ನವದೆಹಲಿ: ಅತಿ ಹೆಚ್ಚು ವಾಯು ಮಾಲಿನ್ಯ ನಗರಗಳ ನೂತನ ವರದಿಯೊಂದರಲ್ಲಿ ದೇಶದ ಎರಡು ನಗರಗಳು ಸಹ ಸ್ಥಾನ ಪಡೆದಿದೆ. ವಿಶ್ವದ ಟಾಪ್ 10 ಕಲುಷಿತ ನಗರಗಳ ಪೈಕಿ ದೆಹಲಿ ಹಾಗೂ ಕೋಲ್ಕತ್ತ ಸ್ಥಾನ ಪಡೆದುಕೊಂಡಿದೆ. ಪ್ರಮುಖ ಜಾಗತಿಕ ನಗರಗಳು ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಕ್ಕಿಂತ ಅತಿ ಹೆಚ್ಚು ಕಲುಷಿತಗೊಂಡಿವೆ ಎಂದು ಅಮೆರಿಕ ಮೂಲದ ಸಂಸ್ಥೆಯೊಂದು ಬಿಡುಗಡೆ ಮಾಡಿರುವ ನೂತನ ವರದಿಯು ಹೇಳುತ್ತಿದೆ.
ಪಿಎಂ 2.5 ಅಪಾಯಕಾರಿ ಸೂಕ್ಷ್ಮ ಕಣಗಳನ್ನು ಹಾಗೂ ಸಾರಜನಕ ಡೈ ಆಕ್ಸೈಡ್ ಅತಿ ಹೆಚ್ಚು ಹೊಂದಿರುವ ಜಾಗತಿಕ ಟಾಪ್ 10 ನಗರಗಳ ಎರಡು ಪ್ರತ್ಯೇಕ ಪಟ್ಟಿಯನ್ನು ಅಮೆರಿಕ ಮೂಲದ ಹೆಲ್ತ್ ಎಫೆಕ್ಟ್ಸ್ ಸಂಸ್ಥೆ ಗ್ಲೋಬಲ್ ಏರ್ ಇನಿಶಿಯೇಟೀವ್ ಸ್ಥಿತಿ ಈ ನೂತನ ಪಟ್ಟಿಗಳನ್ನು ಬಿಡುಗಡೆ ಮಾಡಿದೆ. ಪಿಎಂ 2.5 ಅಪಾಯಕಾರಿ ಸೂಕ್ಷ್ಮ ಕಣಗಳನ್ನು ಅತಿ ಹೆಚ್ಚು ಹೊಂದಿರುವ ಪಟ್ಟಿಯಲ್ಲಿ ದೆಹಲಿ ಹಾಗೂ ಕೋಲ್ಕತ್ತ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಟಾಪ್ 2 ಸ್ಥಾನ ಪಡೆದಿದೆ. ಇನ್ನೊಂದೆಡೆ, ಸಾರಜನಕ ಡೈ ಆಕ್ಸೈಡ್ ಅತಿ ಹೆಚ್ಚಿನ ಪ್ರಮಾಣ ಹೊಂದಿರುವ ಪಟ್ಟಿಯಲ್ಲಿ ಚೀನಾದ ಶಾಂಘೈ ಹಾಗೂ ರಷ್ಯಾದ ಮಾಸ್ಕೋ ಟಾಪ್ 2 ಸ್ಥಾನ ಪಡೆದುಕೊಂಡಿದ್ದು, ಕುಖ್ಯಾತ ನಗರಗಳು ಎನಿಸಿಕೊಂಡಿದೆ.
