ನಮ್ಮ ಮೈಸೂರ ದಸರಾ 2025

ಮೈಸೂರು ದಸರಾ | ಪ್ರವಾಸಿಗರಿಗೆ ಸುರಕ್ಷತೆ ಜೊತೆಗೆ ಮಾಹಿತಿ ಸಂಗ್ರಹಿಸಲು ಕಮಿಷನರ್‌ ಸೂಚನೆ

ಮೈಸೂರು : ಮುಂಬರುವ ನಾಡಹಬ್ಬ ದಸರಾ ಸಂದರ್ಭದಲ್ಲಿ ಮೈಸೂರಿಗೆ ಆಗಮಿಸಲಿರುವ ಪ್ರವಾಸಿಗರಿಗೆ ಸುರಕ್ಷತೆಯನ್ನು ಒದಗಿಸಬೇಕು ಹಾಗೂ ಹೋಟೆಲ್‌ನಲ್ಲಿ ಉಳಿದುಕೊಳ್ಳವ ಪ್ರವಾಸಿಗರ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿಟ್ಟಕೊಳ್ಳಬೇಕುಂದು ನಗರ ಪೊಲೀಸ್ ಆಯುಕ್ತರಾದ ಸೀಮಾಲಾಟ್ಕರ್ ಸೂಚನೆ ನೀಡಿದ್ದಾರೆ.

ಗುರುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಹೋಟೆಲ್ ಮಾಲೀಕರು ಹಾಗೂ ವ್ಯವಸ್ಥಪಾಕರ ಸಭೆಯಲ್ಲಿ ದಸರಾ ವೇಳೆ ತೆಗೆದುಕೊಳ್ಳಬೇಕಾದ ಜಾಗೃತ ಕ್ರಮಗಳ ಬಗ್ಗೆ ಹೋಟೆಲ್ ಮಾಲೀಕರುಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು.

ದಸಾರ ವೇಳೆ ಮೈಸೂರು ನಗರಕ್ಕೆ ದೇಶ ವಿದೇಶಗಳೀಂದ ಲಕ್ಷಾಂತರ ಮಂದಿ ಪ್ರವಾಸಿಗರು ಆಗಮಿಸಲಿದ್ದಾರೆ ಆದರಲ್ಲಿಯೂ ಜಂಬೂ ಸವಾರಿ ಮುನ್ನ ದಿನ ನಗರದ ಹೋಟೆಲಗಳಲ್ಲಿ ಎಲ್ಲಾ ಕೋಠಡಿಗಳು ಭರ್ತಿಯಾಗುವ ಸಾಧ್ಯತೆಗಳು ಹೆಚ್ಚು ಆದ್ದರಿಂದ ಪ್ರವಾಸಿಗರಿಗೆ ಸುರಕ್ಷತೆ ಒದಗಿಸಿವುದು ನಿಮ್ಮೆಲ್ಲರ ಜವಬ್ದಾರಿ ಎಂದು ಹೇಳಿದರು.

ಹೋಟೆಲ್ ಹಾಗೂ ವಸತಿಗೃಹಗಳ ಆಳವಡಿಸಿರುವ ಸಿಸಿ ಟಿವಿ ಕ್ಯಾಮರಗಳನ್ನು ಸುಸ್ಥಿಯಲ್ಲಿ ಇಟ್ಟಕೊಳ್ಳಬೇಕು, ವಸತಿ ಗೃಹದಲ್ಲಿ ತಗ್ಗುವವರ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ಇಟ್ಟಿಕೊಳ್ಳಬೇಕು. ಎಲ್ಲಾ ಆಧಾರ್ ಹಾಗೂ ವಿಳಾಸ ಧೃಢಿಕರಣ ಗುರುತಿನ ಚೀಟಿ ನಕಲು ಪ್ರತಿಗಳನ್ನು ಸಂಗ್ರಹಿಸಿ ಇಟ್ಟಿಕೋಳಬೇಕು ಈ ಸಂಬಂಧ ಯಾವುದೇ ಪ್ರವಾಸಿಗರು ಅನುಮಾನಸ್ಪಂದವಾಗಿ ನಡೆದುಕೊಂಡಲ್ಲಿ ಕೊಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಒಟ್ಟಾರೆ ದಸರಾ ಸಂದರ್ಭದಲ್ಲಿ ನಗರಕ್ಕೆ ಆಗಮಿಸುವ ಪ್ರವಾಸಿಗರಿಗೆ ಯಾವುದೇ ಅನಾನುಕೂಲತೆಗಳು ಆಗದಂತೆ ನೀಗವಹಿಸಬೇಕು. ಇದರ ಜೊತೆಗೆ ಪೊಲೀಸರು ಯಾವುದೇ ಸಂದರ್ಭದಲ್ಲಿ ಹೋಮ್‌ಸ್ಟೇ ರೆಸಾರ್ಟ್ ಹಾಗೂ ವಸತಿ ಗೃಹಗಳಿಗೆ ಆಗಮಿಸಿ ಮಾಹಿತಿ ಕೇಳಿದಲ್ಲಿ ನಿವುಗಳು ನೀಡಬೇಕು. ಈ ಸಂಬಂಧ ಸೂಕ್ತ ಹೆಚ್ಚರಿಕೆಯಿಂದ ಹಾಗೂ ಜವಬ್ದಾರಿ ನಿಮ್ಮ ಕೆಲಸವನ್ನು ನಿರ್ವಹಿಸಬೇಕು ಎಂದು ನಗರ ಪೊಲೀಸ್ ಆಯುಕ್ತರಾದ ಸೀಮಾಲಾಟ್ಕರ್ ತಿಳಿಸಿದರು.

