ಮೈಸೂರು ನಗರ

ಸಾಗರದಾಜೆಗೊ ಸಂಸ್ಕೃತಿ ಪಸರಿಸಿದ್ದೇ ವಿವೇಕಾನಂದರು : ಪೇಜಾವರಿ ಶ್ರೀ

ಮೈಸೂರು : ಸ್ವಾಮಿ ವಿವೇಕಾನಂದರು ಭಾರತೀಯ ಸಂಸ್ಕೃತಿಯ ಚಿಂತನೆಯನ್ನು ಸಾಗರದಾಜೆಗೂ ತಲುಪಿಸಿ ದರು ಎಂದು ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.

ಶ್ರೀ ರಾಮಕೃಷ್ಣ ಆಶ್ರಮದ ಶತಮಾನೋತ್ಸವದ ಅಂಗವಾಗಿ ಆಶ್ರಮದ ಆವರಣದಲ್ಲಿ ಶುಕ್ರವಾರ 300 ಪೌರಕಾರ್ಮಿಕರಿಗೆ ನಾರಾಯಣ ಪೂಜೆ ಸಲ್ಲಿಸುವ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತದ ಸಂಸ್ಕೃತಿ, ಸಂಸ್ಕಾರ ಹಾಗೂ ಚಿಂತನೆಗಳನ್ನು ವಿದೇಶಿ ನೆಲದಲ್ಲೂ ವಿವೇಕಾನಂದರು ಬಿತ್ತರಿಸಿದರು. ‘ವಸುದೈ ವ ಕುಟುಂಬಕಂ’ ಎನ್ನುವುದು ಭಾರತೀಯರ ಮಂತ್ರ. ಭೂಮಿ ಮೇಲಿನ ಎಲ್ಲರೂ ನಮ್ಮವರು ಎಂಬುದೇ ನಮ್ಮ ಸಂಸ್ಕೃತಿ. ಇಂತಹ ಭಾರತೀಯ ಉದಾರತೆ ಮನೋಭಾವವನ್ನೇ ವಿವೇಕಾನಂದರು ವಿದೇಶಿಗರಿಗೆ ತೋರಿಸಿಕೊಟ್ಟರು ಎಂದು ಹೇಳಿದರು.

ನಿತ್ಯ ನಮ್ಮ ಕಾರ್ಯದಲ್ಲಿ ವಿಜಯ ಸಂಪಾದನೆಗೆ ಭಗವದ್ಗೀತೆಯ ‘ಯತ್ರ ಯೋಗೇಶ್ವರ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ’ ಮುಖ್ಯ. ಅಂದರೆ ಕೃಷ್ಣ ಮತ್ತು ಪಾರ್ಥ ಇಬ್ಬರೂ ನಮಗೆ ಬೇಕು. ಭಗವಂತನ ಪೂಜಿಸುವ ನಾವೆಲ್ಲರೂ ಆಸ್ತಿಕರು. ಹಾಗಾಗಿ ನಾವು ಮಾಡುವ ಎಲ್ಲ ಕಾರ್ಯಗಳಲ್ಲೂ ದೇವರ ಅನುಗ್ರಹ ವಿದ್ದರೆ ಮಾತ್ರ ಯಶಸ್ಸು ಸಿಗುತ್ತದೆ ಎಂದು ನಂಬಿದವರು ನಾವು ಎಂದು ಹೇಳಿದರು.

ಇದನ್ನೂ ಓದಿ:-ಅಮಿತ್‌ ಶಾ ಭೇಟಿಯಾದ ರಾಜಣ್ಣ ಪುತ್ರ

ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ರಾಮಕೃಷ್ಣ ಆಶ್ರಮ ಶತಮಾನದ ತನ್ನ ನಡಿಗೆಯಲ್ಲಿ ಸಾವಿರಾರು ಮಕ್ಕಳ ಬಾಳಲ್ಲಿ ವಿದ್ಯಾಬೆಳಕು ಹರಿಸಿದ ಮಹೋನ್ನತ ಸೇವಾ ಕೇಂದ್ರವಾಗಿದೆ. ಪರಿಸರ ಸಂರಕ್ಷಣೆ, ಮುಕ್ತ ಶಿಕ್ಷಣ, ವಯಸ್ಕರ ಶಿಕ್ಷಣ, ಜೈಲು ಕೈದಿಗಳಿಗೆ ಮೌಲ್ಯಯುತ ಶಿಕ್ಷಣ, ಗ್ರಾಮೀಣಾಭಿವೃದ್ಧಿಯಂತಹ ಹಲವು ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ನಾಡಿನ ಹೆಮ್ಮೆ ಎಂದು ತಿಳಿಸಿದರು.

