ಮೈಸೂರು: ಹಣವಿಲ್ಲದೆ ಬಸವಳಿಯುತ್ತಿರುವ ಪಟ್ಟಣ ಪಂಚಾಯಿತಿಗಳು!

-ಶ್ರೀಧರ ಆರ್.ಭಟ್ಟ

ವರುಣ: ಕೆಲ ತಿಂಗಳ ಹಿಂದೆ ಗ್ರಾಮ ಪಂಚಾಯಿತಿಯಿಂದ ಬಡ್ತಿಯಾಗಿರುವ ಪಟ್ಣಣ ಪಂಚಾಯಿತಿಗಳೀಗ ಹಣವಿಲ್ಲದೆ ಬಸವಳಿಯತೊಡಗಿವೆ.

ಇವುಗಳ ದುಸ್ಥಿತಿಗೆ ಇವುಗಳಿಗೆ ಬಡ್ತಿ ನೀಡಿದ ಸರ್ಕಾರವೇ ಕಾರಣವಾಗಿದೆ. ಜಿಲ್ಲೆಯ ಶ್ರೀರಾಂಪುರ, ಬೋಗಾದಿಕಡಕೊಳ, ರಮ್ಮನಹಳ್ಳಿ, ಹೂಟಗಳ್ಳಿ ಸೇರಿದಂತೆ ಐದು ಗ್ರಾಮ ಪಂಚಾಯಿತಿಗಳೇ ಅಭಿವೃದ್ಧಿಗಾಗಿ ಬಿಡಿಗಾಸೂ ಇಲ್ಲದೆ ಬಸವಳಿಯುತ್ತಿವೆ. ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮಾರ್ಪಡಿಸಿದ ಸರ್ಕಾರವೇ ಇವುಗಳ ಆರ್ಥಿಕ ಸ್ವಾತಂತ್ರಕ್ಕೆ ಕಲ್ಲು ಹಾಕಿದೆ.

ಗ್ರಾಮ ಪಂಚಾಯಿತಿಗಳಿಗೆ ಮಂಜೂರಾಗಿದ್ದ  ೧೪ ಮತ್ತು ೧೫ನೇ ಹಣಕಾಸು ಈಗ ಇವುಗಳಿಗಿಲ್ಲಅದನ್ನು ನೀಡಿದ ಸರ್ಕಾರವೇ ವಾಪಸ್ ಪಡೆದಿದ್ದು, ಈಗ ಹಣಕಾಸೇ ಇಲ್ಲದೆ ಕಾರ್ಯ ನಿರ್ವಹಿಸುವ ದೈನೇಸಿ ಸ್ಥಿತಿ ಪಟ್ಟಣ ಪಂಚಾಯಿತಿಗಳದ್ದಾಗಿದೆ.

ಇತ್ತ ಹಣಕಾಸು ನಿಯೂ ಇಲ್ಲ, ಅತ್ತ ಬೇರಾವುದೇ ಆದಾಯವೂ ಇಲ್ಲದೆ ಅಭಿವೃದ್ಧಿ ಎಂದರೆ ಹೇಗೆ ಎಂಬ ಪ್ರಶ್ನೆ ಇಲ್ಲಿನ ಅಕಾರಿಗಳನ್ನು ಕಾಡತೊಡಗಿದೆ ಪಂಚಾಯಿತಿಗಳು ಬಡ್ತಿ ಹೊಂದಿದ ಮಾರನೇ ದಿನವೇ ಹಣಕಾಸಿನ ಅನುದಾನದ ಬ್ಯಾಂಕ್ ಖಾತೆ ರದ್ದಾಗಿದ್ದು ಅಲ್ಲಿನ ಸಂಪೂರ್ಣ ಹಣ ವಾಪಸ್ ಪಡೆಯಲಾಗಿದೆ. ಪಟ್ಟಣ ಪಂಚಾಯಿತಿಗೆ ಪುರಸಭೆ ಆನಿಯಮ ೧೯೬೪ ನಿಯಮ ೩೫೭ ಪ್ರಕಾರ ಹಸ್ತಾಂತರ ಡೆದು ಹೊಸಹಣ ಕಾಸು ಬರುವದು ಇನ್ನಾವಾಗಲೋ ಗೊತ್ತಿಲ್ಲ ಅಲ್ಲಿವರೆಗೂ ಇವುಗಳ ಸ್ಥಿತಿ ಶೋಚನೀಯವಾಗಿದ್ದು ಇದಕ್ಕೆ ಸಕಾರದ ಎಡಬಿಡಂಗಿತನವೇ ಕಾರಣ ಎನ್ನಲಾಗಿದೆ.

