ನಮ್ಮ ಮೈಸೂರ ದಸರಾ 2024

ದಸರಾ ಕವಿಗೋಷ್ಠಿ: ಸಮೃದ್ಧಿ ಕವಿಗೋಷ್ಠಿಯಲ್ಲಿ ಕವಿತೆಗಳ ಸುರಿಮಳೆ

ಸಮೃದ್ಧಿ ಕವಿಗೋಷ್ಠಿಯಲ್ಲಿ 29 ಕವಿಗಳ ಕವಿತೆಯ ವಾಚನ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಕವಿಗೋಷ್ಠಿಯ ಪಂಚ ಕಾವ್ಯೋತ್ಸವದಲ್ಲಿ ದೇವರಾಜ ಹುಣಸಿಕಟ್ಟಿ ಅವರ ‘ಬೆಳಕನ್ನು ಮಾರಲು ಬಂದವನು ಎಂಬ ಕಾವ್ಯ ವಚನ, ಮಲ್ಲಿಕಾರ್ಜುನ ಅಮ್ಟೆ ಅವರ ಯುದ್ಧ ಏನನ್ನು ಸಾಧಿಸಲಾರದು ಎಂಬ ಕಾವ್ಯ ವಾಚನ, ರಜಿಯಾ ಡಿ.ಬಿ ಅವರ ಹೇಗೆ ಕರೆ ತರಲಿ ಎಂಬ ಕಾವ್ಯ ವಾಚನ, ರವಿಕುಮಾರ್ ಕಟ್ಟಿಮನೆ ಎಂ ಎಸ್ ಅವರ ಸಂಶೋಧನೆ ಎಂಬ ಕಾವ್ಯ ವಾಚನ, ಡಾ. ರಾಮಲಿಂಗೇಶ್ವರ ಅವರ ಕಾಲ ಸಮುದ್ರದ ಪ್ರಳಯ ಎಂಬ ಕಾವ್ಯ ವಾಚನಗಳು ಕವಿಪ್ರಿಯರು ಹಾಗೂ ನೆರೆದಿರುವ ಪ್ರೇಕ್ಷಕರಿಗೆ ದಾಸೋಹವಾದವು.

ಬುಧವಾರ ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಜಗನ್ಮೋಹನ ಅರಮನೆಯಲ್ಲಿ ನಡೆದ ಸಮೃದ್ಧ ಕವಿಗೋಷ್ಠಿಯ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಎಚ್.ಎಲ್ ಪುಷ್ಪ, ಪ್ರಖ್ಯಾತ ನಾಡಹಬ್ಬ ಮೈಸೂರು ದಸರಾಗೆ ತನ್ನದೇ ಆದ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಹಿನ್ನಲೆ ಇರುವಂಥದ್ದು ಇಂಥ ಕವಿಗೋಷ್ಠಿಗೆ 125 ಜನ ಕವಿಗಳಿಗೆ ಆಹ್ವಾನ ಸಿಕ್ಕಿದೆ. ಕವಿತೆ ಕೇಂದ್ರಬಿoದು, ಜೇಡ ತನ್ನ ಬಲೆಯನ್ನು ನೇಯುವ ಹಾಗೆ ಒಂದು ವಸ್ತುವನ್ನು ನೋಡಿ ಕವಿಯು ಕವಿತೆಯನ್ನು ನೇಯುತ್ತಾನೆ.

ಇಂತಹ ಕಾರ್ಯಕ್ರಮವು ಸಹಜವಾಗಿ ಸರ್ಕಾರದ ಆಯೋಜನೆಯಾಗಿದೆ. ಸಾಮಾಜಿಕ ನ್ಯಾಯದ ಅಡಿಯಲ್ಲಿ ಕೆಲವೊಂದು ಬಾರಿ ಕೆಲವು ಅವಕಾಶ ಸಿಗದೇ ಇರುವುದು ಸಹಜ ಎಂದರು.

