ನಮ್ಮ ಮೈಸೂರ ದಸರಾ 2024

ದಸರಾ ಜಂಬೂಸವಾರಿ ಹಾಗೂ ಟಾರ್ಚ್‌ ಲೈಟ್‌ ಶೋ ಟಿಕೆಟ್‌ಗೆ ಹೆಚ್ಚಿದ ಬೇಡಿಕೆ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ.

ಈ ಹಿನ್ನೆಲೆಯಲ್ಲಿ ವಿಜಯದಶಮಿ ದಿನದಂದು ಜರುಗಲಿರುವ ದಸರಾ ಜಂಬೂಸವಾರಿ ಮೆರವಣಿಯನ್ನು ನೋಡಲು ಜನರು ಕಾತುರದಿಂದ ಕಾಯುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಅಕ್ಟೋಬರ್.‌12ರಂದು ನಡೆಯುವ ಜಂಬೂಸವಾರಿ ಮೆರವಣಿಗೆಯನ್ನು ಹತ್ತಿರದಿಂದ ನೋಡಲು ಹಾಗೂ ಅಂದು ಸಂಜೆ ನಡೆಯುವ ಟಾರ್ಚ್‌ ಲೈಟ್‌ ಶೋ ನೋಡಲು ಜನರು ಇನ್ನೂ ಕೂಡ ಪಾಸ್‌ ಖರೀದಿ ಮಾಡುತ್ತಿದ್ದಾರೆ.

ಟಿಕೆಟ್‌ ಖರೀದಿಗೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ಕಚೇರಿಯ ಸ್ಪಂದನ ಕೇಂದ್ರದಲ್ಲಿ ಟಿಕೆಟ್‌ ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಈ ಬಗ್ಗೆ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಮಾಹಿತಿ ನೀಡಿದ್ದು, ಸರತಿ ಸಾಲಿನಲ್ಲಿ ನಿಂತು ಪಾಸ್‌ ಖರೀದಿ ಮಾಡಬಹುದು ಎಂದು ಮಾಹಿತಿ ನೀಡಿದ್ದಾರೆ.

ಕೆಂಡಗಣ್ಣಸ್ವಾಮಿ

ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಹಂಚೀಪುರ ಗ್ರಾಮದವನಾದ ನಾನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದಿದ್ದೇನೆ. ಪದವಿ ನಂತರದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ 5 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ನೈಸರ್ಗಿಕ ಕೃಷಿ ಹಾಗೂ ಪಶು ಸಂಗೋಪನೆಗೆ ಹೆಚ್ಚು ಒತ್ತು ಕೊಡುತ್ತೇನೆ.‌ ಪರಿಸರ ಸಂರಕ್ಷಣೆ ಜೊತೆ ಜೊತೆಗೆ ಪ್ರಾಣಿ ಪಕ್ಷಿಗಳ ಉಳಿವಿಗಾಗಿ ನಾನು ಶ್ರಮ ವಹಿಸುತ್ತಿದ್ದೇನೆ.‌ ನನ್ನ ಮೊಬೈಲ್‌ ಸಂಖ್ಯೆ: 9964859626, 9606570286

Recent Posts

ಕುಕ್ಕರಹಳ್ಳಿ ಕೆರೆ ಸ್ವಚ್ಛತೆಗೆ ಗೋವಾದಿಂದ ದೋಣಿ ಖರೀದಿ

ನುರಿತ ತಜ್ಞರ ತಂಡದಿಂದ ಕೆರೆ ಸ್ವಚ್ಛತೆ ಆರಂಭಿಸಲು ತಯಾರಿ ಮೈಸೂರು : ಪ್ರವಾಸಿಗರು ಹಾಗೂ ವಾಯುವಿಹಾರಿಗಳ ನೆಚ್ಚಿನ ತಾಣವಾದ ಕುಕ್ಕರಹಳ್ಳಿ…

8 mins ago

ಓದುಗರ ಪತ್ರ | ಸೂಚನಾ ಫಲಕಗಳನ್ನು ಸರಿಪಡಿಸಿ

ಮೈಸೂರು ನಗರದ ಪ್ರತಿಯೊಂದೂ ವಾರ್ಡ್‌ನ ಪ್ರತಿ ಮಾರ್ಗದಲ್ಲೂ ಮೈಸೂರು ಮಹಾ ನಗರ ಪಾಲಿಕೆಯಿಂದ ವಾರ್ಡ್ ಸಂಖ್ಯೆ, ವಾರ್ಡ್‌ನ್ನು ಪ್ರತಿನಿಧಿಸುವ ಪಾಲಿಕೆ…

11 mins ago

ಓದುಗರ ಪತ್ರ | ಕಸ ವಿಂಗಡಣೆ ಕ್ರಮ ಸ್ವಾಗತಾರ್ಹ

ಮೈಸೂರಿನ ಎಲ್ಲ ವಾರ್ಡ್‌ಗಳಲ್ಲೂ ಮಹಾನಗರ ಪಾಲಿಕೆಯಿಂದ ಕಸ ವಿಂಗಡಣೆಯನ್ನು ಮೂಲದಿಂದಲೇ ಅಂದರೆ ಮನೆಮನೆಗಳಲ್ಲೇ ಹಸಿ ಕಸ ಮತ್ತು ಒಣ ಕಸ…

15 mins ago

ಓದುಗರ ಪತ್ರ | ದ್ವೇಷ ಭಾಷಣ ಮಸೂದೆ: ಸ್ವಾಗತಾರ್ಹ

ರಾಜ್ಯಸರ್ಕಾರವು ವಿಧಾನಸಭೆಯಲ್ಲಿ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ (ತಡೆಗಟ್ಟುವಿಕೆ) ಮಸೂದೆ ೨೦೨೫’ ಅನ್ನು ಮಂಡಿಸಿದೆ. ಈ ಮಸೂದೆ…

17 mins ago

ಮೈ ಕೊರೆಯುವ ಚಳಿ ನಲುಗಿದ ಮೈಸೂರು

ಧನರ್ಮಾಸಕ್ಕೆ ಮೊದಲೇ ಚಳಿ ದಾಂಗುಡಿ ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್‌ ದಾಖಲು ಕೆ.ಬಿ.ರಮೇಶನಾಯಕ ಮೈಸೂರು : ಜಿಲ್ಲೆಯಲ್ಲಿ ಕಳೆದ…

24 mins ago

ಮಹಾಪಂಚ್ ಕಾರ್ಟೂನ್

ಮಹಾಪಂಚ್ ಕಾರ್ಟೂನ್ | ಡಿಸೆಂಬರ್ 13 ಶನಿವಾರ  

1 hour ago