ಮೈಸೂರು ನಗರ

ಜಾತಿಗಣತಿಗೆ ನಮ್ಮ ತಕರಾರಿಲ್ಲ, ಅದು ವೈಜ್ಞಾನಿಕವಾಗಿ ಆಗಬೇಕು: ಸಂಸದ ಯದುವೀರ್‌ ಒಡೆಯರ್‌

ಮೈಸೂರು: ರಾಜ್ಯದಲ್ಲಿ ತೀವ್ರ ಚರ್ಚೆಯಲ್ಲಿರುವ ಜಾತಿಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು-ಕೊಡಗು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಪ್ರತಿಕ್ರಿಯೆ ನೀಡಿದ್ದು, ಜಾತಿಗಣತಿಗೆ ನಮ್ಮ ತಕರಾರಿಲ್ಲ. ಆದರೆ ಅದು ವೈಜ್ಞಾನಿಕವಾಗಿ ಆಗಬೇಕು ಎಂದು ಹೇಳಿದ್ದಾರೆ.

ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಗಣತಿ ಅವೈಜ್ಞಾನಿಕ ಎಂದು ಈಗಾಗಲೇ ಹೇಳಿದ್ದೇವೆ. ಜಾತಿಗಣತಿ ವೈಜ್ಞಾನಿಕವಾಗಿ ಆಗಬೇಕು. ಈ ಬಗ್ಗೆ ಸರ್ಕಾರ ಏನು ಮಾಡುತ್ತದೆ ನೋಡೋಣ. 10 ವರ್ಷದ ಹಿಂದಿನ ಗಣತಿಯನ್ನು ಈಗ ಬಿಡುಗಡೆ ಮಾಡಲು ಹೊರಟಿದ್ದಾರೆ. ಅದು ಸರಿಯಲ್ಲ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ. ಜಾತಿಗಣತಿಯನ್ನು ರಾಜಕೀಯವಾಗಿ ಎಲ್ಲರೂ ಬಳಕೆ ಮಾಡಿಕೊಳ್ಳುವುದು ಗೊತ್ತಿರುವ ವಿಚಾರ. ಆದರೆ ಸರಿಯಾದ ರೀತಿಯಲ್ಲಿ ಗಣತಿ ಆಗಬೇಕು ಎಂದರು.

ಇನ್ನು ವೀರಶೈವ ಲಿಂಗಾಯತ ಮಹಾಸಭಾದಿಂದ ಪ್ರತ್ಯೇಕ ಜಾತಿಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಸಂವಿಧಾನದಲ್ಲಿ ಸಮುದಾಯದ ಗಣತಿಗೆ ಅವಕಾಶ ಇದೆ. ಅದೇ ರೀತಿ ವೀರಶೈವ ಲಿಂಗಾಯತ ಮಹಾಸಭಾ ಜಾತಿಗಣತಿ ಮಾಡಲು ಮುಂದಾಗಿದೆ. ಇದಕ್ಕಾಗಿ ಸಂವಿಧಾನದಲ್ಲಿ ಅವಕಾಶ ಮಾಡಬಹುದು ಎಂದು ಅಭಿಪ್ರಾಯ ಪಟ್ಟರು.

ಆಂದೋಲನ ಡೆಸ್ಕ್

Recent Posts

‘40 ವರ್ಷದ ಗೆಳೆತನಕ್ಕೆ ಬಿರುಕು ಸಾಧ್ಯವೇ ಇಲ್ಲ’: ಸಂಸದ ಸುನಿಲ್‌ ಬೋಸ್‌

ಮೈಸೂರು: ಸಿದ್ದರಾಮಯ್ಯ ಮತ್ತು ಮಹದೇವಪ್ಪ ನಡುವೆ ಮುನಿಸು ಮೂಡಿದೆ ಎಂಬ ವರದಿಗಳಿಗೆ ಸಂಸದ ಸುನಿಲ್‌ ಬೋಸ್‌ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಇಬ್ಬರದ್ದು…

