ನಮ್ಮ ಮೈಸೂರ ದಸರಾ 2025

Mysuru dasara | ಅರಮನೆಯಲ್ಲಿ ಥೈಕ್ಕುಡಂ ಬ್ರಿಡ್ಜ್‌ ಸಂಗೀತದ ಹೊಳೆ

ಮೈಸೂರು : ಬಣ್ಣ ಬಣ್ಣಗಳ ವಿದ್ಯುತ್ ಬೆಳಕು, ಕಣ್ಮನ ಸೆಳೆಯುವ ವೇದಿಕೆ, ರಂಜಿಸಿದ ಮಲೆಯಾಳಂ ಗೀತೆ ಹಾಗೂ ಯುವ ಮನಸ್ಸುಗಳ ಕುಣಿತಗಳ ನಡುವೆ ಕೇರಳದ ‘ಥೈಕ್ಕುಡಂ ಬ್ರಿಡ್ಜ್’ ಬ್ಯಾಂಡ್ ಅಂಬಾವಿಲಾಸ ಅರಮನೆ ಮುಂಭಾಗದ ವೇದಿಕೆಯಲ್ಲಿ ಸಂಗೀತದ ಹೊಳೆಯನ್ನೇ ಹರಿಸಿತು.

೩೦ಕ್ಕೂ ಹೆಚ್ಚು ದೇಶಗಳಲ್ಲಿ ೮೦೦ಕ್ಕೂ ಹೆಚ್ಚು ಸಂಗೀತ ಪ್ರರ್ದಶಿಸಿ ಅಪಾರ ಅಭಿಮಾನಿಗಳನ್ನಿ ಪ್ರಂಪಚದ್ಯಾಂತ ಗಳಿಸಿರುವ ಥೈಕ್ಕುಡಂ ಬ್ರಿಡ್ಜ್ ಇದೇ ಮೊದಲ ಬಾರಿಗೆ ಮೈಸೂರು ದಸರಾ ಮಹೋತ್ಸವದಲ್ಲಿ ಪ್ರದರ್ಶನ ನೀಡಿತು.

ಕೇರಳದ ವಿದ್ಯಾರ್ಥಿಗಳು ಬ್ಯಾಂಡ್ ವೀಕ್ಷಣೆಗೆ ಅರಮನೆ ತುಂಬಿದ್ದರು. ಎಲ್ಲರಿಗೂ ನಮಸ್ಕಾರ ದಸರಾ ಹಬ್ಬದ ಶುಭಾಶಯಗಳು ಆರ್ಥಿಕ ಶುಭಾಶಯಗಳು ಎಂದು ಕನ್ನಡದಲ್ಲೇ ಹೇಳಿ ನವರಸಂ ಗೀತೆಯನ್ನು ಬ್ಯಾಂಡ್‌ನ ಸದಸ್ಯರು ಪ್ರಸ್ತುತಪಡಿಸಿದರು.

ಇದನ್ನು ಓದಿ : ಮೈಸೂರಿನಲ್ಲಿ ವಿಂಟೇಜ್ ಕಾರುಗಳ ಹವಾ

ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರ ಸಂಯೋಜನೆಯ ‘ರೆಟ್ಟ್ತ್ಯೈ ವಾಲ್ ಕುರುವಿ’ ಸಿನಿಮಾದ ‘ರಾಜರಾಜ ಸೋ ಳನ್ನ….’ ಎಂಬ ಗೀತೆಯನ್ನು ಹಾಡುತ್ತಿದ್ದಂತೆ ಯುವ ಸಮೂಹ ಹುಚ್ಚೆದ್ದು ಕುಣಿದು ಕುಪ್ಪಳಿಸಿತು.

ತೇರಿ ದಿವಾನಿ ದಿವಾನಿ… ಗೀತೆಯನ್ನು ಭಾವನಾತ್ಮಕವಾಗಿ ಹಾಡಿ ಪ್ರೇಕ್ಷಕರ ಮನಮುಟ್ಟಿದರು. ಬಳಿಕ ಶಾಸ್ತ್ರೀಯ ಆಲಾಪದೊಂದಿಗೆ ‘ಓಂಶಿವೋಂ ರುದ್ರನಾಮ….’ ಎಂಬ ಗೀತೆ ಹಾಡಿ ಭಕ್ತಿ ಸಂಚಲನ ಮೂಡಿಸಿದರು. ನಂತರ ತಮಿಳಿನ ೯೬ ಸಿನಿಮಾದ ‘ಕಾತಲೆ ಕಾತಲೆ’ ಹಾಡಡು ಯುವಸಮೂಹವನ್ನು ಬೇರೊಂದು ಲೋಕಕ್ಕೆ ಕೊಂಡ್ಯೊಯಿತು. ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಯ ಹಲವಾರು ಆಲ್ಬಂ ಹಾಡುಗಳನ್ನು ಹಾಡುಗಳನ್ನು ತಮ್ಮ ವಿಶಿಷ್ಟ ರಾಕ್ ಬ್ಯಾಂಡ್ ಮ್ಯೂಸಿಕ್ ಮೂಲಕ ಹಾಡಿ ನೋಡುಗರನ್ನು ರಂಜಿಸಿದರು.

