ಮೈಸೂರು ನಗರ

ಪ್ರವಾಸಕ್ಕೆ ತೆರಳಿದ್ದ ಬಸ್ ಪಲ್ಟಿ ಪ್ರಕರಣ: ಮಕ್ಕಳಿಗಾಗಿ ಮೈಸೂರಿನಲ್ಲಿ ಕಾಯುತ್ತಿರುವ ಪೋಷಕರು

ಮೈಸೂರು: ಮೈಸೂರಿನಿಂದ ಗೋಕರ್ಣಕ್ಕೆ ಪ್ರವಾಸ ಹೋಗಿದ್ದ ಶಾಲಾ ಬಸ್‌ ಪಲ್ಟಿಯಾಗಿ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 26ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸುಳೆ ಮುರ್ಕಿ ಕ್ರಾಸ್‌ ಬಳಿ ಭಾನುವಾರ ಸಂಜೆ ನಡೆದಿದೆ.

ಮೈಸೂರಿನ ತರಳಬಾಳು ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳನ್ನು ಕರೆ ತಂದಿದ್ದ ಬಸ್‌ ಪಲ್ಟಿಯಾಗಿದೆ. ಮೈಸೂರಿನ ಪವನ್(‌15) ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಾಳು ವಿದ್ಯಾರ್ಥಿಗಳನ್ನು ಹೊನ್ನಾವರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇನ್ನು ಪ್ರವಾಸಕ್ಕೆ ತೆರಳಿದ್ದ ಮಕ್ಕಳು ಇಂದು ಸಂಜೆಯ ವೇಳೆಗೆ ಮೈಸೂರಿಗೆ ಆಗಮಿಸುವ ಸಾಧ್ಯತೆಯಿದೆ. ಪೊಲೀಸರ ಮಾಹಿತಿ ಪ್ರಕಾರ ಪೋಸ್ಟ್ ಮಾರ್ಟಮ್ ಆದ ನಂತರದಲ್ಲಿ ಎಲ್ಲಾ ಮಕ್ಕಳು ಅಲ್ಲಿಂದ ಹೊರಡುತ್ತಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಸದ್ಯ ಶಾಲೆಯ ಮುಂಭಾಗ ಪೋಷಕರು ಆಗಮಿಸಿದ್ದಾರೆ.

ಆಂದೋಲನ ಡೆಸ್ಕ್

Recent Posts

ಕೋಲ್ಕತ್ತಾ ದುರ್ಗಾಪೂಜೆ ಪೆಂಡಾಲ್‌ನಲ್ಲಿ ಕಾಲ್ತುಳಿತ: ಸಾವಿನ ಸಂಖ್ಯೆ 19ಕ್ಕೆ ಏರಿಕೆ

ಕೋಲ್ಕತ್ತಾ: ದುರ್ಗಾಪೂಜೆ ಸಂಭ್ರಮದ ನಡುವೆ ಭೀಕರ ದುರಂತ ಸಂಭವಿಸಿದೆ. ಉತ್ತರ ಕೋಲ್ಕತ್ತಾದ ಚೋರ್‌ಬಗಾನ್‌ನ ಜನಪ್ರಿಯ ದುರ್ಗಾಪೂಜೆ ಪೆಂಡಾಲ್‌ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ…

2 hours ago

ಪಾಣಾಜೆಯಲ್ಲಿ ಅತ್ಯಧಿಕ ಮಳೆ: 16.7 ಸೆಂಟಿಮೀಟರ್ ದಾಖಲು!

ದಕ್ಷಿಣ ಕನ್ನಡ: ಜಿಲ್ಲೆಯ ಪುತ್ತೂರು ತಾಲೂಕಿನ ಪಾಣಾಜೆಯಲ್ಲಿ ಭಾರೀ ಮಳೆಯಾಗಿದ್ದು, ರಾಜ್ಯದಲ್ಲೇ ಅತ್ಯಧಿಕ 16.7 ಸೆಂಟಿಮೀಟರ್ ಮಳೆ ದಾಖಲಾಗಿದೆ. ಶನಿವಾರ…

2 hours ago

ಅಕ್ರಮ ಕೇರಳ ಲಾಟರಿ ಮಾರಾಟ: ಓರ್ವ ಬಂಧನ

ಗುಂಡ್ಲುಪೇಟೆ: ಅಕ್ರಮವಾಗಿ ಕೇರಳ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಗುಂಡ್ಲುಪೇಟೆ ಠಾಣೆ ಪೊಲೀಸರು ಬಂಧಿಸಿ, ಲಾಟರಿ ಟೆಕೆಟ್‌ಗಳನ್ನು ವಶಕ್ಕೆ…

5 hours ago

ಮೈಸೂರಿನ ಜೆಕೆ ಮೈದಾನದಲ್ಲಿ ಶ್ವಾನಗಳ ಕಲರವ: ಗಮನ ಸೆಳೆದ ವೈವಿಧ್ಯಮಯ ತಳಿಗಳು

ಮೈಸೂರು: ಇಲ್ಲಿನ ಜೆಕೆ ಮೈದಾನದಲ್ಲಿ ಆಯೋಜಿಸಿರುವ ಶ್ವಾನ ಪ್ರದರ್ಶನವು ಶ್ವಾನಪ್ರಿಯರ ಗಮನ ಸೆಳೆಯುತ್ತಿದೆ. ಪ್ರದರ್ಶನದಲ್ಲಿ 50ಕ್ಕೂ ಹೆಚ್ಚು ತಳಿಗಳ ಸಾವಿರಕ್ಕೂ…

5 hours ago

ಹವಾಮಾನ ವೈಪರೀತ್ಯಕ್ಕೆ ದಸರಾ ಏರ್ ಶೋ ಮೊಟಕು: ಪ್ರೇಕ್ಷಕರಿಗೆ ನಿರಾಸೆ

ಮೈಸೂರು: ದಸರಾದ ಏರ್ ಶೋ ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದ ಸಾವಿರಾರು ಪ್ರೇಕ್ಷಕರಿಗೆ ಹವಾಮಾನ ವೈಪರೀತ್ಯ ನಿರಾಸೆ ಉಂಟುಮಾಡಿದೆ. ಭಾರತೀಯ ವಾಯುಪಡೆಯ…

6 hours ago

ಓದುಗರ ಪತ್ರ: ಹೆಚ್‌ಡಿಕೆಯವರೇ, ಟೀಕೆ ಮಾಡುವಾಗ ಎಚ್ಚರಿಕೆ ಇರಬೇಕಲ್ಲವೇ?

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಏಕವಚನ…

7 hours ago