ಮೈಸೂರು ದಸರಾ: ಗಜಪಡೆ, ಮಾವುತರಿಗೆ ವಿಮಾ ಸುರಕ್ಷತೆ

ಮೈಸೂರು: ನಾಡಹಬ್ಬ ಮೈಸೂರು ದಸರಾ ಮೆರುಗನ್ನು ಹೆಚ್ಚಿಸುವ ಗಜಪಡೆ ಹಾಗೂ ಮಾವುತರಿಗೆ ವಿಮಾ ಸುರಕ್ಷತೆ ಮಾಡಿಸಲಾಗಿದೆ.

ಅರಣ್ಯ ಇಲಾಖೆ ಥರ್ಡ್‌ ಪಾರ್ಟಿಯಿಂದ ವಿಮೆ ಮಾಡಿಸಿದೆ. ಜಂಬೂಸವಾರಿಯ ರೂವಾರಿ ಅಭಿಮನ್ಯು ಸೇರಿ ಗಂಡು ಆನೆಗಳಿಗೆ ತಲಾ 3.5 ಲಕ್ಷ ರೂ. ವಿಮೆ ಮಾಡಿಸಲಾಗಿದೆ. ಹೆಣ್ಣಾನೆಗಳಿಗೆ 2.5 ಲಕ್ಷ ರೂ. ವಿಮೆ, 16 ಮಾವುತರಿಗೆ ತಲಾ 1 ಲಕ್ಷ ರೂ., ಸಾರ್ವಜನಿಕ ಆಸ್ತಿಗೆ ನಷ್ಟವಾದರೆ 30 ಲಕ್ಷ ರೂ. ವಿಮೆಯನ್ನು ಮಾಡಿಸಲಾಗಿದ್ದು, ಎಲ್ಲಾ ವಿಮೆ ಅಕ್ಟೋಬರ್ 24ರವರೆಗೂ ಚಾಲ್ತಿಯಲ್ಲಿರಲಿದೆ ಎಂದು ಎಂದು ಡಿಸಿಎಫ್‌ ಡಾ. ವಿ.ಕರಿಕಾಳನ್‌ ತಿಳಿಸಿದ್ದಾರೆ.

ಈ ಸಾಲಿನ ದಸರಾದಲ್ಲಿ ಮತ್ತಿಗೋಡು ಶಿಬಿರದಿಂದ ಅಂಬಾರಿ ಆನೆ ಅಭಿಮನ್ಯು, ಗೋಪಾಲಸ್ವಾಮಿ ಬರಲಿವೆ. ಆನೆಕಾಡು ಶಿಬಿರದ ವಿಕ್ರಮ, ದುಬಾರೆ ಶಿಬಿರದ ಕಾವೇರಿ, ಧನಂಜಯ, ನಾಗರಹೊಳೆಯ ದೊಡ್ಡ ಹರವೆ ಶಿಬಿರದ ಅಶ್ವತ್ಥಾಮ, ಬಂಡೀಪುರ ರಾಂಪುರ ಶಿಬಿರದ ಚೈತ್ರಾ ಹಾಗೂ ಲಕ್ಷ್ಮಿ ಜತೆಯಾಗಿ ಸಾಥ್ ನೀಡಲಿವೆ. ಇದೇ ಪ್ರಥಮ ಬಾರಿಗೆ ಎಂಬಂತೆ 34 ವರ್ಷದ ಅಶ್ವತ್ಥಾಮ ದಸರಾಗೆ ಪ್ರವೇಶ ಪಡೆದಿದ್ದಾನೆ. ಕಿರಿಯ ಆನೆಯಾಗಿ ಲಕ್ಷ್ಮೀ ಎರಡನೇ ಬಾರಿಗೆ ದಸರಾದಲ್ಲಿ ಭಾಗಿಯಾಗಲಿದ್ದಾಳೆ.

× Chat with us