17 hours ago

ವಾಹನ ಸವಾರರಿಗೆ ಗುಡ್‌ ನ್ಯೂಸ್‌: ಇನ್ಮುಂದೆ ಪದೇ ಪದೇ ಮಾಲಿನ್ಯ ತಪಾಸಣೆ ಮಾಡಿಸಬೇಕಿಲ್ಲ

ನವದೆಹಲಿ: ನಿಮ್ಮ ಖಾಸಗಿ ಕಾರು ಅಥವಾ ಬೈಕ್‌ ಬಿಎಸ್‌-6 ಮಾದರಿಯದ್ದೇ? ಹಾಗಿದ್ದರೆ ಮಾಲಿನ್ಯ ತಪಾಸಣೆಯ ಅವಧಿಯಲ್ಲಿ ನಿಮಗೊಂದು ಸಿಹಿಸುದ್ದಿ ಇದೆ.…

17 hours ago

ಕರ್ನಾಟಕದಲ್ಲಿ ಇನ್ನೆರಡು ದಿನ ಚಳಿ ಹೆಚ್ಚುವ ಸಾಧ್ಯತೆ, ವಿಜಯಪುರದಲ್ಲಿ 12.9°C ದಾಖಲು

ಬೆಂಗಳೂರು: ಕರ್ನಾಟಕದಲ್ಲಿ ಇನ್ನೆರಡು ದಿನ ಚಳಿ ಹೆಚ್ಚಾಗುವ ಸಾಧ್ಯತೆಯಿದೆ. ನವೆಂಬರ್‌ 20ರ ಹವಾಮಾನ ವರದಿ ಪ್ರಕಾರ, ರಾಜ್ಯದ ಬಯಲು ಪ್ರದೇಶಗಳ ಪೈಕಿ…

17 hours ago

ಬಾಂಗ್ಲಾದೇಶದಲ್ಲಿ ಹಿಂಸಾಚಾರ: ಯೂನಸ್‌ ಮನೆಗೆ ಬೆಂಕಿ, ಘರ್ಷಣೆಗಳಲ್ಲಿ ನಾಲ್ವರು ಸಾವು

ಢಾಕಾ: ಬಾಂಗ್ಲಾದೇಶದಲ್ಲಿ ಮತ್ತೆ ರಾಜಕೀಯ ಉದ್ವಿಗ್ನತೆ ಭುಗಿಲೆದ್ದಿದೆ. ಅವಾಮಿ ಲೀಗ್‌ ಕರೆ ನೀಡಿದ್ದ ಪ್ರತಿಭಟನೆಗೂ ಮುನ್ನ ನಡೆದ ಘರ್ಷಣೆಗಳಲ್ಲಿ ನಾಲ್ವರು…

18 hours ago

ಒಡಿಶಾ ಕರಾವಳಿಗೆ ‘ಅಕ್ವಾನ್’ ಭೀತಿ: 1.2 ಲಕ್ಷಕ್ಕೂ ಹೆಚ್ಚು ಜನರ ಸ್ಥಳಾಂತರ, 69 ರೈಲು ರದ್ದು

ಒಡಿಶಾ: ‘ಅಕ್ವಾನ್’ ಚಂಡಮಾರುತದ ಹಿನ್ನೆಲೆಯಲ್ಲಿ ಒಡಿಶಾದಲ್ಲಿ 1 ಲಕ್ಷ 20 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಚಂಡಮಾರುತದ…

18 hours ago

ವ್ಯಕ್ತಿ ಮೇಲೆ ಕಾಡುಕೋಣ ದಾಳಿ : ಸಾವು

ಮಂಡ್ಯ : ಹಸು ಮೇಯಿಸಲು ಆರಣ್ಯದಂಚಿಗೆ ತೆರಳಿದ್ದ ವೃದ್ಧರೊಬ್ಬರ ಮೇಲೆ ಕಾಡುಕೋಣ ಏಕಾಏಕಿ ದಾಳಿ ನಡೆಸಿದ ಪರಿಣಾ ಮ ಅವರು…

18 hours ago