ಮೈಸೂರು : ಕೂಗು ಮಾರಿಗಳಿರುವುದು ರಾಜ್ಯ ಸರ್ಕಾರದಲ್ಲಿ ಅಲ್ಲ, ನಿಜವಾದ ಕೂಗುಮಾರಿ ಪ್ರತಾಪ್ ಸಿಂಹ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ.ಸುಬ್ರಹ್ಮಣ್ಯ ಲೇವಡಿ ಮಾಡಿದ್ದಾರೆ.
ಮೈಸೂರು ದಸರಾಕ್ಕೆ ಮೊದಲ ಕೂಗುಮಾರಿಯೇ ಪ್ರತಾಪ್‌ಸಿಂಹ. ಬಾನು ಮುಷ್ತಾಕ್ ಅವರ ಯಾವುದೋ ಒಂದು ವೀಡಿಯೋ ತುಣುಕನ್ನು ಹಾಕಿ ಇಡೀ ಹಿಂದೂ-ಮುಸ್ಲಿಂ ಬಾಂಧವರ ನಡುವೆ ಎತ್ತಿಕಟ್ಟುವ ಕೆಲಸ ಮಾಡಿದ್ದು ಇದೇ ಪ್ರತಾಪ್ ಸಿಂಹ. ಹೈಕೋರ್ಟ್, ಸುಪ್ರೀಂಕೋರ್ಟ್‌ನಲ್ಲೂ ಛೀಮಾರಿ ಹಾಕಿಸಿಕೊಂಡರು. ಜನರ ಕಾಯಕ ಮಾಡುತ್ತಿರುವ ಸಿದ್ದರಾಮಯ್ಯನವರ ಜನಪರ ಕೆಲಸಗಳು ಪ್ರತಾಪ್ ಸಿಂಹ ಅವರಿಗೆ ಕಾಣುತ್ತಿಲ್ಲ. ಹೀಗಾಗಿ ಪದೇ ಪದೇ ಮೈಸೂರಿನಲ್ಲಿ ತಾನು ಬದುಕಿದ್ದೇನೆ ಎಂಬುದನ್ನು ತೋರಿಸಲು ಟೀಕೆ ಮಾಡುತ್ತಿರುವ ನಿಜವಾದ ಕೂಗುಮಾರಿ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ:-ಸಿಎಂ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟದ್ದು : ಸಚಿವ ಚಲುವರಾಯಸ್ವಾಮಿ
ಮೈಸೂರಿನಲ್ಲಿ ಬಲೂನ್ ಮಾರುವ ಬಾಲಕಿ ಮೇಲೆ ನಡೆದದ್ದು ಘೋರ ಕೃತ್ಯ, ಅದನ್ನು ಯಾರೂ ಸಹಿಸಲ್ಲ. ಕೃತ್ಯ ಎಸಗಿದ ಕಿಡಿಗೇಡಿಯನ್ನ ಗಲ್ಲಿಗೇರಿಸಬೇಕು ಎಂಬುದೂ ನಮ್ಮ ಒತ್ತಾಯವೂ ಆಗಿದೆ. ಈ ಘಟನೆ ದಸರಾ ಮುಗಿದ ಮೇಲೆ ಆಗಿದೆ. ಇದನ್ನು ನಾಡಹಬ್ಬಕ್ಕೆ ಹೋಲಿಸಿ ಧಕ್ಕೆ ತರುವುದು ಸಲ್ಲದು. ಅಲ್ಲದೇ ಘಟನೆಗೆ ಸರ್ಕಾರವನ್ನು ಹೊಣೆ ಮಾಡುವುದು ಸರಿಯಲ್ಲ. ಎನ್‌ಡಿಎ ಅಧಿಕಾರದಲ್ಲಿ ಇರುವ ಬಿಹಾರದಲ್ಲಿ, ಬಿಜೆಪಿ ಇರುವ ಉತ್ತರ ಪ್ರದೇಶದಲ್ಲಿ ಪ್ರತಿದಿನ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ತಾಕತ್ತಿದ್ದರೆ ಹೋಗಿ ಯೋಗಿ ಅವರ ವಿರುದ್ಧ ಪ್ರತಾಪ್‌ಸಿಂಹ ಮಾತನಾಡಲಿ ಎಂದು ಸವಾಲು ಹಾಕಿದ್ದಾರೆ.
