ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ಮುದ್ದು ಪ್ರಾಣಿಗಳ ಪ್ರದರ್ಶನ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು.
ದೇಶ, ವಿದೇಶದ ಶ್ವಾನಗಳು ತಮ್ಮ ತುಂಟಾಟ, ಬೆಡಗು ಬಿನ್ನಾಣದಲ್ಲಿ ಹೆಜ್ಜೆ ಹಾಕುವುದರ ಮೂಲಕ ಪ್ರೇಕ್ಷಕರನ್ನು ರಂಜಿಸಿ ನೂರಾರು ಮಂದಿಯನ್ನು ಆಕರ್ಷಿಸಿದವು.
ಶ್ವಾನಗಳ ಆಟ-ಪಾಠ, ಬುದ್ಧಿವಂತಿಕೆ, ಜಾಣ್ಮೆ, ಮುಗ್ಧತೆ, ತುಂಟಾಟ, ತಾಳ್ಮೆ ಹಾಗೂ ಅವುಗಳ ಪ್ರೀತಿಯನ್ನು ಪ್ರದರ್ಶನದಲ್ಲಿ ನೆರೆದಿದಂತಹ ಪ್ರೇಕ್ಷಕರು ಕಣ್ತುಂಬಿಕೊಂಡರು. ಪ್ರಾಣಿಪ್ರಿಯರಿಗೆ ಇದೊಂದು ಉತ್ತಮ ವೇದಿಕೆಯಾಗಿದ್ದು, ಮುದ್ದು ಮುದ್ದಾದ ಶ್ವಾನಗಳನ್ನು ಕಂಡು ಪ್ರಾಣಿ ಪ್ರಿಯರು ಖುಷಿ ಪಟ್ಟರು.
ಕೆಲವು ಶ್ವಾನಗಳಿಗೆ ಪಿಂಕ್ ಮತ್ತು ಪರ್ಪಲ್ ಕಲರ್ ಬಟ್ಟೆಯನ್ನು ಧರಿಸಿ ಪ್ರದರ್ಶನ ನೀಡುವುದರ ಮೂಲಕ ಹೆಚ್ಚು ಗಮನ ಸೆಳೆದವು. ಪ್ರದರ್ಶನದಲ್ಲಿ ನೆರೆದಿದ್ದ ಮಕ್ಕಳು ಶ್ವಾನಗಳನ್ನು ಕಂಡು ತುಂಬಾ ಸಂತೋಷ ಪಟ್ಟರು.
ಇದನ್ನೂ ಓದಿ:-ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಹ: ಮೋದಿ ಸರ್ಕಾರ ರಾಜ್ಯದ ಪರ ನಿಲ್ಲುತ್ತದೆ ಎಂದ ಎಚ್‌ಡಿಕೆ
ಇಂದು ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಜೆ..ಕೆ.ಮೈದಾನದಲ್ಲಿ ನಡೆದ “ಮುದ್ದು ಪ್ರಾಣಿಗಳ ಪ್ರದರ್ಶನ ಸ್ಪರ್ಧೆಯ” ಕಾರ್ಯಕ್ರಮದಲ್ಲಿ ಸಿಲುಕಿ, ಮುಧೋಳ ಹೌಂಡ್, ಸೈಬೀರಿಯನ್ ಹಸ್ಕಿ, ಗ್ರೇಟ್ ಡೆನ್, ಪೂಡ್ಲೀ, ಡಾಗೂ ಅರ್ಜೆಂಟೀನಾ, ರಾಜ ಪುಲಿಯಂ, ಪಿಟ್ ಬುಲ್, ಕಾಕರ್ ಸ್ಪ್ಯಾನಿಯಲ್, ಬಾಕ್ಸರ್, ಪಗ್, ಕೊಕ್ಕೊಪೋ, ಪ್ರೆಂಚ್ ಬುಲ್ ಡಾಗ್, ಓಲ್ಡ್ ಶೀಪ್ ಡಾಗ್, ಐರಿಷ್ ಸೆಟ್ಟರ್ ಬೀಗಲ್, ಡಚ್ ಶೆಪರ್ಡ್, ಜರ್ಮನ್ ಶೆಪರ್ಡ್, ಚೌ ಚೌ, ಗೋಲ್ಡನ್ ರಿಟ್ರೀವರ್, ಬಾರ್ಡರ್ ಕೋಲಿ, ಬರ್ಮೀಸ್ ಮೌಂಟೇನ್ ಡಾಗ್, ಲಾಸ್ ಅಪ್ಸೋ, ಸೇರಿಂದಂತೆ ಮತ್ತಿತರ ಶ್ವಾನಗಳು ಪ್ರದರ್ಶನ ನೀಡಿದವು.
ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಉತ್ತಮ ತಳಿಗಳ ಶ್ವಾನಗಳನ್ನು ಶ್ವಾನ ವೈದ್ಯಾಧಿಕಾರಿಗಳು ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಅನುಭವ ಹೊಂದಿರುವಂತಹ ತೀರ್ಪುಗಾರರಿಂದ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ವಿತರಿಸಲಾಯಿತು.
ಬೆಂಗಳೂರು : ಭಾರತವನ್ನು ಆತ್ಮನಿರ್ಭರ ರಾಷ್ಟ್ರವನ್ನಾಗಿಸುವ ದಿಶೆಯಲ್ಲಿ ಕರ್ನಾಟಕದಂತಹ ಸ್ವಾವಲಂಬಿ ರಾಜ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೃಷಿಯಿಂದ ಕೈಗಾರಿಕೆವರೆಗೆ ಹಾಗೂ…
ಹನೂರು : ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ದಾಳಿ…
ಬೆಂಗಳೂರು : ರಾಜ್ಯದ ಎಲ್ಲಾ ರೀತಿಯ ಸಿವಿಲ್ ಹುದ್ದೆಗಳಿಗೆ 2027ರ ಡಿಸೆಂಬರ್ 31ರವರೆಗೆ ಹೊರಡಿಸುವ ನೇಮಕಾತಿ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲಾ…
ಮಂಡ್ಯ : ಸಾರ್ವಜನಿಕರಿಗೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ವು ಜಿಲ್ಲೆಯಲ್ಲಿ…
ಮಂಡ್ಯ : ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಯದ್ದು ಬರಿ ಡಬಲ್ ಸ್ಟ್ಯಾಂಡರ್ಡ್ ನಾಟಕವಾಗಿದೆ. ಜಾತ್ಯತೀತ ಜನತಾದಳವನ್ನು ಓಡಿಸುವುದಕ್ಕೆ ಅವರಿಗೆ ತಾಕತ್ತಿದೆಯೇ?.…
ನಾಗಮಂಗಲ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಕೆ ಪ್ರಕರಣ ಮಂಡ್ಯ : ನಾಗಮಂಗಲ ತಾಲ್ಲೂಕಿನ ನಕಲಿ ದಾಖಲೆ ಸೃಷ್ಟಿ…