ಇದಕ್ಕೂ ಮುನ್ನ ರಘುರಾಮ್ ಮತ್ತು ತಂಡ ಕರ್ನಾಟಕ ಶಾಸ್ತ್ರಿಯ ಸಂಗೀತದ ಮೂಲಕ ಶಾಸ್ತ್ರಿಯ ಸಂಗೀತ ರಸಿಕರಿಗೆ ಸಂಗೀತ ರಸದೌತಣ ನೀಡಿದರು ಹಾಗೂ ಡಾ. ಶ್ವೇತಾ ಮಡಪ್ಪಾಡಿ ಅವರು ಜನಪದ ಶೈಲಿಯಲ್ಲಿ ಮಾದಪ್ಪನ ಜನಪದ ಗೀತೆ ಹಾಗೂ ಹಲವು ದೇವರ ಗೀತೆಗಳನ್ನು ತಮ್ಮದೇ ವಿಶಿಷ್ಟ ಶೈಲಿ ಗಾಯನದಿಂದ ಮೋಡಿ ಮಾಡಿದರು.

ಎರಡನೇ ದಿನ ಅರಮನೆ ಆವರಣದಲ್ಲಿ ಪ್ರೇಕ್ಷಕರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದರು. ಆಸನಗಳೆಲ್ಲ ಭರ್ತಿ ಆಗಿದ್ದು, ಸಾವಿರಾರು ಮಂದಿ ನಿಂತುಕೊಂಡೇ ಕಾರ್ಯಕ್ರಮ ವೀಕ್ಷಣೆ ಮಾಡಿದರು.

ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ ಮಹದೇವಪ್ಪ, ವಿಧಾನ ಪರಿಷತ್ ಸದಸ್ಯ ಶಿವಕುಮಾರ್, ಜಿಲ್ಲಾಕಾರಿ ಲಕ್ಷ್ಮಿಕಾಂತ್ ರೆಡ್ಡಿ ಉಪಸ್ಥಿತರಿದ್ದರು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಶಾಲಾ ಮಕ್ಕಳ ಬ್ಯಾಗ್ ಹೊರೆ ತಗ್ಗಿಸಿ

ಶಾಲಾ ಮಕ್ಕಳು ಭಾರವಾದ ಪುಸ್ತಕಗಳ ಬ್ಯಾಗ್ ಹೊರಲಾರದೆ ತ್ರಾಸದಿಂದಲೇ ಹೊತ್ತುಕೊಂಡು ನಡೆಯುವ ದೃಶ್ಯ ಈಗ ಎಲ್ಲೆಡೆ ಕಂಡುಬರುತ್ತದೆ. ಬ್ಯಾಗ್‌ನಲ್ಲಿ ಪಠ್ಯ…

2 hours ago

ಓದುಗರ ಪತ್ರ: ಉದ್ಯೋಗ ನೇಮಕಾತಿ ಯಾವಾಗ?

ಸರ್ಕಾರ ಅಧಿಸೂಚನೆ ಹೊರಡಿಸುವುದು ಯಾವಾಗ? ಉದ್ಯೋಗ ನೇಮಕಾತಿ ಯಾವಾಗ? ಇದು ಸಾವಿರಾರು ಉದ್ಯೋಗ ಆಕಾಂಕ್ಷಿಗಳ ಪ್ರಶ್ನೆ. ಇದು ಕಳೆದ ಹಲವು…

3 hours ago

ಓದುಗರ ಪತ್ರ: ಉದ್ಯೋಗ ವಯೋಮಿತಿ ಹೆಚ್ಚಳ ಸ್ವಾಗತಾರ್ಹ

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ಕಾರಿ ನೌಕರಿ ಪಡೆಯಲು ಇದ್ದ ವಯೋಮಿತಿಯನ್ನು ಐದು ವರ್ಷ ಹೆಚ್ಚಳ ಮಾಡಿ…

3 hours ago

ಇಂದು ಕೇರಳ ಬೈತೂರು ದೇವಾಲಯದ ಪತ್ತೂಟ

ಕಾಂಗೀರ ಬೋಪಣ್ಣ ಕೊಡಗು-ಕೇರಳದ ಜನರು ಒಟ್ಟಾಗಿ ಆಚರಿಸುವ ವಿಭಿನ್ನ ಆಚರಣೆ; ವಿಶಿಷ್ಟ  ಹಬ್ಬಕ್ಕೆ  ಅಗತ್ಯ ಸಿದ್ಧತೆ  ವಿರಾಜಪೇಟೆ: ಕೇರಳ ಹಾಗೂ…

3 hours ago

ಗುಂಡ್ಲುಪೇಟೆ: ರಾಷ್ಟ್ರೀಯ ಹೆದ್ದಾರಿ ಫುಟ್‌ಪಾತ್ ಒತ್ತುವರಿ

ಮಹೇಂದ್ರ ಹಸಗೂಲಿ ಪಾದಚಾರಿಗಳು ಓಡಾಡದಂತೆ ವಿರೂಪ; ಒತ್ತುವರಿ ತೆರವಿಗೆ ಸಾರ್ವಜನಿಕರ ಆಗ್ರಹ  ಗುಂಡ್ಲುಪೇಟೆ: ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಫುಟ್‌ಪಾತ್‌ಗಳನ್ನು…

3 hours ago

ಶಾಲಾ ಮಕ್ಕಳಿಗೆ ಪಾದರಕ್ಷೆ ಭಾಗ್ಯ!

‘ವಿದ್ಯಾವಿಕಾಸ’ ಯೋಜನೆಯಡಿ ಅಗತ್ಯವಿದ್ದರೆ ಚಪ್ಪಲಿ ನೀಡಲು ಸಿದ್ಧತೆ  ಮೈಸೂರು: ‘ವಿದ್ಯಾವಿಕಾಸ’ ಯೋಜನೆಯಡಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ೧ನೇ ತರಗತಿಯಿಂದ ೧೦ನೇ…

3 hours ago