ಮನೆಯ ಹಿಂಬದಿಯ ಬಾಗಿಲು ಮೀಟಿ ಲಕ್ಷಾಂತರ ರೂ. ನಗದು, ಚಿನ್ನ ಕಳ್ಳತನ

ನಂಜನಗೂಡು: ನಗರದ ಮನೆಯೊಂದರ ಹಿಂಬದಿಯ ಬಾಗಿಲು ಮೀಟಿದ ಕಳ್ಳರು ಮನೆಯಲ್ಲಿದ್ದ ನಗದು ಹಾಗೂ ಬೆಳ್ಳಿ ಬಂಗಾರ ದೋಚಿ ಪರಾರಿಯಾಧ ಘಟನೆ ವರದಿಯಾಗಿದೆ

ನಗರದ ರೋಟರಿ ಶಿಕ್ಷಣ ಸಂಸ್ಥೆಯ ಸಮೀಪ ಮಹೀಲಾ ಮತ್ತೂ ಮಕ್ಕಳ ಇಳಖೆಯ ಸಹಯೋಗದ ಎಮ್ ಎಸ ಬಿ ಯಲ್ಲಿ ಕೆಲಸ ಮಾಡುವ ಅಶ್ವಿನಿ ಎಂಬವರ ಮನೆಯಲ್ಲಿ ಈ ಕಳ್ಳ ತನ ನಡೆದಿದೆ

ಅಶ್ವಿನಿ ಶನಿವಾರ ಮನೆ ಬಾಗಿಲಿಗೆ ಬೀಗ ಹಾಕಿ ತನ್ನ ಪತಿಯಿರುವ ಕೊಳ್ಳೆಗಾಲಕ್ಕೆ ತೆರಳಿದ್ದ ಸಮಯ ಸಾಧಿಸಿದ ದುರಾತ್ಮರು ಶನಿವಾರ ಅಥವಾ ಭಾನುವಾರ ರಾತ್ರಿ ಸಮಯದಲ್ಲಿ ಮನೆಯ ಹಿಂಬದಿಯ ಕಬ್ಬಣದ ಸರಳನ್ನು ಮುರಿದು ನಂತರ ಹಿಂಬಾಗದ ಬಾಗಿಲನ್ನು ಮೀಟಿ ಮನೆ ಪ್ರವೇಶಿಸಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ

ಸೋಮವಾರ ಮನೆಗೆ ಬಂದ ಅಶ್ವಿನಿ ಮನೆಯ ಬೀಗ ತೆಗೆದು ಓಳಹೋದಾಗಲೇ ಅವರಿಗೆ ಕಳ್ಳತನೆ ನಡೆದಿರುವದು ಅರಿವಿಗೆ ಬಂದಿದೆ. ಮನೆಯಲ್ಲಿಟ್ಟಿದ್ದ ನಾಲ್ಕು ಲಕ್ಷ ನಗದು ೪೫೦ ಗ್ರಾಂ ಚಿನ್ನ ಹಾಗೂ ೧ ಕೇ ಜಿ ಬೆಳ್ಳಿ ಪದಾರ್ಥಗನ್ನು ತಮ್ಮ ಮನೆಯಿಂದ ದೋಚಲಾಗಿದೆ ಎಂದು ನಂಜನಗೂಡು ನಗರ ಠಾಣೆಯಲ್ಲಿ ಅವರು ದೂರು ಧಾಖಲಿಸಿದರು

ಸ್ಥಳಕ್ಕೆ ಅಪರ ಪೋಲೀಸ ಅಧಿಕಾರಿನಶಿವಕುಮಾರ, ನಂಜನಗೂಡು ಡಿ ವೈ ಎಸ ಪಿ ಗೋವಿಂದರಾಜು, ವೃತ್ತ ನಿರೀಕ್ಷಕ ಲಕ್ಷಿಕಾಂತ ತಳವಾರ ,ಎಸ ಐ ರವಿ ಕುಮಾರ ಬೇಟಿ ನೀಡಿದ್ದು ಮೈಸೂರಿನಿಂದ ಶ್ವಾನ ದಳ ಮತ್ತೂ ಬೆರಳಚ್ಚು ಗಾರರನ್ನು ಕರೆಸಿ ತನಿಖೆ ಮುಂದುವರಿಸಿದ್ದಾರೆ.

× Chat with us