ಮೈಸೂರಿನ ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ಮುಕ್ತಿದಾನಂದ ಮಾತನಾಡಿ, ಮೈಸೂರಿನ ಸ್ವಚ್ಛತೆ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ದೊಡ್ಡದು. ಪೌರಕಾರ್ಮಿಕರು ತಮ್ಮ ಕಾಯಕದ ಮೂಲಕ ಭಗ ವಂತನಿಗೆ ಪುಷ್ಪ ಸಮರ್ಪಿಸುತ್ತಿದ್ದಾರೆ. ಎಲ್ಲರನ್ನೂ ದೇವರು ಎಂದು ಪೂಜಿಸುವ ಭಾವವನ್ನು ಸ್ವಾಮಿ ವಿವೇಕಾನಂದರು, ಶಾರದಾ ಮಾತೆ ತಿಳಿಸಿದ್ದಾರೆ. ಆದರ್ಶ ಸಮಾಜ ಹಾಗೂ ಸರ್ವಜನಾಂಗದ ಶಾಂತಿಯ ತೋಟವನ್ನು ನಾವು ಪ್ರಾಯೋಗಿಕವಾಗಿ ಕಟ್ಟಬೇಕು ಎಂದರು.

ಕಡಪ ರಾಮಕೃಷ್ಣ ಮಿಷನ್ ಕಾರ್ಯದರ್ಶಿ ಸ್ವಾಮಿ ಅನುಪಮಾನಂದ ಮಾತನಾಡಿದರು. ಹಲಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಬೋಧಸ್ವರೂಪಾನಂದ, ಬಿಳಿಗಿರಿರಂಗನಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಗೌರವ ಕಾರ್ಯದರ್ಶಿ ಡಾ.ಎಚ್.ಸುದರ್ಶನ್, ನಗರಪಾಲಿಕೆ ಮಾಜಿ ಸದಸ್ಯ ಡಿ.ನಾಗಭೂಷಣ್, ಕನ್ನಡ ಪರಿಚಾರಕ ಅರವಿಂದ ಶರ್ಮ ಹಾಜರಿದ್ದರು. ಇದೇ ವೇಳೆ ರಾಮಕೃಷ್ಣ ಆಶ್ರಮದ ಆವರಣದಲ್ಲಿ ೩೦೦ ಪೌರಕಾರ್ಮಿಕರಿಗೆ ನಾರಾಯಣಪೂಜೆ ಸಲ್ಲಿಸುವ ಮೂಲಕ ಆಶ್ರಮದ ಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಆಂದೋಲನ ಡೆಸ್ಕ್

Recent Posts

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಹಿಷ ದಸರಾಗೆ ಡೇಟ್ ಫಿಕ್ಸ್!

ಮೈಸೂರು: ಅಕ್ಟೋಬರ್ 10ರಂದು ಮೈಸೂರಿನಲ್ಲಿ ಮಹಿಷ ದಸರಾ ಆಚರಣೆ ನಡೆಯಲಿದೆ. ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9 ಗಂಟೆಗೆ ಮಹಿಷ ಪ್ರತಿಮೆಗೆ…

8 hours ago

ಮೈಸೂರು ದಸರಾ 2026: ಸಿಎಂ ಡಿ.ಕೆ.ಶಿವಕುಮಾರ್‌ಗೆ ಅಧಿಕೃತ ಆಹ್ವಾನ

ಬೆಂಗಳೂರು: ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…

8 hours ago

ಕಾಡಾನೆಗೆ ಲಾರಿ ಡಿಕ್ಕಿ ಹೊಡೆಸಲು ಯತ್ನ: ಚಾಲಕನಿಗೆ ₹5,000 ದಂಡ

ಚಾಮರಾಜನಗರ: ಗುಂಡ್ಲುಪೇಟೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ರಸ್ತೆಯಲ್ಲಿ ರಸ್ತೆ ದಾಟುತ್ತಿದ್ದ ಕಾಡಾನೆಯ ಮೇಲೆಯೇ ಲಾರಿ ಚಲಾಯಿಸಲು ಯತ್ನಿಸಿದ…

8 hours ago

ಅಕ್ಟೋಬರ್.‌11ಕ್ಕೆ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಕಾರ್ಯಕ್ರಮ

ಮಂಡ್ಯ: ಇದೇ ಅಕ್ಟೋಬರ್.‌11ಕ್ಕೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಕಾರ್ಯಕ್ರಮ ನಡೆಯಲಿದೆ. ದಸರಾ ಉತ್ಸವದ ಪ್ರಯುಕ್ತ ನಡೆಯಲಿರುವ…

8 hours ago

ಹನೂರು-ಪಾಲಾರ್ ರಸ್ತೆಯ ಕೌದಳ್ಳಿ ಸೇತುವೆ ಹಾನಿ: ಭಾರಿ ವಾಹನ ಸಂಚಾರಕ್ಕೆ ನಿರ್ಬಂಧ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಹನೂರು-ಪಾಲಾರ್ (ಎಲ್ಲೇಮಾಳ-ಕೌದಳ್ಳಿ) ಜಿಲ್ಲಾ ಮುಖ್ಯ…

9 hours ago

ಮೈಸೂರಿನಲ್ಲಿ ಯುವಕನ ಬರ್ಬರ ಹತ್ಯೆ..!

ಮೈಸೂರು: ಗಣೇಶ ಹಬ್ಬಕ್ಕೆ ಹಾಸನದಿಂದ ಮೈಸೂರಿಗೆ ಬಂದಿದ್ದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. 20 ವರ್ಷದ ಗೌರವ್‌…

10 hours ago