ಮೈಸೂರು ನಗರ

ರಾಜ್ಯದ ಸಾಲ ಹೆಚ್ಚು ಮಾಡಿದ್ದೇ ಸಿದ್ದರಾಮಯ್ಯ ಸಾಧನೆ: ಮಾಜಿ ಸಚಿವ ಸಾ.ರಾ.ಮಹೇಶ್‌ ವ್ಯಂಗ್ಯ

ಮೈಸೂರು: ತುಪ್ಪದ ಬೆಲೆ ಏರಿಕೆ ಮಾಡಿರುವ ಪರಿಣಾಮ ರೈತರ ಹಾಲಿನ ಪ್ರೋತ್ಸಾಹಧನ ಕೂಡ ಹೆಚ್ಚಳ ಮಾಡಬೇಕು ಎಂದು ಮಾಜಿ ಸಚಿವ ಸಾ.ರಾ.ಮಹೇಶ್‌ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಎಸ್‌ಟಿ ಇಳಿಕೆ ಬಳಿಕ ನಂದಿನಿ ತುಪ್ಪದ ಬೆಲೆ ಏರಿಕೆ ಮಾಡಲಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಬಡವರು ಮಧ್ಯಮ ವರ್ಗದವರು ಬದುಕೋದು ಕಷ್ಟ. ಹೀಗಿರುವಾಗ ರೈತರ ಹಾಲಿನ ಪ್ರೋತ್ಸಾಹಧನವನ್ನು ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.

ಇನ್ನು ನಮ್ಮ ಆಡಳಿತದಲ್ಲಿ ಉತ್ತಮ ಆಡಳಿತ ಕೊಟ್ಟೆದ್ದೇವೆ. ಈಗ ನಿಮ್ಮ ಅವಧಿಯಲ್ಲಿ ಉತ್ತಮ ಆಡಳಿತ ಕೊಡಿ. ಸಿದ್ದರಾಮಯ್ಯರನ್ನ ಅವರ ಹಿಂಬಾಲಕರು ದೇವರಾಜ ಅರಸು ಮೀರಿಸಿದವರು, ಮೈಸೂರು ಮಹಾರಾಜರಿಗಿಂತ ಅಭಿವೃದ್ಧಿ ಮಾಡಿದೋರು ಅಂತಾರೆ. 2ನೇ ಬಾರಿಗೆ ಸಿಎಂ ಆಗಿ ದಾಖಲೆ ಆಗಿದ್ದೀರಾ. ಅದೇ ರೀತಿ ಅತೀ ಹೆಚ್ಚು ರಾಜ್ಯದ ಸಾಲ ಮಾಡಿದ ಕೀರ್ತಿ ನಿಮಗೆ ಸಲ್ಲುತ್ತದೆ ಎಂದು ವ್ಯಂಗ್ಯವಾಡಿದರು.

ಇದನ್ನು ಓದಿ: ನಂದಿನಿ ತುಪ್ಪ ದರ ಏರಿಕೆಯಿಂದ ಹಾಲು ಉತ್ಪಾದಕರಿಗೆ ಅನುಕೂಲ: ಡಿಸಿಎಂ ಡಿ.ಕೆ.ಶಿವಕುಮಾರ್‌