ಪಂಪನ ಕಾಲದ ಸಾಹಿತ್ಯದಿಂದ ಆಧುನಿಕ ಸಾಹಿತ್ಯದವರೆಗೂ ವಿವರಿಸುತ್ತಾ ವಿಶೇಷವಾಗಿ ದಲಿತ ಕಾವ್ಯ, ಸಮಾಜವನ್ನು ಪ್ರಶ್ನಿಸುವಂಥ ಕಾವ್ಯಗಳು ಹಾಗೂ ಸಾರ್ವಕಾಲಿಕ ಕಾವ್ಯಗಳ ಬಗ್ಗೆ ವಿವರಿಸುತ್ತಾ ಇವು ನಮ್ಮ ದೈನಂದಿನ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ವಿವರಿಸಿದರು.

ಕವಿತೆಯನ್ನು ಓದುವಂತೆ ಮಾಡಿ ಅದನ್ನು ನಾವುಗಳು ಆಲಿಸಿಕೊಳ್ಳುವುದು ಒಂದು ರೀತಿಯ ಸೊಬಗು, ಅನೇಕ ವೃದ್ಧಾಶ್ರಮ, ಜೈಲು ಖೈದಿಗಳ ಕವಿತೆಗಳ ವಾಚನವನ್ನು ನೋಡಿದ್ದೇವೆ. ಕವಿತೆಗಳು ದಾರಿತಪ್ಪಿದ ರಾಜಪ್ರಭುತ್ವಗಳು ಹಾಗೂ ಪ್ರಭುತ್ವಗಳನ್ನು ಪ್ರಶ್ನಿಸಲಿವೆ ಎಂಬುದು ನಾವು ಕಂಡಿದ್ದೇವೆ. ಲಿಖಿತ ಸಂವಿಧಾನದ ಮೂಲಕ ಕಾವ್ಯಗಳನ್ನು ಕಟ್ಟುತ್ತಾ ಬಂದಿದೆ. ಕಾವ್ಯ ನಮ್ಮ ಬದುಕನ್ನು ಹೇಗೆ ರೂಪಿಸುತ್ತೆ ಎಂಬುದನ್ನು ನಾವು ಕಾಣಬಹುದಾಗಿದೆ ಎಂದು ತಿಳಿಸಿದರು.

ರಗಳೆಗಳ ಕವಿ ರನ್ನ 9 ನೇ ಕವಿರಾಜ ಮಾರ್ಗ ಕೃತಿಗಳು ನಾಡಿನ ಹೆಮ್ಮೆ ಹಾಗೂ ಸೌಹಾರ್ದತೆ ಸಾಕ್ಷಿಯಾಗಿದೆ. ಇನ್ನು ಕುವೆಂಪುರವರ ‘ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು’ ಕಾವ್ಯ, ಒಂದು ದೇಶ ಒಂದು ಜನ ಒಂದು ಜಾತಿ ಒಂದು ಎಂಬ ಸಂದೇಶದ ಕಾವ್ಯಗಳು, ವಿಶೇಷವಾಗಿ ದಲಿತ ಕಾವ್ಯ, ಲೈಂಗಿಕ ಕಾವ್ಯಗಳು ಕವಿತೆಗಳು ನೈಜ್ಯ ಹಾಗೂ ಪ್ರಾಮಾಣಿಕತೆ ರೂಪವಾಗಿದೆ. ಸಿದ್ಧಲಿಂಗಯ್ಯ ಅವರ, ಯಾರಿಗೆ ಬಂತು, ಎಲ್ಲಿಗೆ ಬಂತು ಸ್ವಾತಂತ್ರ್ಯ, ಹೋರಾಟದ ಕವಿತೆ, ನಮ್ಮ ಎಲುಬಿನ ಅಂದದೊಳಗೆ ಮಂದಿರ ಮಸೀದಿ ಎಂಬ ಸರ್ವಕಾಲಿಕ ಕವಿತೆಗಳು ಧರ್ಮ ಮುಖ್ಯವೋ ಮನುಷತ್ವ ಮುಖ್ಯವೋ ಎಂಬ ಸಂದೇಶದ ಕವಿತೆಗಳನ್ನು ಸ್ಮರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕರಾದ ಅಬ್ದುಲ್ ರಶೀದ್, ಒಂದೇ ವೇದಿಕೆಯಲ್ಲಿ ಎಲ್ಲಾ ರೀತಿಯ ಕವಿಗಳನ್ನು ಸೇರಿಸಿ ಕವಿತೆ ವಾಚನಗೊಳಿಸಿದ್ದು ನಿಜಕ್ಕೂ ಕವಿಗೋಷ್ಠಿ ವೇದಿಕೆಗೆ ಹೆಚ್ಚು ಮೆರಗು ತಂದಿದೆ. ಕವಿತೆಗಳು ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗದೆ ಕೇಳುಗರಿಗೆ ಹಿತ ಎನಿಸುವಂತೆ ಸಮೃದ್ದ ಕವಿಗೋಷ್ಠಿ ಯಶಸ್ವಿಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಕವಿತೆ ವಾಚನ ಮಾಡಿದ ಎಲ್ಲಾ ಕವಿ ಹಾಗೂ ಕವಯತ್ರಿಯರಿಗೆ ಸನ್ಮಾನ ಹಾಗೂ ಕಿರು ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೊ. ಕವಿತಾ ರೈ ಮಾತನಾಡಿ, ಬೇಡನೊಬ್ಬ ರಾಮಾಯಣ ರಚಿಸಿದ, ಬೆಸ್ತನೊಬ್ಬ ಮಹಾಭಾರತವನ್ನು ರಚಿಸಿದ ಹೀಗೆ ಅವರು ಕಟ್ಟಿದ ಕಾವ್ಯಗಳ ಹಾದಿಯಲ್ಲಿ ನಾವು ಇಂದು ಸಾಗಿದ್ದೇವೆ. ಹಲವಾರು ಕವಿ ಹಾಗೂ ಕವಯತ್ರಿಯರ ಕಾವ್ಯಗಳ ಧ್ವನಿಯು ಒಂದು ಅಸ್ವಸ್ಥ ಹಾಗೂ ಅನಾರೋಗ್ಯ ಸಮಾಜದ ಉಳಿಗಾಲವಾಗಿದೆ.

