ಮೈಸೂರು ನಗರ

ನೀರನ್ನು ಜವಾಬ್ದಾರಿಯಿಂದ ಬಳಸಿ: ನಾರಾಯಣಗೌಡ

ಮೈಸೂರು: ನೀರಿಲ್ಲದೆ ಜೀವವಿಲ್ಲ ಹಾಗಾಗಿ ನಾವೆಲ್ಲರೂ ನೀರನ್ನು ಬಹಳ ಜವಾಬ್ದಾರಿಯಿಂದ ಬಳಸಬೇಕು ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣಗೌಡ ಹೇಳಿದರು.

ನಗರದ ನಜರ್‌ಬಾದ್‌ನ ಖಾಸಗಿ ಹೋಟೆಲ್‌ ನಲ್ಲಿ ಅಪೂರ್ವ ಸ್ನೇಹ ಬಳಗದ ವತಿಯಿಂದ ಶನಿವಾರ ವಿಶ್ವ ಜಲ ದಿನಾಚರಣೆ ಅಂಗವಾಗಿ ಹೋಟೆಲ್‌ಗಳಲ್ಲಿ ನೀರಿನ ಮಹತ್ವದ ಜಾಗೃತಿಯುಳ್ಳ ಕರ ಪತ್ರವನ್ನು ಅಂಟಿಸಿ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಹಕರು ನೀರನ್ನು ಹಿತಮಿತವಾಗಿ ಬಳಸುವ ಮೂಲಕ ಸಂರಕ್ಷಿಸಬೇಕೆಂದು ಮನವಿ ಮಾಡಿದರು.

ನೀರಿನ ಮಹತ್ವ ಮೂಡಿಸಬೇಕಾದದ್ದು ಹೋಟೆಲ್‌ಗಳ ಹೊಣೆಗಾರಿಕೆಯೂ ಹೌದು. ದರ ಪಟ್ಟಿಯನ್ನು ಪ್ರಕಟಿಸಿದಂತೆ ನೀರಿನ ಮಹತ್ವದ ಬಗ್ಗೆ ಹೋಟೆಲ್‌ಗಳು ಅರಿವು ಮೂಡಿಸುವ ಹೆಜ್ಜೆ ಇಡಬೇಕಾಗಿದೆ. ಗ್ರಾಹಕರು ಏನಾದರೂ ಅಂದು ಕೊಳ್ಳಲಿ ನೀರನ್ನು ಮಿತವಾಗಿ ಬಳಸಿ ಎಂಬಂತಹ ಜಾಗೃತಿಯ ಬರಹಗಳು ಹೋಟೆಲ್ ಗೋಡೆಗಳಲ್ಲಿ ಕಾಣಿಸುವಂತೆ ಪ್ರಕಟಿಸುವುದು ಒಳಿತು ಎಂದರು.

ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಸುರೇಶ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ಜತ್ತಿ ಪ್ರಸಾದ್, ಮಹಾನ್ ಶ್ರೇಯಸ್, ಎಸ್.ಎನ್ ರಾಜೇಶ್, ರಾಕೇಶ್ ಹಾಜರಿದ್ದರು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಶಾಲಾ ಮಕ್ಕಳ ಬ್ಯಾಗ್ ಹೊರೆ ತಗ್ಗಿಸಿ

ಶಾಲಾ ಮಕ್ಕಳು ಭಾರವಾದ ಪುಸ್ತಕಗಳ ಬ್ಯಾಗ್ ಹೊರಲಾರದೆ ತ್ರಾಸದಿಂದಲೇ ಹೊತ್ತುಕೊಂಡು ನಡೆಯುವ ದೃಶ್ಯ ಈಗ ಎಲ್ಲೆಡೆ ಕಂಡುಬರುತ್ತದೆ. ಬ್ಯಾಗ್‌ನಲ್ಲಿ ಪಠ್ಯ…

38 mins ago

ಓದುಗರ ಪತ್ರ: ಉದ್ಯೋಗ ನೇಮಕಾತಿ ಯಾವಾಗ?

ಸರ್ಕಾರ ಅಧಿಸೂಚನೆ ಹೊರಡಿಸುವುದು ಯಾವಾಗ? ಉದ್ಯೋಗ ನೇಮಕಾತಿ ಯಾವಾಗ? ಇದು ಸಾವಿರಾರು ಉದ್ಯೋಗ ಆಕಾಂಕ್ಷಿಗಳ ಪ್ರಶ್ನೆ. ಇದು ಕಳೆದ ಹಲವು…

39 mins ago

ಓದುಗರ ಪತ್ರ: ಉದ್ಯೋಗ ವಯೋಮಿತಿ ಹೆಚ್ಚಳ ಸ್ವಾಗತಾರ್ಹ

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ಕಾರಿ ನೌಕರಿ ಪಡೆಯಲು ಇದ್ದ ವಯೋಮಿತಿಯನ್ನು ಐದು ವರ್ಷ ಹೆಚ್ಚಳ ಮಾಡಿ…

41 mins ago

ಇಂದು ಕೇರಳ ಬೈತೂರು ದೇವಾಲಯದ ಪತ್ತೂಟ

ಕಾಂಗೀರ ಬೋಪಣ್ಣ ಕೊಡಗು-ಕೇರಳದ ಜನರು ಒಟ್ಟಾಗಿ ಆಚರಿಸುವ ವಿಭಿನ್ನ ಆಚರಣೆ; ವಿಶಿಷ್ಟ  ಹಬ್ಬಕ್ಕೆ  ಅಗತ್ಯ ಸಿದ್ಧತೆ  ವಿರಾಜಪೇಟೆ: ಕೇರಳ ಹಾಗೂ…

44 mins ago

ಗುಂಡ್ಲುಪೇಟೆ: ರಾಷ್ಟ್ರೀಯ ಹೆದ್ದಾರಿ ಫುಟ್‌ಪಾತ್ ಒತ್ತುವರಿ

ಮಹೇಂದ್ರ ಹಸಗೂಲಿ ಪಾದಚಾರಿಗಳು ಓಡಾಡದಂತೆ ವಿರೂಪ; ಒತ್ತುವರಿ ತೆರವಿಗೆ ಸಾರ್ವಜನಿಕರ ಆಗ್ರಹ  ಗುಂಡ್ಲುಪೇಟೆ: ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಫುಟ್‌ಪಾತ್‌ಗಳನ್ನು…

49 mins ago

ಶಾಲಾ ಮಕ್ಕಳಿಗೆ ಪಾದರಕ್ಷೆ ಭಾಗ್ಯ!

‘ವಿದ್ಯಾವಿಕಾಸ’ ಯೋಜನೆಯಡಿ ಅಗತ್ಯವಿದ್ದರೆ ಚಪ್ಪಲಿ ನೀಡಲು ಸಿದ್ಧತೆ  ಮೈಸೂರು: ‘ವಿದ್ಯಾವಿಕಾಸ’ ಯೋಜನೆಯಡಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ೧ನೇ ತರಗತಿಯಿಂದ ೧೦ನೇ…

55 mins ago