ಮೈಸೂರು : ದಸರಾ ಕಾರ್ಯಕ್ರಮಗಳ ರೂಪುರೇಷಗಳು ಭರದಿಂದ ಸಾಗುತ್ತಿದೆ. ಇತ್ತ ಯುವಸಂಭ್ರಮವು ಶುರುವಾಗಿದೆ. ಹೀಗೆ ದಸರೆಯ ವೈವಿಧ್ಯಮಯ ಕಾರ್ಯಕ್ರಮ, ಅರಮನೆಯ ಮೆರಗು, ಮೈಸೂರಿನ ರಾಜ ಬೀದಿಯ ಲೈಟಿಂಗ್ಸ್ ನೋಡಿ ಕಣ್ತುಂಬಿಕೊಳ್ಳಲು ನಗರಕ್ಕೆ ಬರುವವರಿಗೆ ಬಗೆಬಗೆಯ ಖಾದ್ಯ ಉಣಬಡಿಸುವ ದಸರಾ ಆಹಾರ ಮೇಳಕ್ಕೆ ಸಿದ್ಧತೆ ನಡೆದಿದೆ. ದಸರಾ ಉದ್ಘಾಟನೆ ದಿನವೇ ಆಹಾರ ಮೇಳ ಸಹ ಉದ್ಘಾಟನೆಯಾಗಲಿದೆ.
ಇನ್ನೂ ಈ ಬಾರಿ ವಿಶೇಷವೆನೆಂದರೇ, ಪ್ರತಿ ವರ್ಷ ಜಂಬೂಸವಾರಿ ದಿನದಂದೇ ಅಂತ್ಯಗೊಳ್ಳುತ್ತಿದ್ದ ಆಹಾರ ಮೇಳದ ಅವಧಿಯನ್ನು ಮೂರು ದಿನ ವಿಸ್ತರಿಸಲಾಗಿದೆ. ವಾರಾಂತ್ಯದ ಭಾನುವಾರದವರೆಗೂ ಮೈಸೂರಿಗೆ ಬರುವ ಪ್ರವಾಸಿಗರು ಆಹಾರ ಮೇಳದಲ್ಲಿ ತಮಗಿಷ್ಟವಾದ ಆಹಾರದ ಸವಿಯನ್ನು ಸವಿಯಬಹುದಾಗಿದೆ.
ದಸರಾ ಉದ್ಘಾಟನೆ ದಿನವಾದ ಸೆ.22 ರಿಂದ ಅ.2 ರಂದು ಜಂಬೂಸವಾರಿ ಮೆರವಣಿಗೆ ನಡೆಯುವ ದಿನದವರೆಗೂ ಆಹಾರ ಮೇಳ ನಡೆಯಬೇಕಿತ್ತು. ಆದರೆ, ಈ ಬಾರಿ ವಾರಾಂತ್ಯವೂ ಸೇರಿದಂತೆ ಅ.5 ರವರೆಗೆ ಆಹಾರ ಮೇಳ ನಡೆಸಲು ತೀರ್ಮಾನಿಸಲಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಮಹಾರಾಜ ಕಾಲೇಜು ಮೈದಾನದಲ್ಲಿ ಆಹಾರ ಮೇಳ ನಡೆಯಲಿದೆ. 120 ಮಳಿಗೆಗಳನ್ನು ತೆರೆಯಲು ಕ್ರಮವಹಿಸಲಾಗಿದೆ.
ಆಹಾರ ಮೇಳದಲ್ಲಿ ಮಕ್ಕಳ ಉತ್ಸವ
ಯುವ ಸಂಭ್ರಮದಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಾಗುತ್ತದೆ. ಆದರೆ, ಶಾಲಾ ಮಕ್ಕಳಿಗೆ ಯಾವುದೇ ಅವಕಾಶವಿರಲಿಲ್ಲ. ಈ ಬಾರಿ ಶಾಲಾ ಮಕ್ಕಳಿಂದ ಆಹಾರ ಮೇಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ವಿಜೇತರಾದ ಶಾಲೆಗಳ ಮಕ್ಕಳಿಂದ ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಗಿದ್ದು, ಮೈಸೂರು ಜಿಲ್ಲೆಯ ಎಲ್ಲ ತಾಲೂಕುಗಳಿಂದ ಆಯ್ಕೆಯಾದ ನಾಲ್ಕರಿಂದ ಐದು ಶಾಲೆಗಳ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿವೆ. ಶಾಲೆ ಮಕ್ಕಳೊಂದಿಗೆ ಪೋಷಕರು ಸಹ ಆಹಾರ ಮೇಳಕ್ಕೆ ಆಗಮಿಸುವುದರಿಂದ ಹೆಚ್ಚಿನ ಜನರು ಸೇರುವ ನಿರೀಕ್ಷೆಯಿದೆ, ಎನ್ನುತ್ತಾರೆ ಅಧಿಕಾರಿಗಳು.
