ಮೈಸೂರು ನಗರ

ಮಹಿಳೆಯರಿಗೆ ಶಿಕ್ಷಣ, ಉದ್ಯೋಗ ಖಾತರಿಪಡಿಸಬೇಕು : ಮಹಿಳೆ, ಮಕ್ಕಳ ಮೇಲಿನ ದೌರ್ಜನ್ಯ ವಿರೋಧಿಸಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ

ಮೈಸೂರು : ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ವಿರುದ್ಧ ನ.೨೫ರಿಂದ ೨೦೨೬ರ ಮಾ.೨೫ ರವರೆಗೆ ರಾಜ್ಯಾದ್ಯಂತ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಂಎಸ್‌ಎಸ್) ಜಿಲ್ಲಾ ಘಟಕದ ವತಿಯಿಂದ ನಡೆಯಲಿರುವ ಸಹಿ ಸಂಗ್ರಹ ಅಭಿಯಾನಕ್ಕೆ ನಗರದ ಚಿಕ್ಕ ಗಡಿಯಾರದ ಬಳಿ ಚಾಲನೆ ನೀಡಲಾಯಿತು.

ಆಂದೋಲನ ಪತ್ರಕ್ಕೆ ಸಹಿ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧ್ಯಕ್ಷೆ ನಳಿನ, ಹೆಣ್ಣು ಮಕ್ಕಳ ಮತ್ತು ಮಹಿಳೆಯರ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಸಮೂಹ ಮಾಧ್ಯಮಗಳಲ್ಲಿ ಅಶ್ಲೀಲತೆ ಮತ್ತು ಕ್ರೌರ್ಯತೆಯನ್ನು ನಿಷೇಧ ಮಾಡಬೇಕು. ಮಹಿಳೆಯರಿಗೆ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗವನ್ನು ಖಾತರಿಪಡಿಸಬೇಕು. ಈ ಬೇಡಿಕೆಗಳನ್ನು ಈಡೇರುವವರೆಗೂ ಮಹಿಳೆಯರು, ಜನಸಾಮಾನ್ಯರು ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು ಎಂದರು.

ಇದನ್ನೂ ಓದಿ:-ಬೆಂಗಳೂಲ್ಲಿ 300 ಎಕರೆ ಜಮೀನು ಖರೀದಿಸಿದ್ದ ಧರ್ಮೆಂದ್ರ

ಜಿಲ್ಲಾ ಉಪಾಧ್ಯಕ್ಷೆ ಜಿ.ಎಸ್.ಸೀಮಾ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮಹಿಳೆಯರ ಕುರಿತು ಯಾವುದೇ ಕಾಳಜಿ ಇಲ್ಲ. ಇತ್ತೀಚೆಗೆ ಪತ್ರಿಕೆಗಳಲ್ಲಿ ವರದಿಯಾದಂತೆ ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ ೮೦ ಸಾವಿರ ಬಾಲ ಗರ್ಭಿಣಿಯರು ಕಂಡು ಬಂದಿರುವುದು, ಹೆಣ್ಣು ಭ್ರೂಣ ಹತ್ಯೆ, ಹೆಣ್ಣು ಮಕ್ಕಳ ಅಸಹಜ ಸಾವುಗಳು, ಹೆಣ್ಣು ಮಕ್ಕಳ ಕಳ್ಳ ಸಾಗಾಣಿಕೆ , ಅಶ್ಲೀಲ ಸಿನಿಮಾ -ಸಾಹಿತ್ಯಗಳಿಗೆ ಕಡಿವಾಣ ಹಾಕದೆ ಇರುವುದು, ಮದ್ಯದ ಅಂಗಡಿಗಳನ್ನು ನಿಷೇಽಸುವ ಬದಲು, ಪರವಾನಗಿಯನ್ನು ಕೊಡುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯ ರಂಗಕರ್ಮಿ ಪ್ರಸನ್ನ, ಹಿರಿಯ ರಂಗಕಲಾವಿದೆ ರಾಮೇಶ್ವರಿ ವರ್ಮ, ವಿಶ್ರಾಂತ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ, ಲೇಖಕಿ ಸುನಂದಮ್ಮ ಅವರನ್ನು ನಿಯೋಗವೊಂದು ಭೇಟಿ ಮಾಡಿದ್ದು, ಪತ್ರಕ್ಕೆ ಸಹಿ ಹಾಕುವುದರ ಮೂಲಕ ಈ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಕಚೇರಿ ಕಾರ್ಯದರ್ಶಿ ಉ.ಪುಷ್ಪ, ಜಿಲ್ಲಾ ಕಾರ್ಯದರ್ಶಿಗಳಾದ ಆಸಿಯಾ ಬೇಗಂ, ಸದಸ್ಯರಾದ ಸಿಂಧು ಗೌರಿ, ಪದ್ಮ, ಗಾಯತ್ರಿ, ತುಳಸಿ , ಸುಮಾ, ಇನ್ನಿತರರು ಹಾಜರಿದ್ದರು.