2010 ರಿಂದ 2019 ರವರೆಗಿನ ಮಾಹಿತಿ ಆಧಾರದ ಮೇಲೆ ‘ನಗರಗಳಲ್ಲಿ ವಾಯು ಗುಣಮಟ್ಟ ಹಾಗೂ ಆರೋಗ್ಯ’ ಎಂಬ ವರದಿಯು ಈ ಎರಡು ಪಟ್ಟಿಗಳನ್ನು ತಯಾರು ಮಾಡಿದೆ. ಇನ್ನು, ಕಡಿಮೆ ಹಾಗೂ ಮಧ್ಯಮ ಆದಾಯ ಹೊಂದಿರುವ ದೇಶಗಳಲ್ಲಿ ಪಿಎಂ 2.5 ಮಾಲಿನ್ಯ ಹೆಚ್ಚಿದೆ. ಹಾಗೂ, ಹೆಚ್ಚು ಆದಾಯ ಹೊಂದಿರುವ ರಾಷ್ಟ್ರಗಳು ಮಾತ್ರವಲ್ಲದೆ, ಕಡಿಮೆ ಹಾಗೂ ಮಧ್ಯಮ ಆದಾಯ ಹೊಂದಿರುವ ದೇಶಗಳಲ್ಲಿ ಸಾರಜನಕ ಡೈ ಆಕ್ಸೈಡ್ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದೆ ಎಂದೂ ಅಮೆರಿಕ ಮೂಲದ ಸಂಸ್ಥೆಯ ವರದಿ ಹೇಳುತ್ತದೆ.
2010 ರಿಂದ 2019 ರ ಆಧಾರದ ಮೇಲೆ ಜಗತ್ತಿನ 7,000 ನಗರಗಳಲ್ಲಿ ಈ ಅಧ್ಯಯನ ನಡೆಸಿದ ಬಳಿಕ ಬೋಸ್ಟನ್‌ನಲ್ಲಿ ಈ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಪಿಎಂ 2.5 ಹೆಚ್ಚಿನ ಮಾಳಿನ್ಯ ಹೊಂದಿರುವ ಪಟ್ಟಿಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಗೆ ಅಗ್ರಸ್ಥಾನ, ಕೋಲ್ಕತ್ತ ಎರಡನೇ ಸ್ಥಾನ ಪಡೆದುಕೊಂಡಿದ್ದರೆ, ನೈಜೀರಿಯಾದ ಕಾನೋ ಮೂರನೇ ಸ್ಥಾನ ಪಡೆದುಕೊಂಡಿದೆ. ಅದೇ ರೀತಿ, ಪಾಕಿಸ್ತಾನದ ಕರಾಚಿ ಹಾಗೂ ಚೀನಾದ ಬೀಜಿಂಗ್ ಸಹ ಈ ಟಾಪ್ 10 ಕಲುಷಿತ ನಗರಗಳ ಪಟ್ಟಿಯಲ್ಲಿ ಸ್ಥಾಣ ಪಡೆದುಕೊಂಡಿದೆ.
ಇನ್ನೊಂದೆಡೆ, ಸಾರಜನಕ ಡೈಆಕ್ಸೈಡ್ ಅತಿ ಹೆಚ್ಚು ಪ್ರಮಾಣ ಹೊಂದಿರುವ ಆಧಾರದ ಮೇಲೆ ತಯಾರಾದ ಟಾಪ್ 10 ಪಟ್ಟಿಯಲ್ಲಿ ಶಾಂಘೈ, ಮಾಸ್ಕೋ, ಟೆಹ್ರಾನ್, ಸೇಂಟ್ ಪೀಟರ್ಸ್‌ಬರ್ಗ್, ಬೀಜಿಂಗ್, ಈಜಿಪ್ಟ್ ರಾಜಧಾನಿ ಕೈರೋ, ಟರ್ಕ್‌ಮೆನಿಸ್ತಾನದ ಆಶ್ಗಾಬಾಟ್, ಬೆಲಾರಸ್‌ನ ಮಿನ್ಸ್ಕ್, ಟರ್ಕಿ ದೇಶದ ಇಸ್ತಾನ್‌ಬುಲ್ ಹಾಗೂ ವಿಯೆಟ್ನಾಂನ ಹೋ ಚಿ ಮಿನ್ಹ್ ಸಿಟಿ ಸ್ಥಾನ ಪಡೆದುಕೊಂಡಿದೆ ಎಂದೂ ಈ ವರದಿ ಹೇಳುತ್ತದೆ.
