ಮೈಸೂರು ನಗರ

ತಂಬಾಕು ಬೆಳೆಗಾರರ ಸಮಸ್ಯೆ: ಜಿಎಸ್‌ಟಿ ಮೂಲಕ ತೆರಿಗೆ ಹಾಕುವ ಕೇಂದ್ರವು ಪರಿಹಾರ ನೀಡಲಿ ಎಂದ ಎಂ.ಲಕ್ಷ್ಮಣ್

ಮೈಸೂರು: ಕಾರ್ಪೋರೇಷನ್ ನೀರಿನ ದರ ಏರಿಕೆ ಮಾಡುತ್ತಿದ್ದಾರೆ ಎಂದು ಅರ್ಧ ಪೈಸೆ ಜಾಸ್ತಿಯಾಗಿರುವುದಕ್ಕೆ ಹೋರಾಟ ಮಾಡುತ್ತಾರೆ. ಆದರೆ ರೈತರ ಸಮಸ್ಯೆಗಳ ಕುರಿತು ಹೋರಾಟ ಮಾಡುತ್ತಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಂದು ಲೀಟರ್ ಬಾಟಲಿಗೆ 20 ರೂ ಕೊಟ್ಟು ಕುಡಿತೀರ. ಒಂದು ಸಾವಿರ ಟ್ರೀಟೆಡ್ ಲೀಟರ್ ನೀರಿನ ಬೆಲೆ 5 ರೂ. ಮಾತ್ರ. ನಿಮ್ಮ ಮನೆ ಒಳಗೆ ಬರೋದಕ್ಕೆ ಒಂದು ಲೀಟರ್‌ಗೆ 0.15 ಪೈಸೆ ಮಾತ್ರ ಏರಿಕೆ ಮಾಡಿದ್ದಾರೆ. ಕಳೆದ 15 ವರ್ಷಗಳಿಂದ ಜಾಸ್ತಿ ಮಾಡಿರಲಿಲ್ಲ. ಕಾರ್ಪೋರೇಷನ್ ಈ ಏರಿಕೆಯಿಂದ ಬರೋದೆ ಕೇವಲ 35 ಲಕ್ಷ ಅಷ್ಟೇ. ಶೇ 30% ಏರಿಕೆ ಮಾಡಿದ್ದಾರೆ ಅಂತ ಇಲ್ಲ ಸಲ್ಲದ ಆರೋಪವನ್ನು ಬಿಜೆಪಿಗರು ಮಾಡುತ್ತಾರೆ. ಟೋಲ್ ನಲ್ಲಿ ಪ್ರತಿ ವರ್ಷ ಏರಿಕೆ ಮಾಡುತ್ತಾನೆ ಇದ್ದಾರೆ. ಅದರ ಬಗ್ಗೆ ಕೇಳೋರು ಯಾರು ಇಲ್ಲ. ಬಿಜೆಪಿ ನಾಯಕರು ಉಸಿರು ಬಿಡುತ್ತಿಲ್ಲ. ತಂಬಾಕು ಬೆಳೆಗಾರರ ಕಷ್ಟ ಕೇಳುತ್ತಿಲ್ಲ. ರೈತರ ಸಮಸ್ಯೆಗಳ ಕುರಿತು ಹೋರಾಟ ಮಾಡುತ್ತಿಲ್ಲ. ಕಾರ್ಪೋರೇಷನ್ ನೀರಿನ ದರ ಏರಿಕೆ ಮಾಡುತ್ತಿದ್ದಾರೆ ಎಂದು ಅರ್ಧ ಪೈಸೆ ಜಾಸ್ತಿಯಾಗಿರುವುದಕ್ಕೆ ಹೋರಾಟ ಮಾಡುತ್ತಾರೆ. ಕೇಂದ್ರ ಸಚಿವ ಪಿಯೂಶ್ ಗೋಯಲ್ ಬಳಿ ಹೋಗಿ ಜೆಡಿಎಸ್ ನಾಯಕರು ಫೋಟೋ ತೆಗೆಸಿಕೊಂಡು ಬಂದ್ರು ಏನೂ ಪ್ರಯೋಜನ ಆಗಿಲ್ಲ. ಅವರು ಭೇಟಿ ಮಾಡಿ ಬಂದಾಗಿನಿಂದ ಇನ್ನೂ ಇಳಿಕೆಯಾಗಿದೆ. ಹಾಗಾದರೆ ಇವರು ಕೇಂದ್ರ ಸಚಿವರ ಜೊತೆ ಏನು ಮಾತನಾಡಿದ್ರು ಗೊತ್ತಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಆಂದೋಲನ ಡೆಸ್ಕ್

