ರಾತ್ರೋ ರಾತ್ರಿ ಮೈಸೂರು ಅರಮನೆ ಬಳಿಯ ಪಾರ್ಕ್‌ಗೆ ಬಂತು ವಿಷ್ಣು ಪ್ರತಿಮೆ: ತೆರವುಗೊಳಿಸಿದ್ದಕ್ಕೆ ಫ್ಯಾನ್ಸ್‌ ಆಕ್ರೋಶ

ಮೈಸೂರು: ಅರಮನೆ ಬಳಿಯ ಉದ್ಯಾನದಲ್ಲಿ ಅಭಿಮಾನಿಗಳು ರಾತ್ರೋ ರಾತ್ರಿ ಸ್ಥಾಪಿಸಿದ್ದ ನಟ ವಿಷ್ಣುವರ್ಧನ್‌ ಪ್ರತಿಮೆಯನ್ನು ತೆರವುಗೊಳಿಸಿದ ಪೊಲೀಸರ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ ಘಟನೆ ಶನಿವಾರ ನಡೆಯಿತು.

ಪಾಲಿಕೆ ಉದ್ಯಾನದಲ್ಲಿ ಅನುಮತಿ ಪಡೆಯದೇ ಅಭಿಮಾನಿಗಳು ವಿಷ್ಣು ಪ್ರತಿಮೆ ಸ್ಥಾಪಿಸಿದ್ದರು. ಅನಧಿಕೃತವಾಗಿ ಇರಿಸಿದ್ದ ಪ್ರತಿಮೆಯನ್ನು ಪೊಲೀಸರು ತೆರವುಗೊಳಿಸಿದರು. ಪ್ರತಿಮೆ ತೆರವುಗೊಳಿಸಿದ್ದಕ್ಕೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.

ಕಳೆದ ಹತ್ತು ವರ್ಷದಿಂದ ಅಲ್ಲಿ ಪ್ರತಿಮೆ ಸ್ಥಾಪನೆಗೆ ಅಭಿಮಾನಿಗಳು ಬೇಡಿಕೆ ಇಟ್ಟಿದ್ದರು. ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಅಭಿಮಾನಿಗಳೇ ಪ್ರತಿಮೆ ಮಾಡಿಸಿದ್ದರು.

× Chat with us