plane crash
ಅಹಮದಾಬಾದ್: ಇಡೀ ದೇಶವೇ ಬೆಚ್ಚಿ ಬೀಳುವಂತೆ ಮಾಡಿದ್ದ ಗುಜರಾತ್‍ನ ಅಹಮದಾಬಾದ್‍ನಲ್ಲಿ ಸಂಭವಿಸಿದ್ದ ಏರ್ ಇಂಡಿಯಾ ವಿಮಾನ ಅಪಘಾತದ ಪ್ರಾಥಮಿಕ ತನಿಖಾ ವರದಿ ಸಲ್ಲಿಕೆಯಾಗಿದ್ದು, ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ವಿಮಾನದ ಎರಡೂ ಎಂಜಿನ್‍ಗಳು ಸ್ಥಗಿತಗೊಂಡಿವೆ. ಆ ನಂತರ ವಿಮಾನ ಪತನವಾಗಿದೆ ಎಂದು ಬಹಿರಂಗಗೊಂಡಿದೆ.
ವಿಮಾನ ಅಪಘಾತ ತನಿಖಾ ಬ್ಯೂರೋ ವರದಿಯಲ್ಲಿ ಪೈಲಟ್‍ಗಳ ಕಾಕ್‍ಪಿಟ್ ಧ್ವನಿ ರೆಕಾರ್ಡಿಂಗ್ ಡೇಟಾವನ್ನು ಉಲ್ಲೇಖಿಸಲಾಗಿದೆ. ಇದರಲ್ಲಿ ವಿಮಾನವು ವಾಯುಪ್ರದೇಶಕ್ಕೆ ತಲುಪಿದ ಕೆಲವೇ ಸೆಕೆಂಡುಗಳಲ್ಲಿ ಡ್ಯುಯಲ್-ಎಂಜಿನ್ ಸ್ಥಗಿತಗೊಂಡಿರುವುದು ಅಪಘಾತಕ್ಕೆ ಕಾರಣ ಎಂದು ಸೂಚಿಸಲಾಗಿದೆ.
ಅಪಘಾತಕ್ಕೆ ಕೆಲ ಸೆಕೆಂಡುಗಳಿಗೂ ಮುನ್ನ ನಡೆದ ಸಂಭಾಷಣೆಯ ಒಂದು ಭಾಗದಲ್ಲಿ ಇದು ತಿಳಿದಿದೆ. ಜೊತೆಗೆ ವಿಮಾನವು 8 ಡಿಗ್ರಿ ಮೂಗು ಮೇಲಕ್ಕೆತ್ತಿದ ಸ್ಥಿತಿಯಲ್ಲಿತ್ತು. ಆದರೆ ಇಂಜಿನ್‍ಗಳು ಆಫ್ ಆಗಿದ್ದವು. ಇದರಿಂದ ವಿಮಾನವು ಏರಲು ಸಾಧ್ಯವಾಗಲಿಲ್ಲ ಎಂದು ವರದಿ ತಿಳಿದಿದೆ.
ವಿಮಾನದ ಎಂಜಿನ್‍ಗೆ ಇಂಧನ ಪೂರೈಕೆ ಸ್ಥಗಿತಗೊಂಡಿರುವುದು ಸೇರಿದಂತೆ ಹಲವಾರು ಪ್ರಮುಖ ವಿಷಯಗಳನ್ನು ಎಎಐಬಿ ಗಮನಸೆಳೆದಿದೆ. ಆದಾಗ್ಯೂ, ತನಿಖಾ ಬ್ಯೂರೋ, ಈ ವರದಿ ಪ್ರಾಥಮಿಕ ಎಂದು ಹೇಳಿದೆ.
ಪ್ರಸ್ತುತ, ಅಪಘಾತದ ವಿವರವಾದ ತನಿಖೆ ನಡೆಯುತ್ತಿದೆ.ಎಎಐಬಿ ಪ್ರಾಥಮಿಕ ವರದಿಯ ಪ್ರಕಾರ, ಟೇಕಾಫ್ ನಂತರ ಎಂಜಿನ್‍ಗಳ ಇಂಧನ ಸ್ವಿಚ್‍ಗಳು ಇದ್ದಕ್ಕಿದ್ದಂತೆ ಬದಲಾದವು. ಈ ಘಟನೆ ಕೇವಲ 1 ಸೆಕೆಂಡ್ ಅಂತರದಲ್ಲಿ ಸಂಭವಿಸಿದೆ. ಈ ಸಮಯದಲ್ಲಿ, ಎಂಜಿನ್‍ಗಳಿಗೆ ಇಂಧನ ಬರುವುದು ನಿಂತುಹೋಗಿದೆ.