೧೫ ನೇ ಹಣಕಾಸು ಯೋಜನೆಯಲ್ಲಿ ಪಂಚಾಯಿತಿಗಳಿಗೆ ಮಂಜೂರಾಗಿದ್ದ ಹಣವನ್ನು ಸರ್ಕಾರ ವಾಪಸ್ ಪಡೆದಿದ್ದು, ಅದು ಬರುತ್ತೋ ಇಲ್ಲವೂ ಗೊತ್ತಿಲ್ಲ. ಹಾಗಾಗಿ ನಗರಸಭೆ ಹೂಟಗಳ್ಳಿ ೪೧೦.೧೨, ಲಕ್ಷ ರೂ., ಪಟ್ಟಣ ಪಂಚಾಯಿತಿ ಬೋಗಾದಿ ೧೦೭ ಲಕ್ಷ ರೂ., ಪಟ್ಟಣ ಪಂಚಾಯಿತಿ ಶ್ರೀರಾಂಪುರ ೪೦.೫೦ ಲಕ್ಷ ರೂ., ಪಟ್ಟಣ ಪಂಚಾಯಿತಿ ರಮ್ಮನಹಳ್ಳಿ ೩೧.೬೦ ಲಕ್ಷ ರೂ.,ಪಟ್ಟಣ ಪಂಚಾಯಿತಿ ಕಡಕೊಳ ೩೧.೦೯ ಲಕ್ಷ ರೂ. ಒಟ್ಟಾರೆ ಮೈಸೂರು ಜಿಲ್ಲೆಯ ಐದು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಅಭಿವೃದ್ಧಿಗಾಗಿ ಮಂಜೂರಾಗಿದ್ದ ೬೨೦. ೪೬ ಲಕ್ಷ ರೂ.ಗಳನ್ನು ವಾಪಸ್ ಪಡೆಯಲಾಗಿದ್ದು ಹಣವಿಲ್ಲದೆ ಸಂಸ್ಥೆಗಳನ್ನು ನಡೆಸುವುದು ಹೇಗೆ ಎಂಬುದೇ ಈಗ ಅಕಾರಿಗಳ ಚಿಂತೆಗೆ ಕಾರಣವಾಗಿದೆ.

ರಾಜ್ಯಸರ್ಕಾರದ ನೀತಿನಿಯಮಾವಳಿಗಳ ಪ್ರಕಾರವೇ ಬಡ್ತಿಯಾದ ಇವುಗಳಿಗೆ ಈಗ ಇತ್ತ ಹಣಕಾಸಿನ ಸೌಲಭ್ಯವೂ ಇಲ್ಲ, ಅತ್ತ ೧೧ ಬಿ ಖಾತೆಗಳ ಆದಾಯವೂ ಇಲ್ಲವಾಗಿದೆ. ಏಕೆಂದರೆ ಗ್ರಾಮ ಪಂಚಾಯಿತಿಗಳಿಗಿದ್ದ ೧೧ ಬಿ ಅಕಾರ ಪಟ್ಟಣ ಪಂಚಾಯಿತಿಗಳಿಗಿಲ್ಲ. ಹಾಗಾಗಿ ಆದಾಯವೂ ಇಲ್ಲವಾಗಿದ್ದು, ಬಡ್ತಿ ಹೊಂದಿದ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯ ಪ್ರದೇಶಗಳ ಸ್ಥಿತಿ ಮಾತ್ರ ಅಧೋಗತಿಯಾಗತೊಡಗಿದೆ. ಪಂಚಾಯಿತಿಯಿಂದ ಪಟ್ಟಣ ಸೇರಿದ್ದೇವೆ ಎಂಬ ಭ್ರಮಾಲೋಕದಲ್ಲಿದ್ದ ಪ್ರದೇಶದ ಜನತೆಯ ಆಶಾಗೋಪುರ ಕೆಲ ತಿಂಗಳಲ್ಲೇ ಕಳಚಿ ಬಿದ್ದಿದೆ.

