ಮೈಸೂರು : ನಾಡಹಬ್ಬ ವಿಶ್ವವಿಖ್ಯಾತ ದಸರಾ ಮಹೋತ್ಸವ ಪ್ರಯುಕ್ತ ಅರಮನೆ ನಗರಿ ಮೈಸೂರಿನಲ್ಲಿ ದಸರಾ ದೀಪಾಲಂಕಾರ ಝಗಮಗಿಸುವ ಮೂಲಕ ದೇಶ-ವಿದೇಶದ ಲಕ್ಷಾಂತರ ಪ್ರವಾಸಿಗರ ಗಮನ ಸೆಳೆಯುತ್ತಿದೆ.
ಪ್ರಮುಖ ವೃತ್ತ, ರಸ್ತೆಗಳಲ್ಲಿ ವಿಶಿಷ್ಠವಾಗಿ ಅಲಂಕಾರ ಮಾಡಿರುವುದರ ಜತೆಗೆ ಇಡೀ ಮೈಸೂರು ಸುತ್ತುವರಿದಂತೆ ದೀಪಾಲಂಕಾರ ಮಾಡಿರುವ ಹಿನ್ನೆಲೆಯಲ್ಲಿ ನೋಡುಗರನ್ನು ಮತ್ತೆ ಮತ್ತೆ ಕಣ್ಮನ ಸೆಳೆಯುತ್ತಿದೆ. ನಾಲ್ಕು ಭಾಗಗಳಿಂದ ನಗರಕ್ಕೆ ಹಾದು ಬರುವ ನಾಲ್ಕು ಮಾರ್ಗದ ರಸ್ತೆಯ ೧೪೬ ಕಿ.ಮೀ ರಸ್ತೆ ಅಲ್ಲದೆ ನಗರದ ೧೧೧೩ ವೃತ್ತವನ್ನುಬೆಳಕಿನ ಮಯ ಮಾಡಿರುವುದರಿಂದ ಸಂಜೆ ವೇಳೆ ನೋಡುವುದೇ ಒಂದು ಚೆಂದವಾಗಿದೆ. ಈ ಬಾರಿಯೂ ವಿಶೇಷವಾಗಿಹಲವು ಮಾದರಿಗಳನ್ನು ರೂಪಿಸಿ ದೀಪಾಲಂಕಾರದ ಸೊಬಗನ್ನು ಮತ್ತಷ್ಟು ಹೆಚ್ಚಿಸಿದೆ.
ಇದನ್ನೂ ಓದಿ;ಮೈಸೂರು ದಸರಾಗೆ ಆಗಮಿಸುವ ನಾಡ ಜನತೆಗೆ ರೈಲ್ವೆ ಇಲಾಖೆಯಿಂದ ಬಿಗ್ ಗಿಫ್ಟ್
ದೇಶ ಮತ್ತು ರಾಜ್ಯದ ಸಂಸ್ಕೃತಿಯನ್ನು ಬಿಂಬಿಸುವ ದಸರಾ ಅಂಬಾರಿ, ಕೆಆರ್‌ಎಸ್ ಅಣೆಕಟ್ಟು, ಅಶೋಕ ಸ್ಥಂಭ, ನಡೆದಾಡುವ ದೇವರೆಂದೆ ಕರೆಸಿಕೊಂಡಿದ್ದ ಸಿದ್ಧಗಂಗಾಶ್ರೀ,ಬಸವಣ್ಣ, ಕನಕದಾಸ,ಅಂಬೇಡ್ಕರ್ ಮಾದರಿಗಳನ್ನು ಮಾಡಲಾಗಿದೆ.
