ಮೈಸೂರು ದಸರಾ ಆಚರಣೆಗೆ 6 ಉಪ ಸಮಿತಿಗಳ ರಚನೆ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಆಚರಣೆ ಸಿದ್ಧತೆಗಾಗಿ ಉಪ ಸಮಿತಿಗಳನ್ನು ರಚಿಸಲಾಗಿದೆ.

ಸ್ವಾಗತ ಮತ್ತು ಆಮಂತ್ರಣ
ಅಪರ ಜಿಲ್ಲಾಧಿಕಾರಿ ಬಿ.ಎಸ್‌.ಮಂಜುನಾಥಸ್ವಾಮಿ- ಉಪ ವಿಶೇಷಾಧಿಕಾರಿ, ಮೈಸೂರು ಮಹಾನಗರ ಪಾಲಿಕೆ ಹೆಚ್ಚುವರಿ ಆಯುಕ್ತೆ ಎಂ.ಜೆ.ರೂಪಾ- ಕಾರ್ಯಾಧ್ಯಕ್ಷೆ, ಪಾಲಿಕೆಯ ವಲಯ ಆಯುಕ್ತ ಎಂ.ನಂಜುಂಡಯ್ಯ ಕಾರ್ಯದರ್ಶಿಯಾಗಿದ್ದಾರೆ.

ದೀಪಾಲಂಕಾರ
ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕ ಜಯವಿಭವ ಸ್ವಾಮಿ- ಉಪ ವಿಶೇಷಾಧಿಕಾರಿ, ಅಧೀಕ್ಷಕ ಇಂಜಿನಿಯರ್‌ ನಾಗೇಶ್‌- ಕಾರ್ಯಾಧ್ಯಕ್ಷ, ಕಾರ್ಯಪಾಲಕ ಇಂಜಿನಿಯರ್‌ ಬಿ.ಕೆ.ಯೋಗೇಶ್‌- ಕಾರ್ಯದರ್ಶಿಯಾಗಿದ್ದಾರೆ.

ಮೆರವಣಿಗೆ ಸಮಿತಿ
ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ- ಉಪ ವಿಶೇಷಾಧಿಕಾರಿ, ಕಾನೂನು ಮತ್ತು ಸುವ್ಯವಸ್ಥೆ ಉಪ ಪೊಲೀಸ್‌ ಆಯುಕ್ತ ಪ್ರದೀಪ್‌ ಗುಂಟಿ- ಕಾರ್ಯಾಧ್ಯಕ್ಷ, ದೇವರಾಜ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತ ಎಂ.ಎನ್.ಶಶಿಧರ್‌-ಕಾರ್ಯದರ್ಶಿಯಾಗಿದ್ದಾರೆ.

ಸಾಂಸ್ಕೃತಿಕ ದಸರಾ
ಜಿಪಂ ಸಿಇಒ ಯೋಗೀಶ್-‌ ಉಪ ವಿಶೇಷಾಧಿಕಾರಿ, ರಂಗಾಯಣ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ- ಕಾರ್ಯಾಧ್ಯಕ್ಷ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯ ನಿರ್ದೇಶಕ ಚನ್ನಪ್ಪ- ಕಾರ್ಯದರ್ಶಿಯಾಗಿದ್ದಾರೆ.

ಸ್ವಚ್ಛತೆ ಮತ್ತು ವ್ಯವಸ್ಥೆ
ನಗರಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ್‌ ರೆಡ್ಡಿ- ಉಪ ವಿಶೇಷಾಧಿಕಾರಿ, ಪಾಲಿಕೆ ಆರೋಗ್ಯಾಧಿಕಾರಿ ಡಿ.ಜಿ.ನಾಗರಾಜ್‌- ಕಾರ್ಯಾಧ್ಯಕ್ಷ, ಆರೋಗ್ಯಾಧಿಕಾರಿ ಕೆ.ಹೇಮಂತ್‌ ರಾಜು- ಕಾರ್ಯದರ್ಶಿಯಾಗಿದ್ದಾರೆ.

ಸ್ತಬ್ದಚಿತ್ರ

ಮುಡಾ ಆಯುಕ್ತ ಡಿ.ಬಿ.ನಟೇಶ್‌- ಉಪ ವಿಶೇಷಾಧಿಕಾರಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಡಿ.ಕೆ.ಲಿಂಗರಾಜು- ಕಾರ್ಯಾಧ್ಯಕ್ಷ, ಜಿಲ್ಲಾ ಕೈಗಾರಿಕಾ ಕೇಂದ್ರ ಮೇಘನಾ- ಕಾರ್ಯದರ್ಶಿಯಾಗಿದ್ದಾರೆ.

× Chat with us