ಇನ್ನು ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಅನುದಾನ ಕೊಟ್ಟಿದ್ದರು. ಮಂಜೂರಾದ ಎಲ್ಲಾ ಹಳ್ಳಿಗಳಿಗೂ ಹೋಗಿ ನಾನು ಭೂಮಿ ಪೂಜೆ ಮಾಡಿದ್ದೆ. ಆ ವೇಳೆ ಚುನಾವಣೆ ನೀತಿಸಂಹಿತೆ ಜಾರಿ ಆಯ್ತು. ಗುದ್ದಲಿಪೂಜೆ ಟೆಂಡರ್ ಆದ ಕಾಮಗಾರಿ ಕ್ಯಾನ್ಸಲ್ ಮಾಡಿ, ಮತ್ತೆ ಅದೇ ಕಾಮಗಾರಿಗೆ ನೀವು ಭೂಮಿಪೂಜೆ ಮಾಡಲು ಹೆಲಿಕಾಪ್ಟರ್‌ನಲ್ಲಿ ಬಂದಿದ್ದು. ಈ ಎಲ್ಲಾ ಕಾಮಗಾರಿಗಳನ್ನ ಲ್ಯಾಂಡ್ ಆರ್ಮಿಗೆ ಯಾಕೆ ಕೊಟ್ರಿ. ಭ್ರಷ್ಟಾಚಾರ ಮುಕ್ತ ಸರ್ಕಾರ ಅಂತ ಹೇಳೋ ನೀವು ಈ ಕಾಮಗಾರಿಯನ್ನು ಯಾಕೆ ಲ್ಯಾಂಡ್ ಆರ್ಮಿಗೆ ಕೊಟ್ಟಿದ್ದು ಹೇಳಿ. ಜನರ ಕಣ್ಣೊರೆಸುವ ತಂತ್ರ ಮಾಡಬೇಡಿ. 2 ಸಾವಿರ ಗೃಹಲಕ್ಷ್ಮಿ ಕೊಡ್ತಿರೋದ್ರಿಂದ ಮಹಿಳೆಯರು ಸುಮ್ಮನಿದ್ದಾರೆ. ಅಧಿಕಾರ ವಿಕೇಂದ್ರಿಕರಣ ಆಗಬೇಕಂದ್ರೆ ಕೂಡಲೇ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸಿ ಎಂದು ಆಗ್ರಹಿಸಿದರು.

ಇನ್ನು ಮುಂದುವರಿದು ಮಾತನಾಡಿದ ಅವರು, ಬೃಹತ್ ಮೈಸೂರು ಮಾಡುತ್ತಿರುವುದು ಸಂತೋಷದ ವಿಚಾರ. ಸರ್ಕಾರ ಬಂದು ಎರಡೂವರೆ ವರ್ಷದ ನಂತರ ಬೃಹತ್ ಮೈಸೂರು ಮಾಡಲು ಮುಂದಾಗಿದ್ದಾರೆ. ನಗರ ಪಾಲಿಕೆ ಚುನಾವಣೆ ನಡೆದು ಎರಡು ವರ್ಷ ಕಳೆದಿದೆ. ಜಿಲ್ಲಾ ಪಂಚಾಯತಿಯಲ್ಲಿ 15ನೇ ಹಣಕಾಸು ಆಯೋಗದಿಂದ ಹಣ ಬರುತ್ತಿತ್ತು. ಚುನಾವಣೆ ನಡೆಯದ ಕಾರಣ ಸಾವಿರಾರು ಕೋಟಿ ಬರುವುದು ನಿಂತಿದೆ.

ಇದನ್ನು ಓದಿ: ಜನತೆಗೆ ಬಿಗ್‌ ಶಾಕ್‌ ಕೊಟ್ಟ ಕೆಎಂಎಫ್:‌ ನಂದಿನಿ ತುಪ್ಪದ ದರ 90 ರೂ ಏರಿಕೆ

ಇದರಿಂದ ಹಳ್ಳಿಗಳ ಅಭಿವೃದ್ಧಿಗೆ ಕುಂಠಿತವಾಗಿದೆ. ಮೈಸೂರು ಅಭಿವೃದ್ಧಿಗೆ ಸಾಕಷ್ಟು ಹಣ ಬರುತ್ತಿತ್ತು. ಅದು ಕೂಡ ನಿಂತು ಹೋಗಿದೆ. ಬೃಹತ್ ಮೈಸೂರು ಆದ್ರೆ ಈಗಿರುವ ಮೈಸೂರು ನಗರ ವಿಸ್ತೀರ್ಣಕ್ಕಿಂತ ಹೆಚ್ಚಾಗುತ್ತದೆ. ಇದೆಲ್ಲಾ ಆಗಬೇಕಾದ್ರೆ ಇನ್ನೂ ಎರಡು ವರ್ಷಗಳು ಬೇಕು. ಈ ಮೂಲಕ‌ ನಗರ ಪಾಲಿಕೆ ಚುನಾವಣೆ ನಡೆಯುವುದಿಲ್ಲ. ಬೃಹತ್ ಮೈಸೂರಿಗೆ ಮೊದಲು ಹಣ ಬಿಡುಗಡೆ ಮಾಡಿ. ಬೃಹತ್ ಮೈಸೂರಿಗೆ ಮಾಡಿರುವ ಪ್ಲ್ಯಾನ್‌ನಲ್ಲಿ ಸಾಕಷ್ಟು ಹಳ್ಳಿಗಳನ್ನು ಕೈಬಿಡಲಾಗಿದೆ. ಬೃಹತ್‌ ಮೈಸೂರು ಮಾಡುತ್ತಿರುವುದು ಅವೈಜ್ಞಾನಿಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಂದೋಲನ ಡೆಸ್ಕ್