ಪ್ರತಿಕೃತಿಗಳನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಿ ನಗರದ ನಾನಾ ಕಡೆ ನಿರ್ಮಿಸಿದೆ. ಇದಲ್ಲದೇ ಎಂದಿನಂತೆ ಈ ಬಾರಿಯೂ ಚಾಮುಂಡೇಶ್ವರಿ ದೇವಿ, ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ್, ಸಂಸತ್ ಭವನ, ವಿಧಾನಸೌಧ ಪ್ರತಿಕೃತಿಗಳನ್ನು ನಿರ್ಮಿಸಿರುವುದು ಗಮನ ಸೆಳೆದಿದೆ. ಈ ಮಾರ್ಗದಲ್ಲಿ ಸಂಜೆಯಾದ ಬಳಿಕ ಓಡಾಡುವ ಪ್ರವಾಸಿಗರು, ಸ್ಥಳೀಯರು, ಯುವಕ-ಯುವತಿಯರು ಕೆಲಹೊತ್ತು ನಿಂತು ವೀಕ್ಷಿಸುವ ಜತೆಗೆ,ಅದರ ಮುಂದೆ ಸೆಲ್ಛಿ ಕ್ಲಿಕ್ಕಿಸಿಕೊಳ್ಳುತ್ತಿರುವುದು ಕಾಣಬಹುದು. ಕಾಂಗ್ರೆಸ್ ಕಚೇರಿಯಲ್ಲಿ ಸಿಎಂ,ಡಿಸಿಎಂ,ಇಂಧನ ಸಚಿವರು,ಉಸ್ತುವಾರಿ ಸಚಿವರ ಭಾವಚಿತ್ರವನ್ನು ವಿದ್ಯುತ್‌ನಿಂದ ಕಂಗೊಳಿಸುವಂತೆ ಮಾಡಲಾಗಿದೆ.
ಟೆಹರಾನ್: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಭೀಕರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಇರಾನ್ ದೇಶಕ್ಕೆ ಚೇತರಿಸಿಕೊಳ್ಳಲಾಗದ ಆಘಾತ ಎದುರಾಗಿದೆ.…
ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಕೆಲ ದಿನಗಳ ಹಿಂದೆ ಡಿನ್ನರ್ ಸಭೆ ಆಯೋಜಿಸಿದ್ದ ಬೆನ್ನಲ್ಲೇ ಈಗ ಸಿಎಂ ಸಿದ್ದರಾಮಯ್ಯ ಕೂಡ ಸಚಿವರಿಗೆ…
ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಈಗ ಜನಸಾಮಾನ್ಯರ ಅಡುಗೆ ಮನೆಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ವಾಣಿಜ್ಯ ಬಳಕೆಯ…
ಮೈಸೂರು: ನಗರದ ಹೊರವಲಯದ ಹಳೆ ಕೆಸರೆ ಸಮೀಪದಲ್ಲಿರುವ ಕಸ ವಿಲೇವಾರಿ ಘಟಕದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದ ಕಸದ…
ಮೈಸೂರಿನ ಕ್ರಾಫರ್ಡ್ ಹಾಲ್ ಎದುರಿನ ಓವೆಲ್ ಮೈದಾನದಲ್ಲಿ ಕ್ರೀಡಾಪಟುಗಳು ಪ್ರತಿನಿತ್ಯ ಕ್ರೀಡಾಭ್ಯಾಸ ನಡೆಸುತ್ತಾರೆ. ಸಾರ್ವಜನಿಕರೂ ಬೆಳಿಗ್ಗೆ ಹಾಗೂ ಸಂಜೆಯ ವೇಳೆ…
ಒಳಮೀಸಲಾತಿ ವಿಧೇಯಕಕ್ಕೆ ರಾಜ್ಯಪಾಲರು ಅನುಮೋದನೆ ನೀಡಿದ್ದು, ರಾಜ್ಯ ಸರ್ಕಾರ ಒಳಮೀಸಲಾತಿಯಲ್ಲಿ ಎಡಗೈ ಮತ್ತು ಬಲಗೈ ಪಂಗಡಗಳಿಗೆ ಸಮಾನವಾಗಿ ಸೌಲಭ್ಯ ಕಲ್ಪಿಸಬೇಕು.…