ನಮ್ಮ ಮೈಸೂರ ದಸರಾ 2024

ಸಾಂಸ್ಕೃತಿಕ ಚಳುವಳಿಯಾದ ಈ ಬಾರಿಯ ದಸರಾ: ಡಾ.ಹೆಚ್.ಸಿ.ಮಹದೇವಪ್ಪ

ಮೈಸೂರು:  ಸಂಗೀತ, ಸಾಹಿತ್ಯ, ಕಲೆ, ಕೃಷಿ, ಹೈನುಗಾರಿಗೆ, ಕ್ರೀಡೆ, ಮಹಿಳೆಯರ ಕೊಡುಗೆಗಳು, ಜನರ ಜೀವನ ಕ್ರಮ ಹಾಗೂ ಮೌಲ್ಯಗಳು ಅಭಿವ್ಯಕ್ತಿಯಾದ ಈ ಬಾರಿಯ ದಸರಾವು ಸಾಂಸ್ಕೃತಿಕ ಚಳಿವಳಿಯಾಗಿ ಜರುಗಿದೆ ಎಂದು ಸಮಾಜ ಕಲ್ಯಾಣ ಹಾಗೂ  ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ  ಹೇಳಿದರು.

ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಗರದ ಕುಪ್ಪಣ್ಣ ಉದ್ಯಾನದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿದ್ದ “ದಸರಾ ಫಲಪುಷ್ಪ ಪ್ರದರ್ಶನ”ದಲ್ಲಿ ಅತ್ಯುತ್ತಮ ಉದ್ಯಾನ ವಿನ್ಯಾಸಗೊಳಿಸಿದ ವಿಜೇತರಿಗೆ ಪ್ರಶಸ್ತಿ ವಿತರಿಸಿದ ಸಚಿವರು ಮಾತನಾಡಿದರು.

ರಾಜ್ಯದಲ್ಲಿ ಉತ್ತಮವಾಗಿ ಮಳೆಯಾದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದ್ದೂರಿ ದಸರಾ ಆಚರಿಸುವಂತೆ ತಿಳಿಸಿದ್ದರು. ಅದರಂತೆ ಜನರಲ್ಲಿ ಸಹೋದರತೆ, ಸೌಹಾರ್ದತೆ, ಘನತೆಯ ಬದುಕನ್ನು ಬಿತ್ತುವಂತೆ ಈ ಬಾರಿಯ ದಸರಾವನ್ನು ಆಚರಿಸಲಾಗಿದೆ. ದರ್ಮ, ಜಾತಿಗೂ ಮೀರಿದ ಸಮಾಜವನ್ನು ನಿರ್ಮಿಸುವ ಸಂದೇಶ ಸಾರಲಾಗಿದೆ ಎಂದರು.

ಈ ಬಾರಿಯ ದಸರಾ ವಿಭಿನ್ನವಾಗಿತ್ತು ಎಂಬ ಉತ್ತಮ ಅಭಿಪ್ರಾಯ ಜನರಿಂದ ಕೇಳಿಬಂದಿದೆ. ದಸರಾ ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದುಬಂದಿದ್ದು, ಜನರು ಕೂಡ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರಿಂದ ಜನರ ದಸರಾವಾಗಿ ಪರಿಣಮಿಸಿದೆ. ದಸರಾ ಯಶಸ್ಸಿಗೆ ಮೈಸೂರಿನ ಎಲ್ಲಾ ಜನತೆ ಕಾರಣೀಭೂತರಾಗಿದ್ದಾರೆ. ಈ ಯಶಸ್ವಿ ದಸರಾ ಆಚರಣೆ ಮೂಲಕ ರಾಜ್ಯ ಸರ್ಕಾರಕ್ಕೆ ಸಾಂಸ್ಕೃತಿಕ ಕಿರೀಟ ಇಟ್ಟಂತಾಗಿದೆ ಎಂದು ಹೇಳಿದರು.

ತೋಟಗಾರಿಕೆ ಇಲಾಖೆಯಿಂದ ಫಲಪುಷ್ಟ ಪ್ರದರ್ಶನವನ್ನು ಅತ್ಯಂತ ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗಿದೆ. ವಿವಿಧ ಪುಷ್ಪಗಳು ಹಾಗೂ ಸಿರಿಧಾನ್ಯಗಳಿಂದ ಬಗೆಬಗೆಯ ಕಲಾ ಪ್ರಕಾರಗಳನ್ನು ರಚಿಸಿ ಜನರ ಮೆಚ್ಚುಗೆ ಗಳಿಸಲಾಗಿದೆ. ಸುಮಾರು 5 ಲಕ್ಷಕ್ಕಿಂತ ಹೆಚ್ಚು ಜನರು ವೀಕ್ಷಣೆ ಮಾಡಿರುವುದು ಸಂತೋಷದ ವಿಚಾರ ಎಂದು ಹೇಳಿದರು.

