ನಮ್ಮ ಮೈಸೂರ ದಸರಾ 2025

ಯುವ ದಸರಾ | ಬಾಲಿವುಡ್‌ ಹಾಡಿಗೆ ಮೈಸೂರಿಗರು ಫಿದಾ…

ಮೈಸೂರು : ಯುವ ದಸರಾ ಸಂಗೀತ ಸಂಜೆಯಲಿ ಖ್ಯಾತ ಬಾಲಿವುಡ್ ಗಾಯಕ ಜುಬಿನ್ ನೌಟಿಯಾಲ್ ಅವರ ಗಾಯನದಲ್ಲಿ ಮೂಡಿ ಬಂದ ಬಾಲಿವುಡ್ ಹಾಡಿನ ಮೋಡಿಗೆ ಯುವ ಸಮೂಹ ಹುಚ್ಚೆದು ಕುಣಿದು, ತಲೆದೂಗಿದರು.

ನಗರದ ಹೊರವಲಯದ ವರ್ತುಲ ರಸ್ತೆಯ ಉತ್ತನಹಳ್ಳಿಯಲ್ಲಿ ಯುವ ದಸರಾ ಉಪ ಸಮಿತಿಯಿಂದ ಆಯೋಜಿಸಲಾಗಿದ್ದ ಮೂರನೇ ದಿನದ ಸಂಗೀತ ರಸಸಂಜೆಯಲಿ ಬಾಲಿವುಡ್‌ನ ಯುವ ಗಾಯಕ ಜುಬಿನ್ ನೌಟಿಯಾಲ್ ಅವರ ಸ್ವರದಲ್ಲಿ ಮೂಡಿದ ಹೇ ತೋ ದಿಲ್ ಯಹ್ ರುಕ್ ಜಾ ಜರಾ ಎಂಬ ಹಾಡಿಗೆ ನೆರೆದಿದ್ದ ಸಂಗೀತ ರಸಿಕರು ಕುಣಿದು, ಜತೆಗೆ ದನಿಗೂಡಿಸಿದರು.

ಮೊಹಬ್ಬತ್ ಕೆ ಮೇರಿ.. ಫಹಲಾ ಸರ್ಫ ಮೇ.., ಏಕ್ ಮುಲಾಕಾತ್ ಹು.. ತ ಮೇರೆ ಪಾಸ್ ಹೋ.., ನಾ ಚಯನೆ ಸೇ ಜೀನಾ ದೇದಿ, ನಾ ಚಯನೇ ಸೇ ಮರನಾ ದೇದಿ.., ಜಬ್ ಜಬ್ ತೇರೆ.. ಜಿಸ್ ಮೇ ಕಾ.. ಹಿಂದಿ ಗೀತೆಗಳನ್ನು ಜುಬಿನ್ ಗಿಟಾರ್ ಹಿಡಿದು, ಹೆಜ್ಜೆಹಾಕಿ ಎಲ್ಲರನ್ನು ರಂಜಿಸಿದರು. ಅಲ್ಲದೇ ಹೆಚ್ಚು ಬೇಡಿಕೆಯ ಸಯಾರಾ ಹಿಂದಿ ಚಲನಚಿತ್ರ ಗೀತೆ ತುಜಸೇ ರ್ದೂ ಮೇ ಕಿ ವಜ ಕೆ ಲಿಯೇ ಹೂ…. ಎಂದು ಹಾಡಿ ಎಲ್ಲರನ್ನು ಮಂತ್ರಮುಗ್ಧರನ್ನಾಗಿಸಿದರು.

