ಮೈಸೂರು: ತುಪ್ಪದ ಬೆಲೆ ಏರಿಕೆ ಮಾಡಿರುವ ಪರಿಣಾಮ ರೈತರ ಹಾಲಿನ ಪ್ರೋತ್ಸಾಹಧನ ಕೂಡ ಹೆಚ್ಚಳ ಮಾಡಬೇಕು ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಎಸ್‌ಟಿ ಇಳಿಕೆ ಬಳಿಕ ನಂದಿನಿ ತುಪ್ಪದ ಬೆಲೆ ಏರಿಕೆ ಮಾಡಲಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಬಡವರು ಮಧ್ಯಮ ವರ್ಗದವರು ಬದುಕೋದು ಕಷ್ಟ. ಹೀಗಿರುವಾಗ ರೈತರ ಹಾಲಿನ ಪ್ರೋತ್ಸಾಹಧನವನ್ನು ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.
ಇನ್ನು ನಮ್ಮ ಆಡಳಿತದಲ್ಲಿ ಉತ್ತಮ ಆಡಳಿತ ಕೊಟ್ಟೆದ್ದೇವೆ. ಈಗ ನಿಮ್ಮ ಅವಧಿಯಲ್ಲಿ ಉತ್ತಮ ಆಡಳಿತ ಕೊಡಿ. ಸಿದ್ದರಾಮಯ್ಯರನ್ನ ಅವರ ಹಿಂಬಾಲಕರು ದೇವರಾಜ ಅರಸು ಮೀರಿಸಿದವರು, ಮೈಸೂರು ಮಹಾರಾಜರಿಗಿಂತ ಅಭಿವೃದ್ಧಿ ಮಾಡಿದೋರು ಅಂತಾರೆ. 2ನೇ ಬಾರಿಗೆ ಸಿಎಂ ಆಗಿ ದಾಖಲೆ ಆಗಿದ್ದೀರಾ. ಅದೇ ರೀತಿ ಅತೀ ಹೆಚ್ಚು ರಾಜ್ಯದ ಸಾಲ ಮಾಡಿದ ಕೀರ್ತಿ ನಿಮಗೆ ಸಲ್ಲುತ್ತದೆ ಎಂದು ವ್ಯಂಗ್ಯವಾಡಿದರು.
ಇದನ್ನು ಓದಿ: ನಂದಿನಿ ತುಪ್ಪ ದರ ಏರಿಕೆಯಿಂದ ಹಾಲು ಉತ್ಪಾದಕರಿಗೆ ಅನುಕೂಲ: ಡಿಸಿಎಂ ಡಿ.ಕೆ.ಶಿವಕುಮಾರ್
ಇನ್ನು ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಅನುದಾನ ಕೊಟ್ಟಿದ್ದರು. ಮಂಜೂರಾದ ಎಲ್ಲಾ ಹಳ್ಳಿಗಳಿಗೂ ಹೋಗಿ ನಾನು ಭೂಮಿ ಪೂಜೆ ಮಾಡಿದ್ದೆ. ಆ ವೇಳೆ ಚುನಾವಣೆ ನೀತಿಸಂಹಿತೆ ಜಾರಿ ಆಯ್ತು. ಗುದ್ದಲಿಪೂಜೆ ಟೆಂಡರ್ ಆದ ಕಾಮಗಾರಿ ಕ್ಯಾನ್ಸಲ್ ಮಾಡಿ, ಮತ್ತೆ ಅದೇ ಕಾಮಗಾರಿಗೆ ನೀವು ಭೂಮಿಪೂಜೆ ಮಾಡಲು ಹೆಲಿಕಾಪ್ಟರ್‌ನಲ್ಲಿ ಬಂದಿದ್ದು. ಈ ಎಲ್ಲಾ ಕಾಮಗಾರಿಗಳನ್ನ ಲ್ಯಾಂಡ್ ಆರ್ಮಿಗೆ ಯಾಕೆ ಕೊಟ್ರಿ. ಭ್ರಷ್ಟಾಚಾರ ಮುಕ್ತ ಸರ್ಕಾರ ಅಂತ ಹೇಳೋ ನೀವು ಈ ಕಾಮಗಾರಿಯನ್ನು ಯಾಕೆ ಲ್ಯಾಂಡ್ ಆರ್ಮಿಗೆ ಕೊಟ್ಟಿದ್ದು ಹೇಳಿ. ಜನರ ಕಣ್ಣೊರೆಸುವ ತಂತ್ರ ಮಾಡಬೇಡಿ. 