ಮೈಸೂರು ನಗರ

ಬುರುಡೆ ಪ್ರಕರಣ ಷಡ್ಯಂತರ ಎನ್ನಲು ನಾನ್ಯಾರು?: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಪ್ರಶ್ನೆ

ಮೈಸೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಕ್‌ಮ್ಯಾನ್‌ ಚಿನ್ನಯ್ಯನನ್ನು ಎಸ್‌ಐಟಿ ಬಂಧಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಕಾನೂನು ಸಲಹೆಗಾರ ಹಾಗೂ ಶಾಸಕ ಪೊನ್ನಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ವಿಚಾರದಲ್ಲಿ ಪಾರದರ್ಶಕ ತನಿಖೆ ಆಗಬೇಕು ಎಂಬುದನ್ನು ನಾವು ಹೇಳಿದ್ದೇವೆ.
ಯಾರೇ ತಪ್ಪಿತಸ್ಥರಿದ್ದರೂ ಗುರುತಿಸಿ ಶಿಕ್ಷಿಸುವ ಕೆಲಸವನ್ನು ಸರ್ಕಾರ ಮಾಡಲಿದೆ. ರಾಜಕೀಯಕ್ಕಾಗಿ ಆರೋಪಿ ಮಾಡಿ ಇಂತಹ ಪ್ರಯತ್ನ ಮಾಡಿರೋದು ಸರಿಯಲ್ಲ. ಧರ್ಮಸ್ಥಳದ ಪಾವಿತ್ರ್ಯತೆ ಕಾಪಾಡಿ ತನಿಖೆ ಆಗಬೇಕು ಎಂದು ಸರ್ಕಾರ ಹೇಳಿದೆ. ಆದರೆ ತನಿಖೆಯೇ ಆಗಬಾರದು ಎನ್ನಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು.

ಇನ್ನು ಯಾರೋ ಒಬ್ಬ ನ್ಯಾಯಾಧೀಶರ ವಿರುದ್ಧ 164 ಹೇಳಿಕೆ ದಾಖಲಿಸಿದ್ದ. ಪೊಲೀಸರು ತನಿಖೆ ಮಾಡಿ ಬೇರೆ ಬೇರೆ ಅಂಶಗಳು ಇಂದು ಹೊರ ಬಂದಿರುವ ಸಾಧ್ಯತೆ ಇದೆ. ದೂರು ಕೊಟ್ಟವರಿಗೂ ಜವಾಬ್ದಾರಿ ಇದೆ. ಸುಳ್ಳು ದೂರು ಕೊಟ್ಟು, ಇಂತಹ ವಾತಾವರಣ ಸೃಷ್ಟಿ ಮಾಡಿದ್ದರೆ ಅದು ಅಪರಾಧ. ಅದಕ್ಕಾಗಿ ದೂರುದಾರನನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಇನ್ನು ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಯಿಂದಲೇ ಸತ್ಯ ಹೊರ ಬರಲು ಸಾಧ್ಯ ಆಗಿದೆ. ತಪ್ಪಿತಸ್ಥರು ಯಾರೆಂದು ಗುರುತಿಸಲು ಯಾರಿಂದಲೂ ಸಾಧ್ಯವಿಲ್ಲ. ತನಿಖೆಯಿಂದಲೇ ಅದೆಲ್ಲವೂ ಬೆಳಕಿಗೆ ಬರಬೇಕು. ದೂರುದಾರರೂ ತಪ್ಪಿತಸ್ಥರಾಗಿರಬಹುದು ಎಂದು ಇಂದು ಗೊತ್ತಾಗುತ್ತಿದೆ. ಎಸ್‌ಐಟಿ ಪೂರ್ಣವಾದ ಶ್ರಮ ವಹಿಸಿ ತನಿಖೆ ಮಾಡಿದೆ. ಯಾರೇ ತಪಿತಸ್ಥರಿದ್ದರೂ ಗುರುತಿಸುವ ಕೆಲಸ ಇಂದು ಆಗಿದೆ.

