ಮೈಸೂರು| ಗ್ಯಾಂಗ್ರಿನ್‌ನಿಂದ ಕಾಲು ಕಳೆದುಕೊಂಡ ತಂದೆ, ಬಡತನಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ

ಮೈಸೂರು: ಬಡತನದಿಂದ ಬೇಸತ್ತು ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜನತಾನಗರದಲ್ಲಿ ನಡೆದಿದೆ.

ರಕ್ಷಿತಾ (20) ಮೃತ ದುರ್ದೈವಿ.

ರಕ್ಷಿತಾಳ ತಂದೆ ಮಹದೇವ್‌ ಗ್ಯಾಂಗ್ರಿನ್‌ನಿಂದಾಗಿ ಕಾಲು ಕಳೆದುಕೊಂಡಿದ್ದರು. ಮಹದೇವ್‌ ಆಟೋ ಓಡಿಸಿ ಕುಟುಂಬಕ್ಕೆ ಆಧಾರವಾಗಿದ್ದರು. ತಾಯಿ ಶೀಲಾ ಮನೆ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ತಂದೆಗೆ ಗ್ಯಾಂಗ್ರಿನ್‌ ಆಗಿ ಕಾಲು ಕಳೆದುಕೊಂಡರು. ಹೀಗಾಗಿ, ಕುಟುಂಬ ಆರ್ಥಿಕ ಮುಗ್ಗಟ್ಟುನ್ನು ಎದುರಿಸಬೇಕಾಯಿತು. ಇದರ ಮಧ್ಯೆ ರಕ್ಷಿತಾ ಅನಾರೋಗ್ಯಕ್ಕೆ ತುತ್ತಾಗಿದ್ದರು. ಇದರಿಂದ ಬೇಸತ್ತು ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಈ ಸಂಬಂಧ ಸರಸ್ವತಿಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

× Chat with us