ತೆಲುಗು ಭಾಷಾ ಗಾಯಕ ಶ್ರೀರಾಮ್ ಚಂದ್ರ ಅವರು ವೇದಿಕೆ ಮೇಲೆ ಹಿಂದಿ ಹಾಡುಗಳಾದ ಯೇ ಜವಾನಿ ಹೇ ದಿವಾನಿ ಚಿತ್ರದ ಸುಬಾನ ಜೋ ಹೋ ರಹಾ ಹೇ… ಜವಾನ್ ಚಿತ್ರದ ಚಲಿಯಾ ತೇರಿ ಓ ಕೇ, ಚಲೆಯಾ ಹೇ ರ್ಜೋ ಕೇ.., ಕೇಸರಿಯಾ ತೇರಾ.., ರಬನೆ ಬನಾಯಾ.., ಎಂಬ ಗಾಯನದೊಂದಿಗೆ ನೃತ್ಯದ ಝಳಕ್ ಅನ್ನು ಸಹ ಪ್ರದರ್ಶಿಸಿದರು. ಜೊತೆಗೆ ಕನ್ನಡದ ಮುಂಗಾರು ಮಳೆ ಚಿತ್ರದ ಅನಿಸುತಿದೆ ಯಾಕೋ ಇಂದು.. ನೀನೇನೆ ನನ್ನವಳೆಂದು ಹಾಡುವ ಮೂಲಕ ಕನ್ನಡಿಗರ ಮನಸ್ಸನ್ನು ಕದ್ದರೇ, ಬ್ರಹ್ಮಾಸ್ತ್ರದ ದೇವಾ ದೇವಾ ಹೋ. ದಿ ಬೀಸ್ಟ್ ಚಿತ್ರ ಸೇರಿದಂತೆ ಸಾಕಷ್ಟು ಪ್ರಸಿದ್ಧ ತೆಲುಗು, ಹಿಂದಿ ಚಿತ್ರಗಳ ಹಾಡುಗಳನ್ನು ಹಾಡಿ ನೆರೆದಿದ್ದ ಯುವಕರು ವಯಸ್ಕರು ನಿಂತ ಕುಣಿದು ಕುಪ್ಪಳಿಸುವಂತೆ ಮಾಡಿ ಮನಸೂರೆಗೊಳಿಸಿದರು. ಬಳಿಕ ಗಾಯಕ ಚಿನ್ಮಯ್ ಆತ್ರೇಯ ಅವರಿಂದ ಕನ್ನಡದ ಜನಪ್ರಿಯ ನಾಯಕ ನಟ ಶಂಕರ್‌ನಾಗ್ ನಟನೆಯ ಚಲನಚಿತ್ರದ ಒಂದೇ ಒಂದು ಆಸೆಯು ತೋಳಲಿ ಬಳಸಲು… ಹಾಡಿ ಕನ್ನಡ ಪ್ರೇಮ ಮೆರೆದರು. ಅಲ್ಲದೇ ರೂಪು ತೇರಾ ಮಸ್ತಾನ, ಪ್ಯಾರಾ ಮೇರಾ ದಿವಾನ ಎಂದು ಹಳೆಹಾಡುಗಳ ಗೀತೆಗಾಯನ ಅದ್ದೂರಿಯಾಗಿ ನಡೆಸಿದರು. ಅಲ್ಲದೇ ಕನ್ನಡಿಗರಲ್ಲಿ ಮತ್ತಷ್ಟು ಕುಣಿತಕ್ಕೆ ಕಿಚ್ಚು ಹಚ್ಚಲು ಡಾ.ರಾಜ್ ಕುಮಾರ್ ಅವರ ಹೊಸ ಬೆಳಕು ಮೂಡುತ್ತಿದೆ… ರವಿಚಂದ್ರನ್ ಅವರ ಯಾರೇ ನೀನು ರೋಜಾ ಹೂವೆ, ಯಾರೇ ನೀನು ಮಲ್ಲಿಗೆ ಹೂವೇ… ಕನ್ನಡದ ಹಾಡಿಗೆ ಧ್ವನಿಗೂಡಿಸಿ ಜನರಿಗೆ ಮನರಂಜನೆ ರಸದೌತಣ ಬಡಿಸಿದರು.

ಕರ್ನಾಟಕ ರೇಷ್ಮೆ ಉದ್ಯಮದ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕಿ ಝಹೀರಾ ನಾಸೀಂ, ವಿಧಾನ ಪರಿಷತ್ ಸದಸ್ಯ ಸಿ.ಎನ್ ಮಂಜೇಗೌಡ, ಜಿಽಕಾರಿ ಲಕ್ಷ್ಮೀಕಾಂತ ರೆಡ್ಡಿ ಹಾಗೂ ಉಪಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತಿತರರಿದ್ದರು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಪೌರ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಿ

ಮೈಸೂರಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪೌರಕಾರ್ಮಿಕರು ಸಮವಸ್ತ್ರ, ಗುಣಮಟ್ಟದ ಬೆಳಗಿನ ಉಪಾಹಾರ ಮೊದಲಾದ ಸೌಲಭ್ಯಗಳಿಲ್ಲದೇ ಬವಣೆ ಪಡುತ್ತಿರುವುದು, ನಗರ ಪಾಲಿಕೆಯಲ್ಲಿ ೮೪…

4 hours ago

ಓದುಗರ ಪತ್ರ: ಪರೀಕ್ಷೆ ವೇಳೆ ಆರೋಗ್ಯ ಏರುಪೇರಾದರೆ ಬದಲಿ ವ್ಯವಸ್ಥೆ ಕಲ್ಪಿಸಿ

ದೇಶದ ಪ್ರಗತಿಗೆ ಶಿಕ್ಷಣ ಪ್ರಮುಖವಾಗಿದೆ. ಶಾಲಾ, ಕಾಲೇಜು ಹಂತದ ಪರೀಕ್ಷೆಗಳು ಮತ್ತು ಸರ್ಕಾರಿ ಹುದ್ದೆಗಳ ನೇಮಕಾತಿಗೆ ನಡೆಯುವ ಪರೀಕ್ಷಾ ಕೊಠಡಿಯಲ್ಲಿ…

4 hours ago

ಓದುಗರ ಪತ್ರ: ಅಂಚೆ ಕಚೇರಿ ಚಲನ್‌ಗಳು ಕನ್ನಡದಲ್ಲಿರಲಿ

ಅಂಚೆ ಕಚೇರಿಗಳಲ್ಲಿ ಗ್ರಾಹಕರು ಹಣ ಕಟ್ಟುವ ಉಳಿತಾಯ ಖಾತೆ, ಆರ್‌ಡಿ , ಪಿಪಿಎಫ್, ಎಂಐಎಸ್ ಹಾಗೂ ಅಂಚೆ ಕಚೇರಿಯ ವಿವಿಧ…

4 hours ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ರಾಜ್ಯ ಸರ್ಕಾರದ ಮೇಲೆ ರಾಜ್ಯಪಾಲರ ಸವಾರಿಗೆ ಬೇಕಿದೆ ಕಡಿವಾಣ

ರಾಜ್ಯಗಳ ಆಡಳಿತ ಸಂವಿಧಾನಬದ್ಧವಾಗಿ ನಡೆಯುವಂತೆ ಮೇಲುಸ್ತುವಾರಿಯಾಗಿ ಕೇಂದ್ರ ಸರ್ಕಾರದ ಶಿಫಾರಸಿನಂತೆ ರಾಷ್ಟ್ರಪತಿ ಅವರು ರಾಜ್ಯಪಾಲರನ್ನು ನೇಮಕ ಮಾಡುವುದು ೧೯೫೦ರಿಂದ ನಡೆದುಕೊಂಡು…

4 hours ago

ಮೂಗಿನ ನೇರಕ್ಕೆ ಇತಿಹಾಸವನ್ನು ತಿರುಚುವುದಿದೆಯಲ್ಲಾ….

‘ಕುಸೂ ಕುಸೂ ಹೇಳಪ್ಪ ಹೇಳು ನನ್ನ ಕಂದಾ. ಅವ್ವಾ... ನಾಳಕ ಬಾವುಟದ ಹಬ್ಬ. ಬಾವುಟ ಏರಿಸೋ ಹಬ್ಬ. ಇಸ್ಕೂಲಿಗೆ ಹೊತ್ತಿಗೆ…

4 hours ago

ಸಂವಿಧಾನ ನಮ್ಮ ಬಳಿ ಇದೆ, ಆದರೆ ಅದರ ಧ್ವನಿ ಎಲ್ಲಿದೆ?

ಸಂವಿಧಾನ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ವಾಸ್ತವದಲ್ಲಿ ನಾವು ಎಷ್ಟು ಮುಕ್ತರಾಗಿದ್ದೇವೆ? ಭ್ರಷ್ಟಾಚಾರ, ಪರಿಸರ ನಾಶ, ಮಾಲಿನ್ಯ ಹಾಗೂ…

4 hours ago