ನವದೆಹಲಿ: ಒಂದು ದೇಶ ಒಂದು ಚುನಾವಣೆ ಮಸೂದೆ ಪ್ರಸ್ತಾವನೆಯ ವೇಳೆ ಬಿಜೆಪಿಯ 20ಕ್ಕೂ ಹೆಚ್ಚು ಸಂಸದರು ಗೈರಾಗಿದ್ದ ಹಿನ್ನೆಲೆಯಲ್ಲಿ ಪಕ್ಷ ತನಿಖೆ ನಡೆಸಲು ಮುಂದಾಗಿದೆ.
ಒಂದು ದೇಶ ಒಂದು ಚುನಾವಣೆ ಮಸೂದೆಯನ್ನು ನಿನ್ನೆ ಸಂಸತ್‌ನಲ್ಲಿ ಮಂಡಿಸಲಾಗಿದ್ದು, ವಿಸ್ತೃತ ಚರ್ಚೆಗೆಂದು ಜಂಟಿ ಸದನ ಸಮಿತಿಗೆ ಶಿಫಾರಸು ಮಾಡಲಾಗಿದೆ.
ಮಸೂದೆಯ ಪ್ರಸ್ತಾವನೆಗೆ ಮತದಾನ ನಡೆದಿದ್ದು, ಮಸೂದೆ ಪರವಾಗಿ 269 ಮತಗಳು ಬಂದಿವೆ. ಮಸೂದೆಯ ವಿರುದ್ಧವಾಗಿ 198 ಮತಗಳು ಚಲಾವಣೆಯಾಗಿವೆ.
ಇನ್ನು ಅಚ್ಚರಿ ಎಂದರೆ ಎಲ್ಲಾ ಸಂಸದರಿಗೂ ವಿಪ್ ಜಾರಿಯಾಗಿದ್ದರೂ ಆಡಳಿತಾರೂಢ ಬಿಜೆಪಿಯ 20ಕ್ಕೂ ಹೆಚ್ಚು ಸಂಸದರು ಮತದಾನದ ವೇಳೆ ಗೈರು ಹಾಜರಾಗಿದ್ದರು.
ಒಂದು ದೇಶ ಒಂದು ಚುನಾವಣೆ ಮಸೂದೆ ವೇಳೆ ಸದನದಲ್ಲಿ ಎಲ್ಲರೂ ತಪ್ಪದೇ ಹಾಜರಿರಬೇಕು ಎಂದು ಬಿಜೆಪಿ ವಿಪ್ ಜಾರಿ ಮಾಡಿತ್ತು. ಆದರೆ 20ಕ್ಕೂ ಹೆಚ್ಚು ಬಿಜೆಪಿ ಸಂಸದರು ಗೈರಾಗುವ ಮೂಲಕ ಪಕ್ಷದ ಆದೇಶವನ್ನು ಉಲ್ಲಂಘನೆ ಮಾಡಿದ್ದಾರೆ. ಈ ಮೂಲಕ ಸಂಸದರು ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇನ್ನು ಹಲವು ಸಂಸದರು ವೈಯಕ್ತಿಕ ಮತ್ತು ಕೆಲಸಕ್ಕೆ ಸಂಬಂಧಿಸಿದಂತೆ ತಮ್ಮ ಗೈರುಹಾಜರಿಯ ಬಗ್ಗೆ ಮುಂಚಿತವಾಗಿ ತಿಳಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ಬಿಜೆಪಿ ಮಿತ್ರ ಪಕ್ಷಗಳ ನಾಲ್ಕೈದು ಸಂಸದರೂ ಕೂಡ ಮತದಾನದ ವೇಳೆ ಹಾಜರಿರಲಿಲ್ಲ. ಈ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತದೆ ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಇನ್ನು ನಿನ್ನೆ ಒಂದು ದೇಶ, ಒಂದು ಚುನಾವಣೆ ಮಸೂದೆಯನ್ನು ಮೇಘವಾಲ್ ಅವರು ಮತಗಳ ವಿಭಜನೆಯ ನಂತರ ಲೋಕಸಭೆಯಲ್ಲಿ ಮಂಡಿಸಿದರು.
ಚಾಮರಾಜನಗರ: ಗೂಡ್ಸ್ ಆಟೋ ಪಲ್ಟಿಯಾಗಿ 13 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಮಲೆ ಮಹದೇಶ್ವರ…
ಬೆಂಗಳೂರು: ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.…
ಹಾಸನ: ಕಳೆದ ಎರಡು ದಿನಗಳಿಂದ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕಡ್ರಳ್ಳಿ ಗ್ರಾಮದಲ್ಲಿರುವ ಪಟ್ಲ ಬೆಟ್ಟದಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿರುವುದರಿಂದ ಮುಂಜಾಗ್ರತಾ…
ನವದೆಹಲಿ: ಕರೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿಕೆ ಪಕ್ಷದ ಸಂಸ್ಥಾಪಕ ದಳಪತಿ ವಿಜಯ್ ಮೂರನೇ ಬಾರಿಗೆ ಸಿಬಿಐ ಕಚೇರಿಗೆ ಇಂದು…
ದುಬೈ: ಈ ಅವಧಿಯಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ದುಬೈನ್ ಮಾರುಕಟ್ಟೆಗಳು, ಸಮುದ್ರ ತೀರಗಳು ಹಾಗೂ ಐಷಾರಾಮಿ ಹೋಟೆಲ್‌ಗಳು ಈಗ ಜನರಿಲ್ಲದೇ…
ಜೆರುಸೇಲಂ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕ್ಷೇಮವಾಗಿದ್ದಾರೆ. ಅವರು ಸಾವನ್ನಪ್ಪಿದ್ದಾರೆ ಎಂಬ ವರದಿ ಸುಳ್ಳು ಎಂದು ಪ್ರಧಾನಿ ಕಚೇರಿ ಸ್ಪಷ್ಟನೆ…