ponnanna (1)
ಮೈಸೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಕ್‌ಮ್ಯಾನ್ ಚಿನ್ನಯ್ಯನನ್ನು ಎಸ್‌ಐಟಿ ಬಂಧಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಕಾನೂನು ಸಲಹೆಗಾರ ಹಾಗೂ ಶಾಸಕ ಪೊನ್ನಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ವಿಚಾರದಲ್ಲಿ ಪಾರದರ್ಶಕ ತನಿಖೆ ಆಗಬೇಕು ಎಂಬುದನ್ನು ನಾವು ಹೇಳಿದ್ದೇವೆ.
ಯಾರೇ ತಪ್ಪಿತಸ್ಥರಿದ್ದರೂ ಗುರುತಿಸಿ ಶಿಕ್ಷಿಸುವ ಕೆಲಸವನ್ನು ಸರ್ಕಾರ ಮಾಡಲಿದೆ. ರಾಜಕೀಯಕ್ಕಾಗಿ ಆರೋಪಿ ಮಾಡಿ ಇಂತಹ ಪ್ರಯತ್ನ ಮಾಡಿರೋದು ಸರಿಯಲ್ಲ. ಧರ್ಮಸ್ಥಳದ ಪಾವಿತ್ರ್ಯತೆ ಕಾಪಾಡಿ ತನಿಖೆ ಆಗಬೇಕು ಎಂದು ಸರ್ಕಾರ ಹೇಳಿದೆ. ಆದರೆ ತನಿಖೆಯೇ ಆಗಬಾರದು ಎನ್ನಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು.
ಇನ್ನು ಯಾರೋ ಒಬ್ಬ ನ್ಯಾಯಾಧೀಶರ ವಿರುದ್ಧ 164 ಹೇಳಿಕೆ ದಾಖಲಿಸಿದ್ದ. ಪೊಲೀಸರು ತನಿಖೆ ಮಾಡಿ ಬೇರೆ ಬೇರೆ ಅಂಶಗಳು ಇಂದು ಹೊರ ಬಂದಿರುವ ಸಾಧ್ಯತೆ ಇದೆ. ದೂರು ಕೊಟ್ಟವರಿಗೂ ಜವಾಬ್ದಾರಿ ಇದೆ. ಸುಳ್ಳು ದೂರು ಕೊಟ್ಟು, ಇಂತಹ ವಾತಾವರಣ ಸೃಷ್ಟಿ ಮಾಡಿದ್ದರೆ ಅದು ಅಪರಾಧ. ಅದಕ್ಕಾಗಿ ದೂರುದಾರನನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಇನ್ನು ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಯಿಂದಲೇ ಸತ್ಯ ಹೊರ ಬರಲು ಸಾಧ್ಯ ಆಗಿದೆ. ತಪ್ಪಿತಸ್ಥರು ಯಾರೆಂದು ಗುರುತಿಸಲು ಯಾರಿಂದಲೂ ಸಾಧ್ಯವಿಲ್ಲ. ತನಿಖೆಯಿಂದಲೇ ಅದೆಲ್ಲವೂ ಬೆಳಕಿಗೆ ಬರಬೇಕು. ದೂರುದಾರರೂ ತಪ್ಪಿತಸ್ಥರಾಗಿರಬಹುದು ಎಂದು ಇಂದು ಗೊತ್ತಾಗುತ್ತಿದೆ. ಎಸ್‌ಐಟಿ ಪೂರ್ಣವಾದ ಶ್ರಮ ವಹಿಸಿ ತನಿಖೆ ಮಾಡಿದೆ. ಯಾರೇ ತಪಿತಸ್ಥರಿದ್ದರೂ ಗುರುತಿಸುವ ಕೆಲಸ ಇಂದು ಆಗಿದೆ.
ಷಡ್ಯಂತರ ಯಾರು ಮಾಡಿದ್ದಾರೆ ಅದು ಹೊರಗೆ ಬರಲಿ. ಬಿಜೆಪಿಯವರಿಗೆ ಯಾಕೆ ಭಯ. ನಾವೆಲ್ಲ ಧರ್ಮಸ್ಥಳ ಭಕ್ತರಲ್ಲವಾ. ರಾಜಕಾರಣ ಮಾಡಲು ಇವರು ಧರ್ಮಸ್ಥಳಕ್ಕೆ ಹೋಗಿದ್ದಾರೆ. ಎಸ್‌ಐಟಿಯನ್ನ ಹೆಗಡೆಯವರೇ ಸ್ವಾಗತ ಮಾಡಿದ್ದಾರೆ. ಇದರಲ್ಲಿ ಬಿಜೆಪಿ ಯಾಕೆ ಕಡ್ಡಿ ಆಡಿಸುವ ಕೆಲಸ ಮಾಡುತ್ತಿದೆ.
