ನಮ್ಮ ಮೈಸೂರ ದಸರಾ 2025

ಮೈಸೂರು ದಸರಾ | ಅರಮನೆ ಅಂಗಳದಲ್ಲಿ ವಿಜಯ್ ಪ್ರಕಾಶ್ ಹವಾ… ಶಿವನಾಮ ಜಪಿಸಿದ ಪ್ರೇಕ್ಷಕರು

ಮೈಸೂರು : ಮೈಸೂರಿನ ವರ ಪುತ್ರ ಕನ್ನಡ ಚಿತ್ರರಂಗದ ಹೆಸರಾಂತ ಗಾಯಕ ವಿಜಯ್ ಪ್ರಕಾಶ್ ಹಾಡುಗಳಿಗೆ ಮೈಸೂರಿಗರು ಮನಸೋತು ಹೋದರು. ನಗರದ ಅರಮನೆ ಆವರಣದ ಅರಮನೆ ವೇದಿಕೆಯಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2025ರ ಅಂಗವಾಗಿ ಭಾನುವಾರ ಏಳನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ವಿಜಯ್ ಪ್ರಕಾಶ್ ಅವರು ಚಾಮುಂಡೇಶ್ವರಿ ಶಂಕರಿ ಕೀರ್ತನೆಯೊಂದಗೆ ಹಾಡಿನೊಂದಿಗೆ ಪ್ರಾರಂಭಿಸಿ… ಹಂಸಲೇಖ ರಚನೆಯ ಹಬ್ಬ ಹಬ್ಬ ಇದು ಕರಡುನಾಡ ಮನೆ ಮನೆ ಹಬ್ಬ… ಇದು ಚಾಮುಂಡಿ ತಾಯಿ ತವರ ಹಬ್ಬ ಹಾಡು ಹಾಡಿ ರಂಜಿಸಿದರು. ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜ ಕುಮಾರ…ಹಾಡಿಗೆ ಪ್ರೇಕ್ಷಕರೆಲ್ಲ ತಮ್ಮ ಮೊಬೈಲ್ ಕ್ಯಾಮರಾ ಟಾರ್ಚ್ ಆನ್ ಮಾಡಿ, ಹೊಲಾಡಿಸಿ ಧ್ವನಿಗೂಡಿಸಿ ಹಾಡಿ ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಿಸಿದರು.

ಹಲೋ ಹಲೋ ನನ್ನ ಮನಸ್ಸು ಇಲ್ಲೆ ಎಲ್ಲೋ… ಒಪನ್ ಹೇರ್ ಬಿಟ್ಕೊಂಡು ಕೂದಲು ಹಾರಾಡ್ಸ್ಕೊಂಡು, ಸಿಂಗಾರ ಸಿರಿಯೇ.. ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಹಾಡುಗಳು ಪ್ರೇಕ್ಷಕರು ಹಾಗೂ ಪ್ರವಾಸಿಗರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದರು. ಪೃಥ್ವಿ ಭಟ್, ಶಾಶ್ವತಿ ಕಷ್ಯಪ್ ಮತ್ತು ಅಖಿಲ ಅವರು ಸೂಜುಗಾದ ಸೂಜು ಮಲ್ಲಿಗೆ ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ ಹಾಡನ್ನು ಹಾಡಿ ಪ್ರೇಕ್ಷಕರ ಮನಗೆದ್ದರು.

ವಿಜಯ್ ಪ್ರಕಾಶ್ ಅವರು ಓಂ ಶಿವೋಂ ಹಂ.. ಒಂ ನಮಃ ಶಿವಾಯ ಎಂದು ಶಿವನ ಸ್ತುತಿಯನ್ನು ಸ್ವರ ಸಲ್ಲಾಪಗಳನ್ನು ಪೊಣಿಸಿ ಹಾಡಿದಾಗ ನೆರೆದಿದ್ದವರು ಶಿವ ಜಪದಲ್ಲಿ ಮುಳುಗುವಂತೆ ಮಾಡಿತು.