ಆಂದೋಲನ ಡೆಸ್ಕ್

Recent Posts

ಬಿಹಾರದ ನಳಂದಾ ದೇಗುಲದಲ್ಲಿ ಕಾಲ್ತುಳಿತ: 8 ಮಂದಿ ಸಾವು

ನಳಂದಾ: ಬಿಹಾರದ ನಳಂದಾ ಜಿಲ್ಲೆಯ ಶೀತಲಾ ದೇವಸ್ಥಾನದ ಧಾರ್ಮಿಕ ಸಮಾರಂಭವೊಂದರಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಎಂಟು ಮಂದಿ ಮಹಿಳೆಯರು ಸಾವನ್ನಪ್ಪಿದ್ದಾರೆ.…

2 mins ago

ಕೌಟುಂಬಿಕ ಕಲಹ: ಬೆಂಗಳೂರಿನಲ್ಲಿ ಟೆಕ್ಕಿ ದಂಪತಿ ಆತ್ಮಹತ್ಯೆ

ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಟೆಕ್ಕಿ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊತ್ತನೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ…

22 mins ago

ಉಜ್ವಲ ಹೋಯ್ತು, ಈಗ ಸೌದೆ ಯೋಜನೆ ಸ್ಟಾರ್ಟ್‌: ಡಿಸಿಎಂ ಡಿ.ಕೆ.ಶಿವಕುಮಾರ್‌ ವಾಗ್ದಾಳಿ

ಬೆಂಗಳೂರು: ಸೌದೆ ಮುಕ್ತ ಭಾರತ ಮಾಡ್ತೀವಿ ಎಂದು ಹೇಳಿ ಎಲ್ಲಾ ಕಡೆ ಗ್ಯಾಸ್‌ ತಂದರು. ಹಳ್ಳಿಗಳಲ್ಲೂ ಗ್ಯಾಸ್‌ ಬಂತು. ಈಗ…

52 mins ago

ಇರಾನ್‌ನ ಇಸ್ಫಹಾನ್‌ನಲ್ಲಿ ಸರಣಿ ಸ್ಫೋಟ

ಟೆಹರಾನ್:‌ ಇರಾನ್‌ ಮೇಲೆ ಅಮೇರಿಕಾ ಹಾಗೂ ಇಸ್ರೇಲ್‌ ತನ್ನ ಪ್ರತೀಕಾರ ಮುಂದುವರಿಸಿದೆ. ಇರಾನ್‌ನ ಇಸ್ಪಹಾನ್‌ ನಗರದಲ್ಲಿರುವ ಮಿಲಿಟರಿ ಕೇಂದ್ರದ ಮೇಲೆ…

1 hour ago

ಓದುಗರ ಪತ್ರ: ಟೋಲ್ ದರ ಹೆಚ್ಚಳ ಗಾಯದ ಮೇಲೆ ಬರೆ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಏಪ್ರಿಲ್‌ನಿಂದ ಅನ್ವಯವಾಗುವಂತೆ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ದರವನ್ನು ೩೦೦೦ ರೂ.ನಿಂದ ೩೦೭೫ ರೂ. ಗೆ ಏರಿಸಿರುವುದು…

2 hours ago

ಓದುಗರ ಪತ್ರ: ಐಪಿಎಲ್ ಟಿಕೆಟ್‌ಗೆ ಗೋಗರೆಯುತ್ತಿರುವ ಶಾಸಕರು

ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್ ಪಂದ್ಯಕ್ಕೆ ಟಿಕೆಟ್ ಕೊಡಿಸಿ ಎಂದು ಎಲ್ಲಾ ಪಕ್ಷಗಳ ಕೆಲವು ಶಾಸಕರು…

2 hours ago