿ ತೊಡುವುದಿಲ್ಲ ಎಂದು ಅವರು ಘೋಷಿಸಿದ್ದರು.
ಗದಗ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಹುಬ್ಬಳ್ಳಿಯೊಂದಿಗೆ ಹತ್ತಿರದ ನಂಟಿದೆ. ಅವರ ಕೊ ಬ್ರದರ್ ಹಾಗೂ ಅವರ…
ನವದೆಹಲಿ: ಡಾ. ಮನಮೋಹನ್ ಸಿಂಗ್ ನಿಧನದ ಹಿನ್ನಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪತ್ರ…
ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯವನ್ನು ಪಾಕಿಸ್ತಾನ ಪ್ರಧಾನಿ ಜೊತೆ…
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ಇಂದು ಚುನಾವಣೆ ನಡೆದಿದ್ದು, ಸತತ 2ನೇ ಬಾರಿಗೆ…
ಬೀಜಿಂಗ್: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನರಾಗಿದ್ದು, ಈ ಹಿನ್ನೆಲೆಯಲ್ಲಿ ಭಾರತ-ಚೀನಾ ಅಭಿವೃದ್ಧಿಗೆ ಸಿಂಗ್ ಅವರ ಕಾರ್ಯ ವೈಖರಿಯನ್ನು ನೆನೆದುಕೊಂಡು…
ಮೈಸೂರು: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನರಾದ ಹಿನ್ನಲೆಯಲ್ಲಿ ಡಿಸೆಂಬರ್.31 ರಂದು ಆಯೋಜಿಸಲಾಗಿದ್ದ ಪೊಲೀಸ್ ಬ್ಯಾಂಡ್ ಮತ್ತು ಪಟಾಕಿ ಪ್ರದರ್ಶನವನ್ನು…