2 ಸಾವಿರ ಗೃಹಲಕ್ಷ್ಮಿ ಕೊಡ್ತಿರೋದ್ರಿಂದ ಮಹಿಳೆಯರು ಸುಮ್ಮನಿದ್ದಾರೆ. ಅಧಿಕಾರ ವಿಕೇಂದ್ರಿಕರಣ ಆಗಬೇಕಂದ್ರೆ ಕೂಡಲೇ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸಿ ಎಂದು ಆಗ್ರಹಿಸಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಬೃಹತ್ ಮೈಸೂರು ಮಾಡುತ್ತಿರುವುದು ಸಂತೋಷದ ವಿಚಾರ. ಸರ್ಕಾರ ಬಂದು ಎರಡೂವರೆ ವರ್ಷದ ನಂತರ ಬೃಹತ್ ಮೈಸೂರು ಮಾಡಲು ಮುಂದಾಗಿದ್ದಾರೆ. ನಗರ ಪಾಲಿಕೆ ಚುನಾವಣೆ ನಡೆದು ಎರಡು ವರ್ಷ ಕಳೆದಿದೆ. ಜಿಲ್ಲಾ ಪಂಚಾಯತಿಯಲ್ಲಿ 15ನೇ ಹಣಕಾಸು ಆಯೋಗದಿಂದ ಹಣ ಬರುತ್ತಿತ್ತು. ಚುನಾವಣೆ ನಡೆಯದ ಕಾರಣ ಸಾವಿರಾರು ಕೋಟಿ ಬರುವುದು ನಿಂತಿದೆ.
ಇದನ್ನು ಓದಿ: ಜನತೆಗೆ ಬಿಗ್ ಶಾಕ್ ಕೊಟ್ಟ ಕೆಎಂಎಫ್: ನಂದಿನಿ ತುಪ್ಪದ ದರ 90 ರೂ ಏರಿಕೆ
ಇದರಿಂದ ಹಳ್ಳಿಗಳ ಅಭಿವೃದ್ಧಿಗೆ ಕುಂಠಿತವಾಗಿದೆ. ಮೈಸೂರು ಅಭಿವೃದ್ಧಿಗೆ ಸಾಕಷ್ಟು ಹಣ ಬರುತ್ತಿತ್ತು. ಅದು ಕೂಡ ನಿಂತು ಹೋಗಿದೆ. ಬೃಹತ್ ಮೈಸೂರು ಆದ್ರೆ ಈಗಿರುವ ಮೈಸೂರು ನಗರ ವಿಸ್ತೀರ್ಣಕ್ಕಿಂತ ಹೆಚ್ಚಾಗುತ್ತದೆ. ಇದೆಲ್ಲಾ ಆಗಬೇಕಾದ್ರೆ ಇನ್ನೂ ಎರಡು ವರ್ಷಗಳು ಬೇಕು. ಈ ಮೂಲಕ ನಗರ ಪಾಲಿಕೆ ಚುನಾವಣೆ ನಡೆಯುವುದಿಲ್ಲ. ಬೃಹತ್ ಮೈಸೂರಿಗೆ ಮೊದಲು ಹಣ ಬಿಡುಗಡೆ ಮಾಡಿ. ಬೃಹತ್ ಮೈಸೂರಿಗೆ ಮಾಡಿರುವ ಪ್ಲ್ಯಾನ್‌ನಲ್ಲಿ ಸಾಕಷ್ಟು ಹಳ್ಳಿಗಳನ್ನು ಕೈಬಿಡಲಾಗಿದೆ. ಬೃಹತ್ ಮೈಸೂರು ಮಾಡುತ್ತಿರುವುದು ಅವೈಜ್ಞಾನಿಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…
ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…
ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…