ಸಭೆಯಲ್ಲಿ ಡಿಸಿಪಿಗಳಾದ ಬಿಂದುಮಣಿ, ಕೆ.ಎಸ್,ಸುದರ್‌ರಾಜು, ಹಾಗೂ ಮತ್ತಿತ್ತರ ಅಧಿಕಾರಿಗಳು ಉಪಸ್ಥಿತರಿದ್ದರು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ | ಮೇಕ್ ಇನ್ ಇಂಡಿಯಾಗೆ ಕಾಲ ಪಕ್ವ

ಕೊಲ್ಲಿಯಲ್ಲಿ ಇಸ್ರೇಲ್-ಅಮೆರಿಕ ದೇಶಗಳು ಜಂಟಿಯಾಗಿ ಇರಾನ್ ವಿರುದ್ಧ ಸಾರಿರುವ ಸಮರ ದಿನೇ ದಿನೇ ಉಗ್ರಸ್ವರೂಪ ಪಡೆಯುತ್ತಿದ್ದು, ಇಡೀ ವಿಶ್ವಕ್ಕೆ ಕಂಟಕಪ್ರಾಯವಾಗಿದೆ.…

2 mins ago

ಓದುಗರ ಪತ್ರ | ಮದ್ಯಪ್ರಿಯರ ತಾಣವಾಗಿರುವ ಬಸ್ ತಂಗುದಾಣ

ಚಾಮರಾಜನಗರ ತಾಲ್ಲೂಕಿನ ಮುಕ್ಕಡಹಳ್ಳಿಯ ಬಸ್ ತಂಗುದಾಣವು ರಾತ್ರಿಯ ವೇಳೆಯಲ್ಲಿ ಮದ್ಯಪಾನದಂತಹ ಅನೈತಿಕ ಚಟುವಟಿಕೆಗೆ ವೇದಿಕೆಯಾಗಿದೆ. ಕುಡಿದು ಬಾಟಲಿಗಳು, ಮದ್ಯದ ಪೌಚ್‌ಗಳು,…

22 mins ago

ಇಂದು ದಿ.ಎಲ್.ಜಿ.ಹಾವನೂರು ಹುಟ್ಟುಹಬ್ಬ ; ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸಿದ ಹಾವನೂರು

ಹಾವನೂರು ಆಯೋಗದ ವರದಿಯನ್ನು ಅಂದಿನ ಮುಖ್ಯಮಂತ್ರಿ ಅರಸು ಅವರು 'ಹಿಂದುಳಿದ ವರ್ಗಗಳ ಬೈಬಲ್' ಎಂದು ಬಣ್ಣಿಸಿದರೆ, ಸರ್ವೋಚ್ಚ ನ್ಯಾಯಾಲಯವು 'ಹಿಂದುಳಿದ…

34 mins ago

ಸಾಮಾಜಿಕ ಮಾಧ್ಯಮಗಳ ನಿಯಂತ್ರಣ; ಸಲೀಸಲ್ಲ ಅನುಸರಣೆ

ಕೇವಲ 3 ಗಂಟೆಗಳಲ್ಲಿ ಸತ್ಯಾಸತ್ಯತೆ ಪರಿಶೀಲನೆ ಸಾಧ್ಯವೇ? • ಶೇಷಾದ್ರಿ ಗಂಜೂರು, ಮಾಧ್ಯಮ ತಜ್ಞ ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯದಲ್ಲಿ, ಅದರಲ್ಲೂ…

2 hours ago

ಅರಕೆರೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ,ರೋಗಿಗಳ ಪರದಾಟ

ರಾತ್ರಿ ಪಾಳಿಯಲ್ಲಿ ನರ್ಸ್‌ಗಳು, ವೈದ್ಯರ ನಿಯೋಜನೆಗೆ ಜನತೆ ಒತ್ತಾಯ • ಸಿದ್ದೇಗೌಡ ಕೊಡಿಯಾಲ ಶ್ರೀರಂಗಪಟ್ಟಣ : ಕ್ಷೇತ್ರದ ಶಾಸಕ ರಮೇಶ್…

3 hours ago

ಅರಮೇರಿ, ಕಡಂಗಮೂರುರಲ್ಲಿ ಗಣಿಗಾರಿಕೆಗೆ ವಿರೋಧ

ಸ್ಥಳೀಯರಿಗೆ ಸಮಸ್ಯೆ; ಹೋರಾಟದ ಎಚ್ಚರಿಕೆ ನೀಡಿದ ಗ್ರಾಮಸ್ಥರು • ಕಾಂಗೀರ ಬೋಪಣ್ಣ ವಿರಾಜಪೇಟೆ : ಸ್ಥಳೀಯರಿಗೆ ಎಲ್ಲ ರೀತಿಯಲ್ಲೂ ಸಮಸ್ಯೆಯನ್ನು…

3 hours ago