ಕಾವ್ಯಗಳಲ್ಲಿ ಹಲವಾರು ಸಮುದಾಯಗಳ ಪ್ರಾತಿನಿಧ್ಯವನ್ನು ಕಾಣಬಹುದು. ವರ್ತಮಾನದಲ್ಲಿ ಕವಿತೆಗಳ ವಿಚಾರಧಾರೆಯು ಬಹಳ ಮುಖ್ಯವಾದದ್ದು, ನಾನು ಅನೇಕ ಕವಿಗಳನ್ನು ಓದುಕೊಂಡು ಅವರನ್ನು ಅನುಸರಿಸಿಕೊಂಡಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ದೇಶದಲ್ಲಿ ಮುನುವಾದ, ಮೂಲಭೂತವಾದದ ಪರಿಕಲ್ಪನೆಗಳಿಗೆ ಸಾಹಿತಿಗಳ ಮೂಲಕ ಸಾರ್ಥಕತೆ ಸಿಕ್ಕಿದೆ ಆ ವಿಚಾರದಲ್ಲಿ ಇನ್ನಷ್ಟು ಸಾಹಿತಿಗಳು ಬರಬೇಕೆಂದು ಆಶಿಸಿದರು. ಇದೇ ಸಂದರ್ಭದಲ್ಲಿ 78 ರ ಹರೆಯದ ದೇಶದಲ್ಲಿ ನಮಗೊಂದು ಆಧಾರ ಸಿಕ್ಕಿದೆ ಎಂಬ ಕವಿತೆ ವಾಚನವನ್ನು ಪ್ರಸ್ತುತ ಪಡಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ ಗಾಯತ್ರಿ, ಡಿ.ಸಿ.ಪಿ.ಮುತ್ತುರಾಜ್, ದಸರಾ ಕವಿಗೋಷ್ಠಿ ಉಪ ಸಮಿತಿಯ ಕಾರ್ಯಾಧ್ಯಕ್ಷರಾದ ಎನ್.ಕೆ.ಲೋಲಾಕ್ಷಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎನ್ ಮಲ್ಲಿಕಾರ್ಜುನಸ್ವಾಮಿ ಹಾಗೂ ಕವಿಗೋಷ್ಠಿ ಸಮಿತಿಯ ಸದಸ್ಯರುಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

1 hour ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

2 hours ago

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

2 hours ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

3 hours ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

3 hours ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

3 hours ago