ಇದನ್ನೂ ಓದಿ:-ಮೈಸೂರು ದಸರಾ | ಅತ್ಯಾಕರ್ಷಕ ಡ್ರೋನ್ ಪ್ರದರ್ಶನಕ್ಕೆ ಮನಸೋತ ಮೈಸೂರಿಗರು

ಕಾಪಿ ರಾಗದಲ್ಲಿ ರೋಜಾ ರೋಜಾ ಹೂವೇ ಎಲ್ಲೆ ನೀ ಎಲ್ಲೆ… ನಗುವ ನಯನ ಮಧುರ ಮೌನ, ಕಲ್ಯಾಣಿ ರಾಗದಲ್ಲಿ ಡಾ.ರಾಜ್ ಕುಮಾರ್ ಅವರ ಕೋಗಿಲೆ ಹಾಡಿದೆ ಕೇಳಿದೆಯ…ಹೊಸ ರಾಗವ ಹಾಡಿದೆ ಆಲಿಸಿಯ, ನಿನ್ನಿಂದಲೇ ನಿನ್ನಿಂದಲೆ ಕನಸೊಂದು ಶುರುವಾಗಿದೆ ಹಾಗೂ ದಾನಿ ರಾಗದಲ್ಲಿ ಯಾವ ಕವಿಯ ಬರೆಯಲಾರ ಒಲವಿನಿಂದ ಹಾಡುಗಳನ್ನು ಉಣಬಡಿಸಿದರು.

ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೋಡಿಯ ಆಪ್ತಮಿತ್ರ ಸಿನಿಮಾದ ಕಾಲವನ್ನು ತಡೆಯೊರು ಯಾರು ಇಲ್ಲ… ಗಾಳಿಯನ್ನು ಹಿಡಿಯೊರು ಎಲ್ಲೂ ಇಲ್ಲ, ನೀನಾಸಂ ಸತೀಶ್ ಅಭಿನಯದ ಅಯೋಗ್ಯ ಚಿತ್ರದ ಏನಮ್ಮಿ ಏನಮ್ಮಿ ಯಾರಮ್ಮಿ ನೀನಮ್ಮಿ, ಸುದೀಪ್ ನಟನೆಯ ಕೋಟಿಗೊಬ್ಬ-2 ಚಿತ್ರದ ಸಾಲುತ್ತಿಲ್ಲವೆ ಸಾಲುತ್ತಿಲ್ಲವೆ….ನಿನ್ನ ಹಾಗೆ ಮತ್ತು ಬೇರೆ ಏನಿದೆ ಹಾಡುಗಳನ್ನು ಪ್ರೇಕ್ಷಕರು ಬಾಯಲ್ಲಿ ಗುನುಗುಂವೆ ಮಾಡಿದವು.

ಯಾರೆ ಬಂದರು ಎದುರ್ಯಾರೆ ನಿಂತರು ಪ್ರೀತಿ ಹಂಚುವ ಯಜಮಾನ, ಸಂತೋಷಕ್ಕೆ ಹಾಡು ಸಂತೋಷಕ್ಕೆ…ಕುಣಿದು ತಾಳಕ್ಕೆ ಕುಣಿದು, ಒಹೋ ಬಂತು ಶ್ರಾವಣ, ಬೈದು ಬುದ್ಧಿ ಹೇಳು ಬದ್ರರ್ ಫ್ರಮ್ ಅನದರ್ ಮದರ್ ಹಾಡಗಳು ಮೂಲಕ ರಂಜಿಸಿದರು.

ವಿಜಯ್ ಪ್ರಕಾಶ್ ಅವರು ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು, ಪ್ರಥ್ವಿ ಭಟ್ ಜಟಕಾ ಕುದುರೆ ಹತ್ತಿ ಪ್ಯಾಟೆಗೋಮಾ, ಗಣೇಶ್ ಅವರು ಕೂರಕ್ ಕುಕ್ಕರಹಳ್ಳಿ ಕೆರೆ, ಶಾಶ್ವತಿ ಸೇಕ್ ಹಿಟ್ ಪುಷ್ಪವತಿ, ಭಾರ್ಗವ್ ಸಿಕ್ಕ ಪಟ್ಟೆ ಇಷ್ಟ ಪಟ್ಟೆ ಹೈ ಲೈಕ್ ಹಿಟ್, ಅಖಿಲ ಕೈನಾಗೆ ಮೈಕ್ ಹಿಟ್ರೆ ನಾನ್ ಸ್ಟಾಂಪ್ ಭಾಷಣ ಅಧ್ಯಕ್ಷ ಅಧ್ಯಕ್ಷ ಅಧ್ಯಕ್ಷ, ಕುಲದಲ್ಲಿ ಕೀಳ್ಯಾವುದೊ ಹುಚ್ಚಪ್ಪ… ಮಠದಲ್ಲಿ ಮೇಲ್ಯಾವುದೊ ಎಂದು ಹಾಡಿ ಜೈಹೊ..ಜೈಹೊ…ಹಾಡನ್ನು ಪೊಲೀಸರಿಗೆ ಸಮರ್ಪಿಸಿದರು.