ಷಡ್ಯಂತರ ಯಾರು ಮಾಡಿದ್ದಾರೆ ಅದು ಹೊರಗೆ ಬರಲಿ. ಬಿಜೆಪಿಯವರಿಗೆ ಯಾಕೆ ಭಯ. ನಾವೆಲ್ಲ ಧರ್ಮಸ್ಥಳ ಭಕ್ತರಲ್ಲವಾ. ರಾಜಕಾರಣ ಮಾಡಲು ಇವರು ಧರ್ಮಸ್ಥಳಕ್ಕೆ ಹೋಗಿದ್ದಾರೆ. ಎಸ್‌ಐಟಿಯನ್ನ ಹೆಗಡೆಯವರೇ ಸ್ವಾಗತ ಮಾಡಿದ್ದಾರೆ. ಇದರಲ್ಲಿ ಬಿಜೆಪಿ ಯಾಕೆ ಕಡ್ಡಿ ಆಡಿಸುವ ಕೆಲಸ ಮಾಡುತ್ತಿದೆ.

ಧರ್ಮಸ್ಥಳ ಕಾರಣಕ್ಕೆ ಮಾಧ್ಯಮದವರಿಗೆ ಇಷ್ಟೊಂದು ಕಾಳಜಿ ಇರಬಹುದು. ಪೊಲೀಸರ ವಿಚಾರದಲ್ಲಿ ದೂರು ಎಂಬುದು ದೂರೆ. ಪ್ರಕರಣದ ಹಿಂದೆ ಯಾರ್ಯಾರಿದ್ದಾರೆ ಎಂಬುದು ಹೊರ ಬರುತ್ತೆ. ಧಾರ್ಮಿಕ ಭಾವನೆ ಕೆರಳಿಸಿ ರಾಜಕಾರಣ ಮಾಡುವಂತಹದು ಒಂದೇ ಗುಂಪು. ಇತಿಹಾಸದಲ್ಲಿ ಇಂತಹ ಪ್ರಕರಣಗಳ ಹಿಂದೆ ಯಾರಿದ್ದಾರೆ ಎಂಬುದು ಬಂದಿದೆ.

ಇದರಲ್ಲೂ ಸತ್ಯಾಂಶ ಹೊರ ಬರುತ್ತದೆ. ಬುರುಡೆ ಪ್ರಕರಣ ಷಡ್ಯಂತರ ಎನ್ನಲು ನಾನ್ಯಾರು? ಎಂದು ಪ್ರಶ್ನೆ ಮಾಡಿದರು.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ಕ್ಷೇತ್ರಕ್ಕೆ ಕಪ್ಪು ಚುಕ್ಕೆ ತರುವ ಕೆಲಸ ಯಾರು ಮಾಡಿದ್ದಾರೆ. ಸುಳ್ಳು ದೂರು ಕೊಟ್ಟು, ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸ ಮಾಡಿರುವವರ ಮೇಲೆಲ್ಲಾ ಕ್ರಮ ಆಗುತ್ತೆ. ಸುಜಾತ ಭಟ್ ವಶಕ್ಕೆ ಪಡೆಯುವ ವಿಚಾರ ಪೊಲೀಸರಿಗೆ ಬಿಟ್ಟಿದ್ದು. ಕಾನೂನುಬದ್ಧವಾಗಿ ಪೊಲೀಸರು ಕೆಲಸ ಮಾಡಬೇಕು. ಯಾವುದೋ ಒಂದು ಗುಂಪಿನ ಕೈವಾಡ ಇದೆ ಎಂಬುದು ಕಾಣುತ್ತಿದೆ‌. ಇದೆಲ್ಲವನ್ನೂ ತನಿಖೆ ಸಂಸ್ಥೆಗೆ ಬಿಡುವುದು ಒಳ್ಳೆಯದು ಎಂದು ಅಭಿಪ್ರಾಯ ಪಟ್ಟರು.

