ನಮ್ಮ ಮೈಸೂರ ದಸರಾ 2025

ದಸರಾ ಸಂಭ್ರಮಕ್ಕೆ ಹೊಸ ಮೆರಗು : ಸೆ.28,29 ರಂದು ಆಕರ್ಷಕ ಡ್ರೋನ್‌ ಪ್ರಾಯೋಗಿಕ ಪ್ರದರ್ಶನ

ಮೈಸೂರು : ನಾಡಹಬ್ಬ ದಸರಾ ಮಹೋತ್ಸವಕ್ಕೆ ಮೆರಗು ನೀಡಿರುವ ಆಕರ್ಷಕ ಡ್ರೋನ್‌ ಪ್ರದರ್ಶನ ನಗರದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆಯಲಿದೆ. ಸೆ.28, 29ರಂದು ಡ್ರೋನ್‌ ಶೋ ಪ್ರಾಯೋಗಿಕ ಪ್ರದರ್ಶನ ನಡೆಯಲಿದ್ದು, ಅ.1 ಹಾಗೂ 2ರಂದು ಮುಖ್ಯ ಪ್ರದರ್ಶನ ನಡೆಯಲಿದೆ.

ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಸೆಸ್ಕ್‌)ನಿಂದ ಆಯೋಜಿಸಲಾಗುತ್ತಿರುವ ಡ್ರೋನ್‌ ಪ್ರದರ್ಶನ ಕಳೆದ ವರ್ಷ ನೋಡುಗರಿಗೆ ವಿಶೇಷ ಅನುಭವ ನೀಡಿತ್ತು. ದಸರೆಯ ಪ್ರಮುಖ ಆಕರ್ಷಣೆಯಾಗಿರುವ ಈ ಡ್ರೋನ್‌ ಪ್ರದರ್ಶನ ಈ ಬಾರಿ ಇನ್ನಷ್ಟು ರೋಮಾಂಚನಕಾರಿಯಾಗಿರಲಿದೆ. ಸೆ.28ರಂದು ಸಂಜೆ 7 ಗಂಟೆಯಿಂದ ಡ್ರೋನ್‌ ಪ್ರದರ್ಶನ ನಡೆಯಲಿದ್ದು, ಇದಕ್ಕೂ ಮುನ್ನ ಸಾರ್ವಜನಿಕರ ಮನರಂಜನೆಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಂಜೆ 4 ಗಂಟೆಯಿಂದ ಪಂಜಿನ ಕವಾಯತು ಮೈದಾನ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ.

ಇದನ್ನು ಓದಿ: ಓದುಗರ ಪತ್ರ:  ದಸರಾ ವಿದ್ಯುತ್ ದೀಪಾಲಂಕಾರ ವೀಕ್ಷಿಸುವಲ್ಲಿ ಜಾಗ್ರತೆ ಅಗತ್ಯ

ಈ ಬಾರಿ ಹೆಚ್ಚಿನ ಮೆರಗು:
ಸೆಸ್ಕ್‌ ವತಿಯಿಂದ ಕಳೆದ ವರ್ಷ ಆಯೋಜಿಸಿದ್ದ ಡ್ರೋನ್‌ ಪ್ರದರ್ಶನ ದಸರಾ ಸಂಭ್ರಮಕ್ಕೆ ಹೊಸ ಮೆರಗು ನೀಡಿತ್ತು. 1500 ಡ್ರೋನ್‌ಗಳ ಮೂಲಕವಾಗಿ ನಡೆಸಲಾಗಿದ್ದ ಪ್ರದರ್ಶನದಲ್ಲಿ ಆಗಸದಲ್ಲಿ ವಿವಿಧ ವಿನ್ಯಾಸಗಳ 15ಕ್ಕೂ ಹೆಚ್ಚು ಬೆಳಕಿನ‌ ಚಿತ್ತಾರಗಳನ್ನು ಮೂಡಿಸಲಾಗಿತ್ತು.

3000 ಡ್ರೋನ್‌ಗಳ ಬಳಕೆ:
ಡ್ರೋನ್‌ ಪ್ರದರ್ಶನಕ್ಕೆ ಮೊದಲ ಪ್ರಯತ್ನದಲ್ಲಿ ದೊರೆತ ಯಶಸ್ಸಿನ ಹಿನ್ನೆಲೆಯಲ್ಲಿ ಈ ಬಾರಿಯ ಪ್ರದರ್ಶನವನ್ನು ಮತ್ತಷ್ಟು ಆಕರ್ಷಣೀಯವಾಗಿ ಮಾಡಲು ಸೆಸ್ಕ್‌ ಸನ್ನದ್ಧವಾಗಿದೆ. ಈ ವರ್ಷದ ಡ್ರೋನ್‌ ಶೋನಲ್ಲಿ 3000 ಡ್ರೋನ್‌ಗಳನ್ನು ಬಳಸಿಕೊಂಡು ಪ್ರದರ್ಶನ ನೀಡಲಾಗುತ್ತಿದೆ. ಹೀಗಾಗಿ ಈ ಬಾರಿಯ ಡ್ರೋನ್‌ ಶೋ ಹೊಸತನ ಹಾಗೂ ಅತ್ಯಾಕರ್ಷಕವಾಗಿರಲಿದ್ದು, ನೋಡುಗರಿಗೆ ವಿಶಿಷ್ಟ ಅನುಭವವನ್ನು ನೀಡಲಿದೆ.