ಟೇಕ್ ಆಫ್ ಆದ 3 ಸೆಕೆಂಡ್‍ಗಳ ನಂತರ, ಎರಡೂ ಇಂಜಿನ್‍ಗಳ ಫ್ಯೂಯಲ್ ಕಂಟ್ರೋಲ್ ಸ್ವಿಚ್‍ಗಳು ರನ್‌ನಿಂದ ಕಟ್‍ಆಫ್‍ಗೆ ಬದಲಾದವು. ಇದರಿಂದಾಗಿ ಥ್ರಸ್ಟ್ ಇದ್ದಕ್ಕಿದ್ದಂತೆ ಕಡಿಮೆಯಾಯಿತು. ಅಲ್ಲದೇ ಒಬ್ಬ ಪೈಲಟ್ ನೀವು ಏಕೆ ಕಟ್ ಆಫ್ ಮಾಡಿದ್ರಿ? ಎಂದು ಕೇಳುವುದು ಕೇಳಿಸುತ್ತದೆ. ಅದಕ್ಕೆ ಇನ್ನೊಬ್ಬ ಪೈಲಟ್ ನಾನು ಮಾಡಿಲ್ಲ? ಎಂದು ಉತ್ತರಿಸುತ್ತಾರೆ. ಇದರಿಂದ ತಾಂತ್ರಿಕದೋಷ ಅಥವಾ ಆಕಸ್ಮಿಕವಾಗಿ ಸ್ವಿಚ್ ಆಫ್ ಆಗಿರಬಹುದು ಎಂದು ಶಂಕಿಸಲಾಗಿದೆ.
ನವದೆಹಲಿ: ವರ್ತಕರಿಗೆ ದೀಪಾವಳಿ ಸಂದರ್ಭದಲ್ಲಿ ತಾತ್ಕಾಲಿಕ ನಿರಾಳತೆ ಸಿಕ್ಕಿದೆ. ಅಕ್ಟೋಬರ್ 15ರಿಂದ ಜಾರಿಯಾಗಬೇಕಿದ್ದ ಆಯ್ದ UPI ಮರ್ಚೆಂಟ್ ಪಾವತಿಗಳ ಮೇಲಿನ…
ಮೈಸೂರು: ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ವಿಚಾರಕ್ಕೆ ಸಂಬಂಧಿಸಿದಂತೆ ಪುಟ್ಟರಂಗಶೆಟ್ಟಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. “ಸ್ಟಿಂಗ್ ಆಪರೇಷನ್ ಅಂದರೇನು ಎಂಬುದು…
ಮೈಸೂರು: ಸ್ಟಿಂಗ್ ಆಪರೇಷನ್ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುವ ಬದಲು, ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಶಾಸಕ ತನ್ವೀರ್ ಸೇಠ್…
ಮೈಸೂರು: ಅಪಪ್ರಚಾರ ನೋಡ್ಕೊಂಡು ಸುಮ್ಮನಿರಲು ಆಗುತ್ತಾ? ತಂದೆಯವರ ತೇಜೋವಧೆಗೆ ಷಡ್ಯಂತ್ರ ನಡೆಯುತ್ತಿದೆ: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಮೈಸೂರು: ಮಾಜಿ ಮುಖ್ಯಮಂತ್ರಿ…
ನಂಜನಗೂಡು: ಜಮೀನಿಗೆ ರಾತ್ರಿ ಕಾವಲು ಕಾಯಲು ತೆರಳಿದ್ದ ರೈತ, ಬೆಳಿಗ್ಗೆ ಮನೆಗೆ ಮರಳುವಾಗ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ನಂಜನಗೂಡು ತಾಲ್ಲೂಕಿನ…
ಕೆಲವು ಜನಪ್ರತಿನಿಧಿಗಳೂ ಸೇರಿದಂತ ಹಲವು ರಾಜಕಾರಣಿಗಳು ಸಾರ್ವಜನಿಕ ವೇದಿಕೆಗಳಲ್ಲಿ ಹಾಗೂ ಇತರ ಸಭೆ-ಸಮಾರಂಭಗಳಲ್ಲಿ ಪ್ರಜ್ಞಾವಂತರೇನೂ ಸಾಮಾನ್ಯ ಜನರಿಗೂ ಮುಜುಗರವಾಗುವಂತಹ ಮಾತುಗಳನ್ನು…