ಆಂದೋಲನ ಡೆಸ್ಕ್

Recent Posts

ಭಾನುವಾರವಾದರೂ ತಪ್ಪಿಸುವಂತಿಲ್ಲ: ನವೆಂಬರ್‌.1ರಂದು ಶಾಲೆಗಳಲ್ಲಿ ರಾಜ್ಯೋತ್ಸವ ಕಡ್ಡಾಯ

ಬೆಂಗಳೂರು: ನವೆಂಬರ್‌ 1ರಂದು ಭಾನುವಾರ ಬಂದರೂ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಕಡ್ಡಾಯ ಎಂದು ರಾಜ್ಯ ಸರ್ಕಾರ…

5 hours ago

ಗುಂಡ್ಲುಪೇಟೆ: ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ

ಗುಂಡ್ಲುಪೇಟೆ: ತಾಲ್ಲೂಕಿನ ವಡಯ್ಯನಪುರ ಹಾಗೂ ಬೊಮ್ಮಲಾಪುರ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಕೊನೆಗೂ ಬೋನಿಗೆ ಬಿದ್ದಿದೆ. ಬೊಮ್ಮಲಾಪುರ…

5 hours ago

ದನ ಮೇಯಿಸಲು ಹೋದ ವ್ಯಕ್ತಿ ಮೇಲೆ ಚಿರತೆ ದಾಳಿ

ಹನೂರು: ತಾಲ್ಲೂಕಿನ ಗುಂಡಾಪುರ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ದನ-ಕುರಿ ಮೇಯಿಸಲು ಹೋಗಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ ನಡೆಸಿರುವ…

6 hours ago

ಮೈಸೂರು: ಬಾಲಕಿ ಮೇಲಿನ ಅತ್ಯಾಚಾರ–ಕೊಲೆ ಪ್ರಕರಣ: ಕಾಮುಕನಿಗೆ ಗಲ್ಲು ಶಿಕ್ಷೆ

ಮೈಸೂರು: ಮೈಸೂರಿನಲ್ಲಿ ಕಳೆದ ವರ್ಷದ ದಸರಾ ವೇಳೆ ನಡೆದಿದ್ದ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ತೀರ್ಪು…

7 hours ago

ಸಯ್ಯಾಜಿರಾವ್ ರಸ್ತೆಯಲ್ಲಿ ಕುಸಿದು ಬಿದ್ದ ಬೃಹತ್ ವಿದ್ಯುತ್ ದೀಪಾಲಂಕಾರದ ಕಂಬ ; ಕಾರು, ಆಟೋ ಜಖಂ

ಮೈಸೂರು: ದಸರಾ ದೀಪಾಲಂಕಾರದ ನಡುವೆ ಅವಘಡವೊಂದು ಸಂಭವಿಸಿದೆ. ನಗರದ ಸಯ್ಯಾಜಿರಾವ್ ರಸ್ತೆಯಲ್ಲಿ ಬೃಹತ್ ವಿದ್ಯುತ್ ದೀಪಾಲಂಕಾರದ ಕಂಬ ಕುಸಿದು ಬಿದ್ದಿದ್ದು,…

7 hours ago

ಓದುಗರ ಪತ್ರ: ನಿಷ್ಪಕ್ಷಪಾತ ತನಿಖೆ ನಡೆಯಲಿ

ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದುಮಾಡುತ್ತಿರುವ ಸ್ಟ್ರಿಂಗ್ ಆಪರೇಷನ್ ಸುದ್ದಿ, ಅದರ ಸುತ್ತ ನಡೆಯುವ ಆರೋಪ-ಪ್ರತ್ಯಾರೋಪಗಳು ಹಾಗೂ ಸಿಡಿ/ಪೆನ್ ಡ್ರೈವ್‌ಗಳ ವಿಚಾರ…

10 hours ago