ನಮ್ಮ ಮೈಸೂರ ದಸರಾ 2024

ಉತ್ತಮ ಮಳೆಯಾದ್ದರಿಂದ ರೈತರ ಬದುಕು ಹಸನಾಗಿದೆ: ಡಿಸಿಎಂ ಡಿ.ಕೆ.ಶಿವಕುಮಾರ್‌

ಮೈಸೂರು: ಈ ಬಾರಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರು ಹಾಗೂ ರೈತರ ಬದುಕು ಹಸನಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಈ ಬಗ್ಗೆ ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು, ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಎಲ್ಲಾ ಕಾರ್ಯಕ್ರಮಗಳ ಮೇಲೂ ಇರುತ್ತೆ ಎಂಬ ನಂಬಿಕೆಯಿದೆ. ಏನೇ ಸಮಸ್ಯೆ ಇದ್ದರೂ ನಮ್ಮ ಸರ್ಕಾರ ಜನಸಾಮಾನ್ಯರ ಪಾಲಿಗೆ ಬೆಳಕಾಗುತ್ತಿದೆ ಎಂದರು.

ಇನ್ನು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮೀ ಯೋಜನೆ ಬಗ್ಗೆ ಮಾತನಾಡಿ ಖುಷಿ ವ್ಯಕ್ತಪಡಿಸಿದ ಅವರು, ಮೊದಲಿಗೆ ತಾಯಿ ಚಾಮುಂಡೇಶ್ವರಿಗೆ ಯೋಜನೆಯ 2000 ರೂಪಾಯಿ ನೀಡಿ ಆಶೀರ್ವಾದ ಪಡೆದುಕೊಂಡೆವು. ಆ ಬಳಿಕ 5 ವರ್ಷದ ಹಣವನ್ನು ತಾಯಿಗೆ ನೀಡಿ, ಗ್ಯಾರಂಟಿ ಯೋಜನೆಗೆ ಯಾವುದೇ ಅಡ್ಡಿ ಆಗದಿರಲಿ ಎಂದು ಬೇಡಿಕೊಂಡೆವು ಎಂದು ಮಾಹಿತಿ ನೀಡಿದರು.

 

 

ಕೆಂಡಗಣ್ಣಸ್ವಾಮಿ

ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಹಂಚೀಪುರ ಗ್ರಾಮದವನಾದ ನಾನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದಿದ್ದೇನೆ. ಪದವಿ ನಂತರದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ 5 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ನೈಸರ್ಗಿಕ ಕೃಷಿ ಹಾಗೂ ಪಶು ಸಂಗೋಪನೆಗೆ ಹೆಚ್ಚು ಒತ್ತು ಕೊಡುತ್ತೇನೆ.‌ ಪರಿಸರ ಸಂರಕ್ಷಣೆ ಜೊತೆ ಜೊತೆಗೆ ಪ್ರಾಣಿ ಪಕ್ಷಿಗಳ ಉಳಿವಿಗಾಗಿ ನಾನು ಶ್ರಮ ವಹಿಸುತ್ತಿದ್ದೇನೆ.‌ ನನ್ನ ಮೊಬೈಲ್‌ ಸಂಖ್ಯೆ: 9964859626, 9606570286

Recent Posts

ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ? | ಹಾಲಿನ ದರ ಏರಿಕೆ ನಡುವೆ ಕಾಫಿ,ಟೀ ಬೆಲೆ ಹೆಚ್ಚುವ ಸಾಧ್ಯತೆ

ಬೆಂಗಳೂರು : ಹಾಲಿನ ದರ ಏರಿಕೆ ಕುರಿತು ರಾಜ್ಯದಲ್ಲಿ ಚರ್ಚೆ ತೀವ್ರಗೊಂಡಿರುವ ಬೆನ್ನಲ್ಲೇ ಬೆಂಗಳೂರಿನ ಹೋಟೆಲ್‌ಗಳಲ್ಲಿ ಕಾಫಿ, ಟೀ ಸೇರಿದಂತೆ…

6 hours ago

ಕೆಪಿಎಸ್‌ಸಿ ಅಕ್ರಮ | 1.52 ಕೋಟಿ ಹಣ ಪಾವತಿ ಪತ್ತೆ

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶುವೈದ್ಯಕೀಯ ವೈದ್ಯರ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮಗಳ ತನಿಖೆ ಮತ್ತಷ್ಟು ವಿಸ್ತರಿಸಿದ್ದು, ಪ್ರಶ್ನೆಪತ್ರಿಕೆ…

6 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧಿಯ ನೆರಳಿನಂತಿದ್ದ ಕಸ್ತೂರ ಬಾ

ಡಾ.ಪ್ರಮೀಳಾದೇವಿ ಬಿ.ಕೆ ಗಾಂಧೀಜಿಯ ನೆರಳಿ ನಂತಿದೂ ಅವರ ಚಿಂತನೆಗಳ, ಪ್ರಯೋಗ ಗಳನ್ನು ತಿದ್ದಿ ತೀಡಿದ ಪತ್ನಿ ಕಸ್ತೂರ ಬಾ. ಬಾಲ್ಯ…

7 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗೊಂದಲಗೊಳಿಸುತಿದ್ದ ಹಲವು ಸಂದೇಹಗಳು

ಬ್ಯಾರಿಸ್ಟರ್ ಎನ್ನಿಸಿಕೊಳ್ಳುವುದು ಸುಲಭವಾಗಿತ್ತು. ಆದರೆ ವಕೀಲಿ ವೃತ್ತಿಯನ್ನು ನಡೆಸುವುದು ಕಷ್ಟವಾಗಿತ್ತು. ನಾನು ಕಾನೂನುಗಳನ್ನೇನೋ ವ್ಯಾಸಂಗ ಮಾಡಿದ್ದೆ. ಅವುಗಳನ್ನು ಕಾರ್ಯ ರೂಪದಲ್ಲಿ…

8 hours ago

ಯುಪಿಯಲ್ಲಿ ತಯಾರಾಗುತ್ತಿರುವ ಬ್ರಹ್ಮೋಸ್‌ ಕ್ಷಿಪಣಿಗಳು ಪಾಕ್‌ ನಿದ್ದೆಗೆಡಿಸಿವೆ: ಅಮಿತ್‌ ಶಾ

ಲಕ್ನೋ: ಉತ್ತರ ಪ್ರದೇಶದಲ್ಲಿ ರಕ್ಷಣಾ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ದೊರೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.…

1 day ago

ಪ್ರಜಾಪ್ರಭುತ್ವ ರಕ್ಷಿಸಲು ಗಾಂಧಿ ಜಯಂತಿಯಂದು ಪ್ರತಿಜ್ಞೆ ಮಾಡೋಣ: ಅಭಿಜಿತ್‌ ದೀಪ್ಕೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಕಾಕ್ರೋಚ್ ಜನತಾ ಪಾರ್ಟಿ, ಅಂದರೆ ಸಿಜೆಪಿ ಆಗ್ರಹಿಸಿದೆ. ಸಿಜೆಪಿ…

1 day ago