ಈ ಬಗ್ಗೆ ಮಾತನಾಡಿದ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್‌ ರಾಜು ,  “ಕಳೆದ ವರ್ಷ ಎಲ್ಲರನ್ನು ರಂಜಿಸಿದ್ದ ಡ್ರೋನ್‌ ಪ್ರದರ್ಶನ ಈ ಬಾರಿ ನಾಲ್ಕು ದಿನಗಳು ನಡೆಯಲಿದೆ. ಈ ಬಾರಿಯ ಪ್ರದರ್ಶನ ಹೆಚ್ಚು ಆಕರ್ಷಣೆಯಿಂದ ಕೂಡಿರಲಿದೆ. 3000 ಡ್ರೋನ್‌ಗಳನ್ನು ಬಳಸಿಕೊಂಡು ನೀಡಲಾಗುವ ಈ ಬಾರಿಯ ಪ್ರದರ್ಶನ ಪ್ರೇಕ್ಷಕರಿಗೆ ರೋಮಾಂಚನಕಾರಿ ಅನುಭವ ನೀಡಲಿದೆ ಎಂದರು.

ಆಂದೋಲನ ಡೆಸ್ಕ್

Recent Posts

ರಷ್ಯಾದಲ್ಲಿ ಪ್ಲೇಗ್ ಪತ್ತೆಯಾಗಿಲ್ಲ: WHO ಸ್ಪಷ್ಟನೆ!

ಮಾಸ್ಕೋ: ರಷ್ಯಾದಲ್ಲಿ ಸಂಶೋಧಕಿಯೊಬ್ಬರು ತೀವ್ರ ನ್ಯುಮೋನಿಯಾದಿಂದ ಮೃತಪಟ್ಟಿರುವುದು ವರದಿಯಾಗಿದೆ. ಅಕ್ಟೋಬರ್ 2ರಂದು ತೀವ್ರ ನ್ಯುಮೋನಿಯಾದಿಂದ ಸಂಶೋಧಕಿ ಮೃತಪಟ್ಟಿದ್ದಾರೆ. ಈ ಸಾವಿಗೂ…

16 hours ago

ರಾಜ್ಯದಲ್ಲಿ ಇನ್ಮುಂದೆ ಹಾಫ್ ಹೆಲ್ಮೆಟ್ ಬ್ಯಾನ್!

ಬೆಂಗಳೂರು: ದ್ವಿಚಕ್ರ ವಾಹನ ಸವಾರರಿಗೆ ಸಾರಿಗೆ ಇಲಾಖೆ ಮಹತ್ವದ ಸೂಚನೆ ನೀಡಿದೆ. ಇನ್ಮುಂದೆ ಸುರಕ್ಷಿತವಲ್ಲದ ಹಾಫ್ ಹೆಲ್ಮೆಟ್‌ಗಳನ್ನು ಬಳಸುವಂತಿಲ್ಲ. ಬಿಐಎಸ್ ಅಥವಾ…

16 hours ago

ಬೂದಂಬಳ್ಳಿ ಗ್ರಾಮದಲ್ಲಿ ಗಾಳಿ ಮಳೆಗೆ ಹೆಂಚಿನ ಮನೆ ಜಖಂ: ಮಾಜಿ ಸಚಿವ ಎನ್.ಮಹೇಶ್ ಭೇಟಿ, ಸಾಂತ್ವನ

ಚಾಮರಾಜನಗರ: ತಾಲ್ಲೂಕಿನ ಬೂದಂಬಳ್ಳಿ ಗ್ರಾಮದಲ್ಲಿ ಗಾಳಿ ಮಳೆಗೆ ಹೆಂಚಿನ ಮನೆ ಜಖಂಗೊಂಡಿದ್ದು, ಸ್ಥಳಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ…

17 hours ago

ಮೈಸೂರು ದಸರಾ: ಗಜಪಡೆಗೆ ಕುಶಾಲತೋಪು ಸಿಡಿಸುವ ತಾಲೀಮು

ಮೈಸೂರು:  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆ ಭರದಿಂದ ಸಾಗುತ್ತಿದೆ. ದಸರಾ ಗಜಪಡೆಗೆ ಕುಶಾಲತೋಪು ಸಿಡಿಸುವ ತಾಲೀಮು ನಡೆಸಲಾಯಿತು. ನಗರ…

17 hours ago

ಓದುಗರ ಪತ್ರ: ‘ನಂದಿನಿ’ ಹೆಸರಿಗೆ ಕಳಂಕ ತರಬೇಡಿ

‘ನಂದಿನಿ’ ಹೆಸರಿಗೆ ಕಳಂಕ ತರಬೇಡಿ ಮಂಡ್ಯ ಜಿ ಹಾಲು ಒಕ್ಕೂಟದಲ್ಲಿ ( ಮನ್ ಮುಲ್) ನಡೆದಿರುವ ಹಾಲಿನ ಪುಡಿ ಕಲಬೆರಕೆ…

17 hours ago

ಓದುಗರ ಪತ್ರ: ನೀಲಿಯೆಂದರೇನು?!

ನೀಲಿಯೆಂದರೇನು?! ನೀಲಿಯೆಂದರೇನು ಬರಿಯ ಬಣ್ಣವೇನು ? ಮೈತ್ರಿ ಕಣಾ ಕರುಣೆ ಕಣಾ| ಸೂರ್ತಿ ಕಣಾ ಕೀರ್ತಿ ಕಣಾ| ಬುದ್ಧ ಬಸವ…

17 hours ago