ಮಳಿಗೆಗೆ ಬೇಡಿಕೆ
ಆಹಾರ ಮೇಳದಲ್ಲಿ ಮಳಿಗೆ ತೆರೆಯಲು ಸಾಕಷ್ಟು ಸ್ಪರ್ಧೆ ಎದುರಾಗಿದ್ದು, ಅರ್ಜಿಗಳ ಮಹಾಪೂರವೇ ಹರಿದು ಬಂದಿದೆ. ಮೇಳದಲ್ಲಿ 120 ಮಳಿಗೆಗಳನ್ನು ತೆರೆಯಲು ನಿರ್ಧರಿಸಲಾಗಿದ್ದು, 250 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಉತ್ತಮವಾಗಿ ವಿಶೇಷ ಆಹಾರ ಪದಾರ್ಥಗಳನ್ನು ತಯಾರಿಸುವ ಹೋಟೆಲ್ ಅಥವಾ ವರ್ತಕರಿಗೆ ಮಳಿಗೆಗಳನ್ನು ಬಾಡಿಗೆಗೆ ನೀಡಲಾಗುವುದು ಎನ್ನುತ್ತಾರೆ ಆಹಾರ ಮೇಳದ ಅಧಿಕಾರಿಗಳು.
ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿಯ ಸೂತ್ರವನ್ನು ಹೆಣೆಯುವಲ್ಲಿ ಕರ್ನಾಟಕ ಸರ್ಕಾರ ಕೊನೆಗೂ ಯಶಸ್ವಿಯಾಗಿದೆ. ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಬಲಗೈ, ಎಡಗೈಗೆ ತಲಾ…
ಪ್ರೊ.ಶಬ್ಬೀರ್ ಮುಸ್ತಾಫಾ ಜಿ.ಪಿ.ಬಸವರಾಜು ಸಮುದಾಯದ ನಂಬಿಕೆಯನ್ನು ಉಳಿಸಿಕೊಳ್ಳಬೇಕಾದದ್ದು ಕಾಂಗ್ರೆಸ್ ಪಕ್ಷದ ಹೊಣೆ ಭಾರತದಂಥ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಚುನಾವಣೆ ಎನ್ನುವುದು ನಿರಂತರ…
ಜನನಾಯಕನ ಪೌರುಷವನ್ನು ಕೆಣಕುತ್ತಿದ್ದಾರೆ ಸಿದ್ದು ಆಪ್ತರು ರಾಜ್ಯದ ಆಡಳಿತ ಯಂತ್ರದ ಚುರುಕಿಗೆ ಸಚಿವ ಸಂಪುಟ ಪುನರ್‌ರಚಿಸಬೇಕೆಂಬ ಒತ್ತಾಸೆಯೂ ಇದೆ ಕಳೆದ…
ನವೀನ್ ಡಿಸೋಜ ಚಾರಣಿಗರ ಸುರಕ್ಷತೆ, ಪ್ರಕೃತಿ ಸಂಪತ್ತಿನ ಉಳಿವಿಗೆ ಹೊಸ ಮಾರ್ಗಸೂಚಿ ಸಹಕಾರಿ; ಪರಿಣಾಮಕಾರಿಯಾಗಿ ಜಾರಿಗೊಳಿಸಲು ಒತ್ತಾಯ ಮಡಿಕೇರಿ: ಅರಣ್ಯ…
ವರಹಳ್ಳಿ ಆನಂದ ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಶಾಲೆಯಲ್ಲೀಗ ಕಲಿಯುತ್ತಿರುವುದು ಕೇವಲ ೩೯ ಮಕ್ಕಳು ಮೈಸೂರು: ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಗ್ರಾಮದ…
ಭಾರತದ ಕುರಿತು ಟ್ರಂಪ್ ಅವಹೇಳನಕಾರಿ ಹೇಳಿಕೆಗೆ ಒಂದು ಪ್ರತಿಕ್ರಿಯೆ ನಾನು ಅಮೆರಿಕಕ್ಕೆ ಪ್ರಥಮ ಬಾರಿಗೆ ಕಾಲಿಟ್ಟಿದ್ದು ಮೂರೂವರೆ ದಶಕಗಳಿಗೂ ಹಿಂದೆ.…