ಅಲ್ಲದೆ, 2050ರ ವೇಳೆಗೆ ಜಗತ್ತಿನ ಶೇ. 68 ರಷ್ಟು ಜನಸಂಖ್ಯೆ ನಗರಗಳಲ್ಲಿ ವಾಸ ಮಾಡುವ ಸಾಧ್ಯತೆ ಇದ್ದು, ಈ ಹಿನ್ನೆಲೆ ವಾಯು ಮಾಲಿನ್ಯ ಇನ್ನೂ ಹೆಚ್ಚಾಗುವ ಆತಂಕವಿದೆ. ಇನ್ನು, ವಿಶ್ವ ಆರೋಗ್ಯಸಂಸ್ಥೆಯ ಡೇಟಾಬೇಸ್ ಪ್ರಕಾರ ಪಿಎಂ 2.5 ಮಟ್ಟವನ್ನು ಜಗತ್ತಿನ 117 ದೇಶಗಳು ಟ್ರ್ಯಾಕ್ ಮಾಡುತ್ತಿದ್ದರೆ, ಎನ್‌ಒ2 ಮಟ್ಟಗಳನ್ನು ಕೇವಲ 74 ದೇಶಗಳು ಮಾತ್ರ ಟ್ರ್ಯಾಕ್ ಮಾಡುತ್ತಿವೆ.
ಬೆಂಗಳೂರು : ಮಾಹಿತಿ ಕೊರತೆ ಅಥವಾ ತಾಂತ್ರಿಕ ತೊಂದರೆಗಳಿಂದಾಗಿ ಅರ್ಹ ರೈತರು ಕುಸುಮ್-ಬಿ ಯೋಜನೆಯಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಕರ್ನಾಟಕ ನವೀಕರಿಸಬಹುದಾದ…
ಮೈಸೂರು : ಡಾ.ಬಿ.ಆರ್.ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ದಹಿಸಿದ ದಿನದ ಅಂಗವಾಗಿ ದಲಿತ ಸಂಘರ್ಷ ಸಮಿತಿ ವತಿಯಿಂದ ಮನುಸ್ಮೃತಿಯನ್ನು ಸುಡುವ ಮೂಲಕ…
ಮೈಸೂರು : ಮೇಲ್ವರ್ಗದ ಯುವತಿಯೊಬ್ಬಳು ದಲಿತ ಯುವಕನನ್ನು ಪ್ರೀತಿಸಿ ಮದುವೆಯಾದ ಕಾರಣಕ್ಕೆ ಸ್ವಂತ ಮಗಳನ್ನೆ ಹೆತ್ತ ಅಪ್ಪ-ಅಮ್ಮ-ಅಣ್ಣಂದಿರು ಕೊಲೆ ಮಾಡುವ…
ಚಾಮರಾಜನಗರ : ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಸುಟ್ಟ ಹಾಕಿದ ದಿನದ ಅಂಗವಾಗಿ ವಿವಿಧ ಸಂಘಟನೆಗಳ ಮುಖಂಡರು…
ಹೊಸದಿಲ್ಲಿ : ಕೇಂದ್ರ ಸಚಿವರಾದ ಅಶ್ವಿನ್ ವೈಷ್ಣವ್ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ನಡುವೆ ಕರ್ನಾಟಕದಲ್ಲಿ ಉದ್ಯೋಗ…
ಬೆಂಗಳೂರು : ಚಿತ್ರದುರ್ಗದ ಹಿರಿಯೂರು ಬಳಿ ಇಂದು ಬೆಳಗಿನ ಜಾವ ಸಂಭವಿಸಿದ ರಸ್ತೆ ಅಪಘಾತದ ಮಾರ್ಗದಲ್ಲಿ ಶಾಲಾ ಮಕ್ಕಳು ಪ್ರಯಾಣಿಸುತ್ತಿದ್ದ…