ಇನ್ನು ನಳಪಾಕ್‌ನಲ್ಲಿ ಕಾಫಿ ಕುಡಿಯಲು, ಮೈಲಾರಿ ದೋಸೆ ತಿನ್ನಲು ಅಷ್ಟೇ ಪೊಲೀಸರ ಬಳಕೆ ಮಾಡುತ್ತಿ ದ್ದಾರೆ ಎನ್ನುವ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಪೊಲೀಸ್ ಭದ್ರತೆ ಕೊಡುವುದು ಸಿದ್ದರಾಮಯ್ಯ ಅಂತ ಅಲ್ಲ. ಮುಖ್ಯಮಂತ್ರಿಗಳು ಯಾರಿದ್ದರೂ ಅವರಿಗೆ ಸೂಕ್ತ ಭದ್ರತೆ ಕೊಟ್ಟೇ ಕೊಡುತ್ತಾರೆ. ಕಾರ್ಯಕ್ರಮ ನಿಮಿತ್ತ ಬಂದಾಗ ಊಟ, ತಿಂಡಿ ಮಾಡಲೇಬೇಕಲ್ಲವೇ? ಮೋದಿ ಅವರು ಮೈಸೂರಿನ ರ‍್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾಗ ಎಷ್ಟು ಖರ್ಚಾಗಿತ್ತು? ಆಗ ಎಷ್ಟು ಜನ ಭದ್ರತೆಗೆ ಇದ್ದರು? ಇದ್ಯಾವುದು ತಲೆಯಲ್ಲಿ ಇಲ್ವೆ? ಮೋದಿ ಅವರನ್ನೂ ಹೀಗೇ ಪ್ರಶ್ನೆ ಮಾಡಲು ಪ್ರತಾಪ್‌ಸಿಂಹಗೆ ಧೈರ್ಯ ಇದೆಯಾ ? ಎಂದು ಕುಟುಕಿದ್ದಾರೆ.
ಮಹಾದೇಶ್ ಎಂ ಗೌಡ ಹನೂರು: ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟಕ್ಕೆ ಸಂಜೆ 6 ಗಂಟೆಯಿಂದ ಬೆಳಗಿನ ಜಾವ 6…
ಬೆಂಗಳೂರು: ವಿಧಾನಮಂಡಲ ಜಂಟಿ ಅಧಿವೇಶನ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಡುವೆ ತೀವ್ರ…
ಬೆಂಗಳೂರು: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. ಈ…
ಮೈಸೂರು: ರಾಜ್ಯದ ಉಭಯ ಸದನದಲ್ಲಿ ನಿನ್ನೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಸರ್ಕಾರದ ಭಾಷಣವನ್ನು ಮೊಟಕುಗೊಳಿಸಿ ಹೊರ ನಡೆದ ನಡೆಯನ್ನು…
ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ಬೈಕ್ ಟ್ಯಾಕ್ಸಿಗಳಿಗೆ ಲೈಸೆನ್ಸ್ ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ ತೀರ್ಪು ನೀಡಿದೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು…
ಹನೂರು: ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಮಾದಪ್ಪನ ದರ್ಶನ ಪಡೆದು ವಾಪಸ್ ಬರುತ್ತಿದ್ದ ವೇಳೆ ಅಪರಿಚಿತ ವಾಹನವೊಂದು ಬೈಕ್‌ಗೆ ಡಿಕ್ಕಿಯಾದ…