ಗಾಜಿನಮನೆಯಲ್ಲಿ ಸಿದ್ಧಪಡಿಸಿರುವ `ಪ್ರಜಾಪ್ರಭುತ್ವ ನಡೆದು ಬಂದ ದಾರಿ’ ಎಂಬ ಪರಿಕಲ್ಪನೆಯ ವಿನ್ಯಾಸವು ಆರನೇ ಶತಮಾನದಿಂದ ಇಲ್ಲಿಯವರೆಗೆ ಪ್ರಜಾಪ್ರಭುತ್ವ ವ್ಯವಸ್ಥೆ ಹೇಗಿತ್ತು ಎಂಬುದನ್ನು ಹೇಳುತ್ತದೆ. ಬುದ್ಧರ ಕಾಲ, ಅನುಭವ ಮಂಟಪ, ಸ್ವಾತಂತ್ರ್ಯ ಚಳುವಳಿ, ಸಂವಿಧಾನ, ಸಂಸತ್ ಭವನ ಎಲ್ಲವನ್ನು ಸುಂದರವಾಗಿ ವಿನ್ಯಾಸಗೊಳಿಸುವ ಮೂಲಕ ಪ್ರಪಂಚಕ್ಕೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ವಿವರಿಸಲಾಗಿದೆ ಎಂದು ಪ್ರಶಂಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ.ಗಾಯಿತ್ರಿ , ತೋಟಗಾರಿಕೆ ಉಪನಿರ್ದೇಶಕರಾದ ಮಂಜುನಾಥ್, ಹಿರಿಯ ಸಹಾಯಕ ನಿರ್ದೇಶಕರಾದ ಹಬೀಬಾ ನಿಶಾತ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಮಳವಳ್ಳಿ | ಸಾರಿಗೆ ಬಸ್‌ಗಳ ಡಿಕ್ಕಿ ; ಪ್ರಯಾಣಿಕರಿಗೆ ಗಾಯ

ಮಳವಳ್ಳಿ : ಕೆಎಸ್‌ಆರ್‌ಟಿಸಿ ಬಸ್‌ಗೆ ಹಿಂದಿನಿಂದ ಬಂದ ಮತ್ತೊಂದು ಬಸ್‌ ಡಿಕ್ಕಿ ಹೊಡೆದ ಪರಿಣಾಮ ಬಸ್‌ನಲ್ಲಿದ್ದ 14 ಮಂದಿ ಗಾಯಗೊಂಡಿರುವ…

26 mins ago

ಬೆಲೆ ಏರಿಕೆ ಖಂಡಿಸಿ ಧರಣಿ: ಬಿಜೆಪಿಯ ನಿರ್ಧಾರ ಸರಿಯಲ್ಲ ಎಂದ ಜೆಡಿಎಸ್‌

ಬೆಂಗಳೂರು: ಜೆಡಿಎಸ್‌ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಸರ್ಕಾರದ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಏಕಪಕ್ಷೀಯವಾಗಿ ಧರಣಿ ನಡೆಸುತ್ತಿರುವುದು ಸರಿಯಲ್ಲ ಎಂದು…

37 mins ago

ರೈತರಿಗೆ ಸಿಹಿಸುದ್ದಿ | ಎಲ್ಲಾ ರೈತರಿಗೆ ಮತ್ತೆ ಸೂಕ್ಷ್ಮ ನೀರಾವರಿಗೆ ಸಹಾಯಧನ

ಕೃಷಿ ಇಲಾಖೆಯ ಮಹತ್ವದ ಆದೇಶ ಬೆಂಗಳೂರು : ಸೂಕ್ಷ್ಮ ನೀರಾವರಿ ಪರಿಕರಗಳನ್ನು ಪಡೆಯಲು ಇದ್ದ ನಿರ್ಬಂಧವನ್ನು ಸರ್ಕಾರ ಸಡಿಲಿಸಿದ್ದು ಎಲ್ಲಾ…

54 mins ago

ಗುಂಡ್ಲುಪೇಟೆ | ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ

ಗುಂಡ್ಲುಪೇಟೆ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಾರ್ವಜನಿಕರ ದಿನ ಬಳಕೆ ವಸ್ತುಗಳಾದ ಡಿಸೇಲ್, ಪೆಟ್ರೋಲ್, ಹಾಲು, ಮೊಸರು, ದಿನಸಿ ಪದಾರ್ಥಗಳು,…

1 hour ago

ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸಲು ರಾಜ್ಯ ಸರ್ಕಾರ ತೀರ್ಮಾನ

ರಾಹುಲ್ ಗಾಂಧಿ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ಸಚಿವರಾದ ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ, ಎಂ.ಬಿ.ಪಾಟೀಲ್ ಚರ್ಚೆಯಲ್ಲಿ ಭಾಗಿ ಹೊಸದಿಲ್ಲಿ…

1 hour ago

ಸಚಿವ ರಾಜಣ್ಣ ಧ್ವನಿ ಅಡಗಿಸಲು ಸಾಧ್ಯವಿಲ್ಲ: ಎಂಎಲ್‌ಸಿ ರಾಜೇಂದ್ರ

ಮೈಸೂರು: ಹನಿಟ್ರ್ಯಾಪ್‌ ಹಾಗೂ ಕೊಲೆ ಸುಪಾರಿಗೆ ಸಂಬಂಧಿಸಿದಂತೆ ಯಾವುದೇ ಕಾರಣಕ್ಕೂ ಸಚಿವ ರಾಜಣ್ಣ ಅವರ ಧ್ವನಿ ಅಡಗಿಸಲು ಸಾಧ್ಯವಿಲ್ಲ ಎಂದು…

2 hours ago