ಇದಕ್ಕೂ ಮೊದಲು ಬೆಂಗಳೂರಿನ ಭೂತಾಯಿ ಬಳಗದಿಂದ ಪರಿವರ್ತನಾ ತತ್ವ ಪದಗಳು ಪ್ರೇಕ್ಷಕರ ಮನ ಮುಟ್ಟಿದರೆ, ತದನಂತರ ಅಂತರರಾಷ್ಟ್ರೀಯ ಖ್ಯಾತ ಕಲಾವಿದರಿಂದ
ಕುಚ್ಚುಪುಡಿ ನೃತ್ಯ ನೋಡಗರ ಗಮನ ಸೆಳೆಯಿತು.

ಆಂದೋಲನ ಡೆಸ್ಕ್

Recent Posts

ಪಾದಯಾತ್ರೆ ವೇಳೆ ಚಿರತೆ ದಾಳಿಗೆ ವ್ಯಕ್ತಿ ಬಲಿ ಪ್ರಕರಣ : ಚಿರತೆ ಸೆರೆಗೆ ಅರಣ್ಯ ಇಲಾಖೆ ಕ್ರಮ

ಹನೂರು : ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ಚಿರತೆ ದಾಳಿ ಮಾಡಿದ ಪರಿಣಾಮ ವ್ಯಕ್ತಿ ಮೃತಪಟ್ಟಿರುವುದರಿಂದ ಚಿರತೆ…

31 mins ago

ಮುಡಾ ನಿವೇಶನ ಹಂಚಿಕೆ ಅಕ್ರಮ ಪ್ರಕರಣ : ಜಿ.ಟಿ.ದಿನೇಶ್‌ಗೆ ಹೈಕೋರ್ಟ್ ಶಾಕ್

ಇಡಿ ಬಂಧನದಿಂದ ಬಿಡುಗಡೆ ಕೋರಿ ಮಾಜಿ ಆಯುಕ್ತ ಸಲ್ಲಿಸಿದ್ದ ಅರ್ಜಿ ತಿರಸ್ಕಾರ ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ…

41 mins ago

ಸಮೀಕ್ಷೆ | ಫೆ.10ರೊಳಗೆ ಸರ್ಕಾರಕ್ಕೆ ವರದಿ ಸಲ್ಲಿಕೆ

ಬೆಂಗಳೂರು : ಜನವರಿ ಅಂತ್ಯ ಅಥವಾ ಫೆಬ್ರವರಿ 10ರೊಳಗೆ ಮಧುಸೂದನ್ ನಾಯಕ್ ಅವರ ನೇತೃತ್ವದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ…

1 hour ago

ಅಕ್ರಮ ರೆಸಾರ್ಟ್‌ ವಿರುದ್ದದ ಅನಿರ್ದಿಷ್ಟ ಪ್ರತಿಭಟನೆ ಅಂತ್ಯ

ಹೆಚ್.ಡಿ.ಕೋಟೆ : ತಾಲ್ಲೂಕಿನ ಕಬಿನಿ ಹಿನ್ನೀರು ಪ್ರದೇಶ, ನಾಗರಹೊಳೆ-ಬಂಡೀಪುರ ಅರಣ್ಯ ವ್ಯಾಪ್ತಿ ಹಾಗೂ ಪರಿಸರ ಸಂವೇದಿ ವಲಯಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ…

1 hour ago

ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ಗೆಹಲೋತ್‌ ನಿರಾಕರಣೆ

ಬೆಂಗಳೂರು : ನೆರೆಯ ತಮಿಳುನಾಡು ಮತ್ತು ಕೇರಳದಂತೆ ಕರ್ನಾಟಕದಲ್ಲೂ ಕಾರ್ಯಾಂಗ ಮತ್ತು ಶಾಸಕಾಂಗದ ನಡುವೆ ಸಂಘರ್ಷ ಏರ್ಪಡುವ ಲಕ್ಷಣಗಳು ಗೋಚರಿಸಿದ್ದು,…

2 hours ago

ಯುವಕರೇ, ನಿಯಮ ಪಾಲಿಸಿ ಜೀವ ಉಳಿಸಿ : ಎಸ್‌ಪಿ ಶೋಭಾರಾಣಿ ಮನವಿ

ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡಿದ ಜಿಲ್ಲಾ ಪೊಲೀಸ್ ಅಧಿಕ್ಷಕಿ ಡಾ.ವಿ.ಜೆ.ಶೋಭಾರಾಣಿ ಮಂಡ್ಯ : ಯುವಜನತೆ ರಸ್ತೆ ಸುರಕ್ಷತಾ…

2 hours ago