Recent Posts

ತಿರುವಿನಲ್ಲಿ ಉರುಳಿಬಿದ್ದ ಲಾರಿ: ತಪ್ಪಿದ ಭಾರೀ ಅನಾಹುತ

ಕೊಡಗು: ಕೊಡಗು ಜಿಲ್ಲೆ ಶನಿವಾರಸಂತೆ ಬಳಿಯ ಗುಡುಗಳಲೆಯಲ್ಲಿ ಸಿಮೆಂಟ್ ತುಂಬಿದ್ದ ಲಾರಿ ಉರುಳಿಬಿದ್ದಿದೆ. ಶನಿವಾರಸಂತೆ–ಅರಕಲಗೂಡು ರಸ್ತೆಯ ಗುಡುಗಳಲೆ ತಿರುವಿನಲ್ಲಿ ಘಟನೆ…

8 hours ago

ದುಬಾರೆ ಆನೆ ಶಿಬಿರದಲ್ಲಿ19 ವರ್ಷದ ಗಂಡಾನೆ ಸಾವು

ಕುಶಾಲನಗರ: ದುಬಾರೆ ಆನೆ ಶಿಬಿರದಲ್ಲಿದ್ದ ಸುಮಾರು 19 ವರ್ಷ ಪ್ರಾಯದ ಗಂಡಾನೆಯೊಂದು ಐದು ತಿಂಗಳಿಗೂ ಹೆಚ್ಚು ಕಾಲ ನಿರಂತರ ಚಿಕಿತ್ಸೆ…

9 hours ago

ಪ್ರೀತಿಗೆ ನಿರಾಕರಣೆ: ಮೈಸೂರಿನಲ್ಲಿ ಬೆಚ್ಚಿಬೀಳಿಸಿದ ಒನ್‌ ಸೈಡ್‌ ಲವ್‌ ಕೃತ್ಯ

ಮೈಸೂರು: ಪ್ರೀತಿಗೆ ನಿರಾಕರಿಸಿದ ಪರಿಣಾಮ ಯುವಕನೋರ್ವ ಯುವತಿಯನ್ನು ತಬ್ಬಿಕೊಂಡು ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನ ವಿಜಯನಗರದ ಬಳಿ…

11 hours ago

ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣ: ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಅಧ್ಯಕ್ಷ ಶಿವಕುಮಾರ್ ಅರೆಸ್ಟ್​!

ಮಂಡ್ಯ: ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮನ್ ಮುಲ್ ಅಧ್ಯಕ್ಷ ಶಿವಕುಮಾರ್(ಶಿವಪ್ಪ)…

12 hours ago

ಭಾರೀ ಮಳೆಗೆ ರೈತರ ಬೆಳೆ ನಾಶ: ಲಕ್ಷಾಂತರ ರೂ. ನಷ್ಟ, ಮನೆ ಗೋಡೆ ಕುಸಿತ

ಹನೂರು: ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಕ್ಷೇತ್ರದ ಹಲವು ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳು ಸಂಪೂರ್ಣ ಜಲಾವೃತಗೊಂಡು ಲಕ್ಷಾಂತರ ರೂಪಾಯಿ…

13 hours ago

ಸ್ಕೂಲ್ ಬಸ್‌ ಹರಿದು ಒಂದೂವರೆ ವರ್ಷದ ಮಗು ಸಾವು

ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ರಸ್ತೆ ಬದಿ ನಿಂತಿದ್ದ ಒಂದೂವರೆ ವರ್ಷದ ಪುಟ್ಟ…

13 hours ago