ಸರ್ಕಾರದ ದ್ವಂದ ನೀತಿಯಿಂದಾಗಿ ಬಡ್ತಿ ಹೊಂದಿದ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯ ಜನ ಆಸ್ತಿ ಖರೀದಿಸುವ ಹಾಗೂ ಮಾರುವ ಅವಕಾಶ ಇಲ್ಲವಾಗಿದ್ದು ಖರೀದಿ ಮತ್ತು ಮಾರಾಟವಿಲ್ಲದೆ ಇದ್ದರೆ ಸಂಸ್ಥೆಗಳ ಆದಾಯದ ಗತಿ ಏನು? ಎಂಬುದು ಪ್ರಶ್ನೆಯಾಗಿದೆ.

ಹಣ ವಾಪಸ್ ಅನಿವಾರ್ಯ: ಸಿಇಒ ಯೋಗೀಶ್

ಗ್ರಾಮೀಣ ಪ್ರದೇಗಳ ಅಭಿವೃದ್ಧಿಗಾಗಿ ಮಂಜೂರಾಗಿರುವ ಹಣ ನಗರ ಪ್ರದೇಶಗಳಿಗೆ ಬಳಕೆಯಾಗಲು ಸಾಧ್ಯವೇ ಇಲ್ಲಾ ಹಾಗಾಗಿ ೧೪ ೧೫ ನೇ ಹಣಕಾಸು ನಿ ಬಡ್ತಿ ಹೊಂದಿ ಪಟ್ಟಣ ಪಂಚಾಯಿತಿಯಾದ ದಿನವೇ ಸರ್ಕಾರಕ್ಕೆ ವಾಪಸ್ ಹೊಗುವದು ಅನಿವಾರ್ಯ. ಈಗ ಅವುಗಳ ಪೌರಾಡಳಿತದ ಮೊರೆ ಹೋಗಿ ಹಣ ಬಿಡುಗಡೆ ಮಾಡಿಸಿಕೊಳ್ಳಬೇಕಿದೆ.

ಯೋಗೀಶ್, ಜಿಪಂ ಸಿಇಒ

—-

ಇದು ಜಿಲ್ಲೆಯ ಸಮಸ್ಯೆ ಅಲ್ಲ, ರಾಜ್ಯದ ಸಮಸ್ಯೆ. ಬಡ್ತಿಹೊಂದಿದ ರಾಜ್ಯದ ಎಲ್ಲ ಪಟ್ಟಣಪಂಚಾಯಿತಿಗಳ ಸ್ಥಿತಿ ಇದೇ ಆಗಿದ್ದು ನೂತನ ಪಟ್ಟಣ ಪಂಚಾಯಿತಿಗಳಿಗೆ ಹಣ ಬಿಡುಗಡೆ ಮಾಡಿ ಅಭಿವೃದ್ಧಿಗೆ ನೆರವಾಗಬೇಕೆಂದು ಈಗಾಗಲೆ ಜಿಲ್ಲಾಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದು ಅಲ್ಲಿ ಇದು ತೀರ್ಮಾನವಾಬೇಕಿದೆ.

ಅರ್ಷದ್ ಷರೀಫ, ಜಿಲ್ಲಾ ಯೋಜನಾ ನಿರ್ದೇಶಕ

 

 

× Chat with us