Recent Posts

ಕಾಂಗ್ರೆಸ್ ಪಕ್ಷ ಮಹಿಳಾ ಮೀಸಲಾತಿಗೆ ವಿರೋಧಿಸಲ್ಲ: ಗೃಹ ಸಚಿವ ಪರಮೇಶ್ವರ್

ಬೆಂಗಳೂರು- ಕಾಂಗ್ರೆಸ್ ಪಕ್ಷ ಮಹಿಳಾ ಮೀಸಲಾತಿಗೆ ವಿರೋಧ ಇಲ್ಲ. ಕೇಂದ್ರ ಸರ್ಕಾರ ಲೋಕಸಭೆಯ ಸ್ಥಾನಗಳ ಸಂಖ್ಯೆ ಹೆಚ್ಚಿಸುವುದನ್ನು ಮಹಿಳಾ ಮೀಸಲಾತಿಯೊಂದಿಗೆ…

35 mins ago

ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ರಾಬರ್ಟ್‌ ವಾದ್ರಾ

ಉಡುಪಿ: ಶ್ರೀಕೃಷ್ಣ ಮಂದಿರಕ್ಕೆ ಸಂಸದೆ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್‌ ವಾದ್ರಾ ಭೇಟಿ ನೀಡಿದರು. ಅವರ ಜನ್ಮದಿನದ ಪ್ರಯುಕ್ತ ಕೆಲವು…

3 hours ago

ಇಂದು ರಾತ್ರಿ ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾತ್ರಿ 8.30ಕ್ಕೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಕುರಿತ…

3 hours ago

ಹಾಸನ: ಮೂರು ದಿನಗಳ ಆಪರೇಷನ್‌ ಯಶಸ್ವಿ: ನರಹಂತಕ ಕಾಡಾನೆ ಸೆರೆ

ಹಾಸನ: ಬೇಲೂರು ತಾಲ್ಲೂಕಿನ ಕಾನಳ್ಳಿ ಅರಣ್ಯ ಪ್ರದೇಶದಲ್ಲಿದ್ದ ದೈತ್ಯಾಕಾರದ ನರಹಂತಕ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಮೂರನೇ…

3 hours ago

ಏಪ್ರಿಲ್.‌20ರಿಂದ ಸಿಎಂ ಸಿದ್ದರಾಮಯ್ಯ ಮೈಸೂರು, ಚಾಮರಾಜನಗರ ಜಿಲ್ಲಾ ಪ್ರವಾಸ

ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ಏಪ್ರಿಲ್.‌20 ಹಾಗೂ 21ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಏಪ್ರಿಲ್.‌20ರಂದು ಬೆಳಿಗ್ಗೆ ವಿಶೇಷ ವಿಮಾನದಲ್ಲಿ ಮೈಸೂರಿಗೆ…

4 hours ago

ತಿದ್ದುಪಡಿ ಮಸೂದೆಗೆ ಸೋಲು: ಕರಾಳ ಇತಿಹಾಸ ಮರುಕಳಿಸಲಿದೆ ಎಂದ ಎಚ್.ಡಿ.ಕುಮಾರಸ್ವಾಮಿ ಕಿಡಿ

ನವದೆಹಲಿ: ತಿದ್ದುಪಡಿ ಮಸೂದೆ ಸೋಲುವ ಮೂಲಕ ಲೋಕಸಭೆಯಲ್ಲಿ ಮೂವತ್ತು ವರ್ಷಗಳ ಹಿಂದಿನ ಕರಾಳ ಇತಿಹಾಸ ಮತ್ತೆ ಮರುಕಳಿಸಿದೆ ಎಂದು ಕೇಂದ್ರ…

4 hours ago