ಧರ್ಮಸ್ಥಳ ಕಾರಣಕ್ಕೆ ಮಾಧ್ಯಮದವರಿಗೆ ಇಷ್ಟೊಂದು ಕಾಳಜಿ ಇರಬಹುದು. ಪೊಲೀಸರ ವಿಚಾರದಲ್ಲಿ ದೂರು ಎಂಬುದು ದೂರೆ. ಪ್ರಕರಣದ ಹಿಂದೆ ಯಾರ್ಯಾರಿದ್ದಾರೆ ಎಂಬುದು ಹೊರ ಬರುತ್ತೆ. ಧಾರ್ಮಿಕ ಭಾವನೆ ಕೆರಳಿಸಿ ರಾಜಕಾರಣ ಮಾಡುವಂತಹದು ಒಂದೇ ಗುಂಪು. ಇತಿಹಾಸದಲ್ಲಿ ಇಂತಹ ಪ್ರಕರಣಗಳ ಹಿಂದೆ ಯಾರಿದ್ದಾರೆ ಎಂಬುದು ಬಂದಿದೆ.
ಇದರಲ್ಲೂ ಸತ್ಯಾಂಶ ಹೊರ ಬರುತ್ತದೆ. ಬುರುಡೆ ಪ್ರಕರಣ ಷಡ್ಯಂತರ ಎನ್ನಲು ನಾನ್ಯಾರು? ಎಂದು ಪ್ರಶ್ನೆ ಮಾಡಿದರು.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ಕ್ಷೇತ್ರಕ್ಕೆ ಕಪ್ಪು ಚುಕ್ಕೆ ತರುವ ಕೆಲಸ ಯಾರು ಮಾಡಿದ್ದಾರೆ. ಸುಳ್ಳು ದೂರು ಕೊಟ್ಟು, ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸ ಮಾಡಿರುವವರ ಮೇಲೆಲ್ಲಾ ಕ್ರಮ ಆಗುತ್ತೆ. ಸುಜಾತ ಭಟ್ ವಶಕ್ಕೆ ಪಡೆಯುವ ವಿಚಾರ ಪೊಲೀಸರಿಗೆ ಬಿಟ್ಟಿದ್ದು. ಕಾನೂನುಬದ್ಧವಾಗಿ ಪೊಲೀಸರು ಕೆಲಸ ಮಾಡಬೇಕು. ಯಾವುದೋ ಒಂದು ಗುಂಪಿನ ಕೈವಾಡ ಇದೆ ಎಂಬುದು ಕಾಣುತ್ತಿದೆ. ಇದೆಲ್ಲವನ್ನೂ ತನಿಖೆ ಸಂಸ್ಥೆಗೆ ಬಿಡುವುದು ಒಳ್ಳೆಯದು ಎಂದು ಅಭಿಪ್ರಾಯ ಪಟ್ಟರು.
ದಕ್ಷಿಣ ಕನ್ನಡ: ದಕ್ಷಿಣ ಭಾರತದ ನಾಗರಾಧನೆಯ ಹೆಸರಾಂತ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣು ದೇವಸ್ಥಾನದ ಆದಾಯ 2025ರ ನವೆಂಬರ್ ಹಾಗೂ…
ಬೆಂಗಳೂರು: ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಹಾಗೂ ದ್ವೇಷ ರಾಜಕಾರಣ ಮಾಡಲು ಸದನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ರಾಜ್ಯ…
ಜಾರ್ಖಂಡ್: ಜಾರ್ಖಂಡ್‌ನ ಸಾರಂಡಾ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಹಾಗೂ ಮಾವೋವಾದಿಗಳ ನಡುವಿನ ಗುಂಡಿನ ಚಕಮಕಿಯಲ್ಲಿ 10 ಮಂದಿ ನಕ್ಸಲರು…
ಮೈಸೂರು: ಚಾಮುಂಡಿ ಬೆಟ್ಟದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ತೋಡಿಕೆ ಮತ್ತು ನಿರ್ಮಾಣ ಕಾರ್ಯಗಳ ವಿರುದ್ಧ ಮೈಸೂರಿನ ಹಲವು ನಾಯಕರು, ಚಿಂತಿತ ನಾಗರಿಕರು…
ಬೆಂಗಳೂರು: ಇಂದು ಕರಾಳ ದಿನ. ಕರಾಳ ರೀತಿಯಲ್ಲಿ ಈ ಅಧಿವೇಶನವನ್ನು ಕಾಂಗ್ರೆಸ್ ನಡೆಸಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.…
ಬೆಂಗಳೂರು: ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ಹಾಗೂ ಸದನದಲ್ಲಿ ಚರ್ಚಿಸಬಹುದಾದ ವಿಷಯಗಳಿಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಲು ಜನವರಿ.28ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ…